Sunday, 27 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 56 - 59


ಅಪೂರಿತೇ ತೈಃ ಸಕಲೈಃ ಶತಸ್ಯ ಗಮಾಗಮೇ ಶತ್ರುಬಲಂ ಚ ವೀಕ್ಷ್ಯ ।
ಸುದುರ್ಗ್ಗಮತ್ವಂ ಚ ನಿಶಾಚರೇಶಪುರ್ಯ್ಯಾಃ ಸ ಧಾತುಃ ಸುತ ಆಬಭಾಷೇ ॥೬.೫೬॥

ತಿಳಿದಾದಮೇಲೆ ಎಲ್ಲಾ ಕಪಿಗಳ ಸಾಮರ್ಥ್ಯದ ಇತಿಮಿತಿ,
ಬ್ರಹ್ಮಪುತ್ರ ಜಾಂಬವಂತ ಆಲೋಚಿಸಿದ ಇತರ ಅನೇಕ ಸಂಗತಿ.
ಇತರ ಸಮಸ್ಯೆ ದಾರಿಯಲ್ಲಿನ ದುರ್ಗಮತ್ವ ಶತ್ರುಬಲ,
ಪರಾಮರ್ಶಿಸಿ ಮಾತಾಡುತಾನೆ ಜಾಂಬವಂತ ಕೆಲಕಾಲ.

ಅಯಂ ಹಿ ಗೃಧ್ರಃ ಶತಯೋಜನಂ ಗಿರಿಂ ತ್ರಿಕೂಟಮಾಹೇತ ಉತಾತ್ರ ವಿಘ್ನಾಃ ।
ಭವೇಯುರನ್ಯೇsಪಿ ತತೋ ಹನೂಮಾನೇಕಃ ಸಮರ್ತ್ಥೋ ನ ಪರೋsಸ್ತಿ ಕಶ್ಚಿತ್ ॥೬.೫೭॥

ಸಂಪಾತಿ ಹೇಳುವಂತೆ ತ್ರಿಕೂಟಪರ್ವತವಿದೆ ನೂರು ಯೋಜನ ದೂರ,
ಹಾರುವುದಷ್ಟೇ ಅಲ್ಲ ಎದುರಿಸಿ ಸಮಸ್ಯೆಗಳ ಕಂಡುಕೊಳ್ಳಬೇಕು ಪರಿಹಾರ.
ಈ ಕಾರಣದಿಂದ ಹನುಮಂತನೊಬ್ಬನೇ ಸಮರ್ಥ,
ಇನ್ಯಾರದೇ ಶ್ರಮವಾಗಲೀ ಆಗುವುದದು  ವ್ಯರ್ಥ.

ಉಕ್ತ್ವಾಸ ಇತ್ಥಂ ಪುನರಾಹ ಸೂನುಂ ಪ್ರಾಣಸ್ಯ ನಿಃಸ್ಸೀಮಬಲಂ; ಪ್ರಶಂಸಯನ್ ।
ತ್ವಮೇಕ ಏವಾತ್ರ ಪರಂ ಸಮರ್ತ್ಥಃ ಕುರುಷ್ವ ಚೈತತ್ ಪರಿಪಾಹಿ ವಾನರಾನ್ ॥೬.೫೮॥

ಜಾಂಬವಂತನಿಂದ ಹನುಮನ ವಿಶೇಷ ಗುಣಗಾನ,
ನಿನ್ನಿಂದ ಸಮುದ್ರತರಣ ರಾಮಸಂದೇಶ ತಲುಪಿಸೋ ತ್ರಾಣ.
ನೀನೊಬ್ಬನೇ ಸಮರ್ಥನಾಗಿರುವೆ ಮುಖ್ಯಪ್ರಾಣ,
ಪೂರೈಸುತ್ತಾ ಈ ಕಾರ್ಯ ಮಾಡು ನೀ ಕಪಿರಕ್ಷಣ.

ಇತೀರಿತೋsಸೌ ಹನುಮಾನ್ ನಿಜೇಪ್ಸಿತಂ ತೇಷಾಮಶಕ್ತಿಂ ಪ್ರಕಟಾಂ ವಿಧಾಯ ।
ಅವರ್ದ್ಧತಾsಶು ಪ್ರವಿಚಿನ್ತ್ಯ ರಾಮಂ ಸುಪೂರ್ಣ್ಣಶಕ್ತಿಂ ಚರಿತೋಸ್ತದಾಜ್ಞಾಮ್ ॥೬.೫೯॥

ಸಿದ್ಧವಾಯಿತೆಲ್ಲರ ಶಕ್ತಿ ಸಾಮರ್ಥ್ಯದ ಇತಿಮಿತಿ,
ಮನನವಾಯಿತೆಲ್ಲರಿಗೆ ಹನುಮನ ಜ್ಞಾನ- ಶಕ್ತಿ.
ಸರ್ವಶಕ್ತ ಶ್ರೀರಾಮಧ್ಯಾನದಲ್ಲಿ ಹನುಮಂತ,
ಅವನಾಜ್ಞೆಯ ನೆರೆವೇರಿಸುವುದಕೆ ಬೆಳೆದು ನಿಂತ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ ಸಮುದ್ರತರಣನಿಶ್ಚಯೋನಾಮ ಷಷ್ಠೋsಧ್ಯಾಯಃ ॥

ಶ್ರೀಮದಾನಂದತೀರ್ಥಭಗವತ್ಪಾದರಿಂದ ರಚಿತವಾದ,
ಶ್ರೀ ಮಹಾಭಾರತ ತಾತ್ಪರ್ಯ ನಿರ್ಣಯದ ಅನುವಾದ.
ಶ್ರೀರಾಮ ಚರಿತೆಯ ಸಮುದ್ರತರಣದ ಅಧ್ಯಾಯ,
ಆರನೇ ಅಧ್ಯಾಯ ರೂಪದಿ ಕೃಷ್ಣಾರ್ಪಣವಾದ ಭಾವ.

No comments:

Post a Comment

ಗೋ-ಕುಲ Go-Kula