Thursday 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 08 - 11

ಶ್ರುತ್ವಾsಸ್ಯ ವಾಕ್ಯಮವಮೃಶ್ಯ ದಿತೇಃ ಸುತಾಂಸ್ತಾನ್ ಧಾತುರ್ವರಾದಖಿಲಪುಮ್ಭಿರಭೇದ್ಯರೂಪಾನ್ ।
ಬ್ರಹ್ಮತ್ವಮಾಪ್ತುಮಚಲಂ ತಪಸಿ ಪ್ರವೃತ್ತಾನೇಕೇಷುಣಾ ಸಪದಿ ತಾನ್ ಪ್ರವಿಭೇದ ರಾಮಃ ೬.೦೮॥

ಬ್ರಹ್ಮವರದಿಂದ ಅಭೇದ್ಯ ಶರೀರ ಪಡೆದ ಏಳು ದೈತ್ಯರು,
ದುರಾಸೆಯಿಂದ ಬ್ರಹ್ಮಪದವಿ ಹೊಂದಲು ತಪೋನಿರತರು.
ಇವರ ನಿಜರೂಪವರಿತ ಪ್ರಭು ಶ್ರೀರಾಮ,
ಒಂದೇ ಬಾಣದಿ ಮಾಡಿದರವರ ನಿರ್ನಾಮ.

ಸನ್ಧಾಯ ಕಾರ್ಮ್ಮುಕವರೇ ನಿಶಿತೇ ತು ಬಾಣೇsಥಾsಕೃಷ್ಯ ದಕ್ಷಿಣಭುಜೇನ ತದಾ ಪ್ರಮುಕ್ತೇ ।
ರಾಮೇಣಸತ್ವರಮನನ್ತಬಲೇನ ಸರ್ವೇ ಚೂರ್ಣ್ಣೀಕೃತಾಃ ಸಪದಿ ತೇ ತರವೋ ರವೇಣ ॥೬.೦೯॥
ಭಿತ್ವಾ ಚ ತಾನ್ ಸಗಿರಿಕುಂ ಭಗವತ್ಪ್ರಮುಕ್ತಃ ಪಾತಾಳಸಪ್ತಕಮಥಾತ್ರ ಚ ಯೇ ತ್ವವಧ್ಯಾಃ ।
ನಾಮ್ನಾsಸುರಾಃ ಕುಮುದಿನೋsಬ್ಜಜವಾಕ್ಯರಕ್ಷಾಃ ಸರ್ವಾಂಶ್ಚ ತಾನದಹದಾಶು ಶರಃ ಸ ಏಕಃ ॥೬.೧೦॥

ಎಣಿಸಲಳವೇ ಶ್ರೀರಾಮನ ಅನಂತ ತ್ರಾಣ,
ಶ್ರೇಷ್ಠ ಬಿಲ್ಲಿಂದ ಬಿಟ್ಟ ಚೂಪಾದ ಆ ಬಾಣ.
ಕೇಳಿಬಂತಾಗ  ಭಾರೀ ಭಯಂಕರ ಶಬ್ಧ,
ಮರಗಳು ಸೀಳಿಬಿದ್ದು ರಕ್ಕಸರಾದರು ಸ್ತಬ್ಧ.

ಏಳು ರಕ್ಕಸರ ಸಂಹರಿಸಿದ ಆ ರಾಮ ಬಾಣ,
ಸೀಳಿ ಬೆಟ್ಟ ಭೂಮಿಯ ಸೇರಿತು ಪಾತಾಳ ತಾಣ.
ಅಲ್ಲಿತ್ತು ಬ್ರಹ್ಮವರರಕ್ಷಿತ ಕುಮುದಿ ದೈತ್ಯ ವೃಂದ,
ಭಸ್ಮಮಾಡಿ ಎಲ್ಲರ ರಾಮನಿತ್ತ ಸಜ್ಜನರಿಗಾನಂದ.

ನೈತದ್ ವಿಚಿತ್ರಮಮಿತೋರುಬಲಸ್ಯ ವಿಷ್ಣೋರ್ಯ್ಯತ್ ಪ್ರೇರಣಾತ್ ಸಪವನಸ್ಯ ಭವೇತ್ ಪ್ರವೃತ್ತಿಃ ।
ಲೋಕಸ್ಯ ಸಪ್ರಕೃತಿಕಸ್ಯ ಸರುದ್ರಕಾಲಕರ್ಮ್ಮಾದಿಕಸ್ಯ ತದಪೀದಮನನ್ಯಸಾಧ್ಯಮ್ ॥೬.೧೧॥

ಯಾವ ಶ್ರೀರಾಮಚಂದ್ರನ ಪ್ರೇರಣೆ,
ಅದರಂತೆ ನಡೆವ ಪ್ರಕೃತಿಯ ಧಾರಣೆ.
ಬ್ರಹ್ಮನೊಡಗೂಡಿದ ಜಗತ್ಚಲನದಿ ತೊಡಗುವಿಕೆ,
ರುದ್ರ ಯಮಾದಿಗಳಿಂದ ಲೋಕದ ನಡೆಯುವಿಕೆ.
ಇದೆಲ್ಲಾ ವ್ಯಾಪಾರ ಇನ್ಯಾರಿಂದಲೂ ಮಾಡಲು   ಆಗುವುದಿಲ್ಲ,
ಅಮಿತಬಲದ ಹರಿಗೆ ಈ ಕಾರ್ಯ ಆಶ್ಚರ್ಯ ವಿಚಿತ್ರವಲ್ಲ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula