ತಸ್ಯಾಗ್ರಜೋsಸಾವರುಣಸ್ಯ ಸೂನುಃ ಸೂರ್ಯ್ಯಸ್ಯ ಬಿಮ್ಬಂ ಸಹ ತೇನ ಯಾತಃ ।
ಜವಂ ಪರೀಕ್ಷನ್ನಥ ತಂ ಸುತಪ್ತಂ ಗುಪ್ತ್ವಾ ಪತತ್ರಕ್ಷಯಮಾಪ್ಯ ಚಾಪತತ್
॥೬.೪೯॥
ಜಟಾಯುವಿನ ಅಣ್ಣ
ವರುಣನ ಮಗ ಸಂಪಾತಿ,
ವೇಗ
ಪರೀಕ್ಷಾಸ್ಪರ್ಧೆಯಲಿ ಒದಗಿತವಗೆ ಆ ಗತಿ.
ಅಣ್ಣ
ತಮ್ಮಂದಿರಿಬ್ಬರೂ ಸೂರ್ಯನೆಡೆಗೆ ಹಾರಿದ ಕತೆ,
ತಮ್ಮನ ರಕ್ಷಿಸಿ
ತನ್ನ ರೆಕ್ಕೆ ಸುಟ್ಟುಕೊಂಡು ಬಿದ್ದವನ ವ್ಯಥೆ.
ಸ ದಗ್ಧಪಕ್ಷಃ ಸವಿತೃಪ್ರತಾಪಾಚ್ಛ್ರುತ್ವೈವ ರಾಮಸ್ಯ ಕಥಾಂ ಸಪಕ್ಷಃ ।
ಭೂತ್ವಾ ಪುನಶ್ಚಾಽಶು ಮೃತಿಂ ಜಟಾಯುಷಃ ಶುಶ್ರಾವ ಪೃಷ್ಟ್ವಾ ಪುನರೇವ
ಸಮ್ಯಕ್ ॥೬.೫೦॥
ಸೂರ್ಯನ ಶಾಖಕೆ
ಸುಟ್ಟುಹೋದ ರೆಕ್ಕೆ ,
ಚಿಗುರಿದವಂತೆ
ಶ್ರೀರಾಮಕಥಾ ಕೇಳಿದ್ದಕ್ಕೆ .
ಮೋಕ್ಷದಾತ
ಶ್ರೀರಾಮಕಥಾ ಸಾರ,
ರೆಕ್ಕೆ
ಮರಳಿದ್ದೇನು ದೊಡ್ಡ ಆಶ್ಚರ್ಯ.
ಇದನ್ನೆಲ್ಲಾ ನೋಡಿ
ಕೇಳಿದ ಆ ಸಂಪಾತಿ,
ಪಡೆದ ಜಟಾಯು ಮರಣದ
ಮಾಹಿತಿ.
ಸ ರಾವಣಸ್ಯಾಥ ಗತಿಂ ಸುತೋಕ್ತಾಂ ನಿವೇದ್ಯದೃಷ್ಟ್ವಾಜನಕಾತ್ಮಜಾಕೃತಿಮ್
।
ಸ್ವಯಂ ತಥಾsಶೋಕವನೇ ನಿಷಣ್ಣಾಮವೋಚದೇಭ್ಯೋ ಹರಿಪುಙ್ಗವೇಭ್ಯಃ ॥೬.೫೧॥
ತನ್ನ ಮಗ
ಸುಪಾರ್ಶ್ವನಿಂದ ತಿಳಿದ ರಾವಣವಾರ್ತೆಯ ಹೇಳಿದ,
ಮೇಲೆ ಹಾರಿ ಕಂಡು ಸೀತಾಕೃತಿ ಅಶೋಕವನದಲ್ಲಿರುವುದ ಅರುಹಿದ.[Contributed by Shri Govind Magal]
No comments:
Post a Comment
ಗೋ-ಕುಲ Go-Kula