ಯಃ
ಪ್ರೇರಕಃ ಸಕಲಶೇಮುಷಿಸನ್ತತೇಶ್ಚ ತಸ್ಯಾಜ್ಞತಾ ಕುತ ಇಹೇಶವರಸ್ಯ ವಿಷ್ಣೋಃ ।
ತೇನೋದಿತೋsಥ ಸುದೃಢಂ ಪುನರಾಗತೇನ
ವಜ್ರೋಪಮಂ ಶರಮಮೂಮುಚದಿನ್ದ್ರಸೂನೋಃ ॥೬.೧೭॥
ಮನೋನಿಯಾಮಕಗೂ
ಶ್ರೀರಾಮ ನಿಯಾಮಕ,
ಗೊತ್ತಿದ್ದೂ
ಸಾಮಾನ್ಯನಂತೆ ತೋರಿಕೊಂಡ ನಾಟಕ.
ಜ್ಞಾನದ
ಭಂಡಾರಕುಂಟೆ ಅಜ್ಞಾನ,
ಮರ್ತ್ಯಾವತಾವತಾರದಿ
ಮರ್ತ್ಯಶಿಕ್ಷಣ.
ಸುಗ್ರೀವ ಮತ್ತೆ
ಬಂದು ವಾಲಿಯ ವಧಿಸಲು ಬೇಡಿದ,
ಈಗ ರಾಮ ವಜ್ರದಂಥ
ಬಾಣ ಪ್ರಯೋಗ ಮಾಡಿದ.
ರಾಮಾಜ್ಞಯೈವ ಲತಯಾ ರವಿಜೇ ವಿಭಕ್ತೇ ವಾಯೋಃ ಸುತೇನ ರಘುಪೇಣ ಶರೇ ಚ
ಮುಕ್ತೇ ।
ಶ್ರುತ್ವಾsಸ್ಯ ಶಬ್ದಮತುಲಂ ಹೃದಿ ತೇನ ವಿದ್ಧ ಇನ್ದ್ರಾತ್ಮಜೋ ಗಿರಿರಿವಾಪತದಾಶು
ಸನ್ನಃ ॥೬.೧೮॥
ರಾಮನಾದೇಶದಂತೆ
ಹನುಮನಿಂದ ಸುಗ್ರೀವಗೆ ಹೂಹಾರ,
ಸಾಮಾನ್ಯರಿಗೂ
ಕಾಣುವಂತಾದ ಇಬ್ಬರ ನಡುವಿನ ಅಂತರ.
ಮತ್ತೆ ಶುರುವಾಯಿತು
ವಾಲಿ ಸುಗ್ರೀವರ ಘೋರ ಯುದ್ಧ,
ರಾಮ ಬಿಟ್ಟ
ಬಾಣದಿಂದ ತತ್ತರಿಸಿ ವಾಲಿ ಧರೆಗೆ ಬಿದ್ದ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula