ಇತೀರಿತಂ ತತ್ ಪವನಾತ್ಮಜಸ್ಯ ಶ್ರುತ್ವಾsತಿಭೀತಾ ಧೃತಮೂಕಭಾವಾಃ ।
ಸರ್ವೇsನುಜಗ್ಮುಸ್ತಮಥಾದ್ರಿಮುಖ್ಯಂ ಮಹೇನ್ದ್ರಮಾಸೇದುರಗಾಧಭೋಧಾಃ ॥೬.೪೬॥
ಹನುಮಂತನ ಮಾತ
ಕೇಳಿದ ಕಪಿಗಳಾದರು ಭಯಭೀತ,
ಮೂಕಭಾವರಾದರು
ಕಪಿಗಳೆಲ್ಲಾ ತಾರಾದಿಗಳ ಸಮೇತ.
ಅನುಸರಿಸಿದರು
ಹನುಮನ ಆಡದೇ ಮತ್ತೊಂದು ಮಾತ,
ಹನುಮಂತನೊಡಗೂಡಿ
ತಲುಪಿದರು ಮಹೇಂದ್ರ ಪರ್ವತ.
ನಿರೀಕ್ಷ್ಯ ತೇ ಸಾಗರಮಪ್ರಧೃಷ್ಯಮಪಾರಮೇಯಂ ಸಹಸಾ ವಿಷಣ್ಣಾಃ ।
ದೃಢಂ ನಿರಾಶಾಶ್ಚ ಮತಿಂ ಹಿ ದಧ್ರುಃ ಪ್ರಾಯೋಪವೇಶಾಯ ತಥಾ ಚ ಚಕ್ರುಃ
॥೬.೪೭॥
ಅಪಾರವಾದ ದಾಟಲಾಗದ
ಸಾಗರ ಕಂಡ ಕಪಿಸೇನೆ,
ದೃಢವಾಗಿ
ಆವರಿಸಿತವರಿಗೆಲ್ಲ ನಿರಾಸೆಯೆಂಬ ಬೇನೆ.
ವಿಷಣ್ಣರಾದ
ಕಪಿವೃಂದದಿಂದ ಪ್ರಾಯೋಪ್ರವೇಶದ ಸಂಕಲ್ಪ,
ದೈವಸ್ಮರಣೆಯಲಿ
ಮರಣದವರೆಗೂ ಉಪವಾಸವಿರುವ ತಪ.
ಪ್ರಾಯೋಪವಿಷ್ಟಾಶ್ಚ ಕಥಾ ವದನ್ತೋ ರಾಮಸ್ಯ ಸಂಸಾರವಿಮುಕ್ತಿದಾತುಃ ।
ಜಟಾಯುಷಃ ಪಾತನಮೂಚುರೇತತ್ ಸಮ್ಪಾತಿನಾಮ್ನಃ ಶ್ರವಣಂ ಜಗಾಮ ॥೬.೪೮॥
‘ಸಾಯೋವರೆಗೂ ಉಪವಾಸ'ಕ್ಕೆ ಕೂತ ಎಲ್ಲಾ ಕಪಿಸೇನೆ,
ಮಾಡಿದರಂತೆ ಮೋಕ್ಷದಾತ ಶ್ರೀರಾಮಕಥೆಯ ಭಜನೆ.
ಆರಂಭದಿಂದ ಜಟಾಯು
ಮರಣದವರೆಗಿನ ಕಥೆ,
ಮರದಮೇಲಿದ್ದ ಸಂಪಾತಿ ಎಂಬ ಪಕ್ಷಿ ಕೇಳಿತಂತೆ.
No comments:
Post a Comment
ಗೋ-ಕುಲ Go-Kula