ತತಸ್ತು ತೇ ಬ್ರಹ್ಮಸುತೇನ ಪೃಷ್ಟಾ ನ್ಯವೇದಯನ್ನಾತ್ಮಬಲಂ ಪೃಥಕ್
ಪೃಥಕ್ ।
ದಶೈವ ಚಾsರಭ್ಯ ದಶೋತ್ತರಸ್ಯ ಕ್ರಮಾತ್ ಪಥೋ ಯೋಜನತೋsತಿಯಾನೇ
॥೬.೫೨॥
ಪ್ರಶ್ನಿಸಿದ
ಬ್ರಹ್ಮಪುತ್ರನಾದಂಥ ಜಾಂಬವಂತ,
ಯಾರ್ಯಾರು
ಎಷ್ಟೆಷ್ಟು ಹಾರಬಲ್ಲಿರಿ ಅಂತ.
ಹೇಳಿದವು ಕಪಿಗಳು
ತಮ್ತಮ್ಮ ಶಕ್ತಿ ಸಾಮರ್ಥ್ಯ ಸಮೇತ,
ಹತ್ತು ಯೋಜನದಿಂದ
ಹತ್ಹತ್ತು ಹೆಚ್ಚುತ್ತ ಎಂಬತ್ತಕ್ಕೆ ಸೀಮಿತ.
ಸನೀಲಮೈನ್ದದ್ವಿವಿದಾಃ ಸತಾರಾಃ ಸರ್ವೇsಪ್ಯಶೀತ್ಯಾಃ ಪರತೋ ನ
ಶಕ್ತಾಃ ।
ಗನ್ತುಂ ಯದಾsಥಾsತ್ಮಬಲಂ ಸ
ಜಾಮ್ಬವಾನ್ ಜಗಾದ ತಸ್ಮಾತ್ ಪುನರಷ್ಟಮಾಂಶಮ್ ॥೬.೫೩॥
ಕಪಿಗಳಾದ ನೀಲ, ಮೈಂದ, ದ್ವಿವಿದ ,ತಾರ,
ಅನುಕ್ರಮವಾಗಿ
ಹಾರಬಲ್ಲರು ಎಂಬತ್ತರ ಪಾರ.
ಯಾರೂ ದಾಟಲಾರರು
ಎಂಬತ್ತರ ಗಡಿಯ ತೀರ,
ಜಾಂಬವಂತನೆಂದ
ಹಾರಬಲ್ಲೆ ತೊಂಬತ್ತು ಪೂರಾ.
ಬಲೇರ್ಯ್ಯದಾ ವಿಷ್ಣುರವಾಪ ಲೋಕಾಂಸ್ತ್ರಿಭಿಃ ಕ್ರಮೈರ್ನ್ನನ್ದಿರವಂ
ಪ್ರಕುರ್ವತಾ ।
ತದಾ ಮಯಾ ಭ್ರಾನ್ತಮಿದಂ ಜಗತ್ತ್ರಯಂ ಸವೇದನಂ ಜಾನು ಮಮಾsಸ ಮೇರುತಃ
॥೬.೫೪॥
ಜಾಂಬವಂತ ಜ್ಞಾಪಿಸುತ್ತಾನೆ
ವಾಮನಾವತಾರದ ಕಥೆ,
ಅತ್ಯುತ್ಸಾಹದಲ್ಲಿ
ತಾನು ಶಕ್ತಿ ಹ್ರಾಸ ಮಾಡಿಕೊಂಡ ವ್ಯಥೆ.
ಹರಿಯ ವಾಮನವತಾರದ
ಸಂದರ್ಭದಲ್ಲಿ,
ಹರುಷದಿಂದ
ಹಾರಾಡಿದೆ ಅತಿ ಆನಂದದಲ್ಲಿ.
ನಾನಾಗ ಮೂರ್ಲೋಕ
ಸುತ್ತುವ ಸಮಯ,
ಮೇರು ಬಡಿದು
ಮೊಣಕಾಲಿಗಾಯ್ತು ಗಾಯ.
ಅತೋ ಜವೋ ಮೇ ನಹಿ ಪೂರ್ವಸಮ್ಮಿತಃ ಪುರಾ ತ್ವಹಂ ಷಣ್ಣವತಿಪ್ಲವೋsಸ್ಮಿ ।
ತತಃ ಕುಮಾರೋsಙ್ಗದ ಆಹ ಚಾಸ್ಮಾಚ್ಛತಂ ಪ್ಲವೇಯಂ ನ ತತೋsಭಿಜಾನೇ ॥೬.೫೫॥
ಆ ಕಾರಣದಿಂದ
ಕುಸಿಯಿತು ನನ್ನ ವೇಗ,
ತೊಂಬತ್ತಾರು ಯೋಜನ
ಹಾರುತ್ತಿದ್ದೆ ನಾನಾಗ.
ಕಿರಿ ಅಂಗದನೆಂದ ನಾ
ನೂರು ಯೋಜನ ಜಿಗಿದೇನು,
ಆನಂತರ ಶಕ್ತಿಹೀನನಾಗಿ ಮಾಡಲಾರೆ ಮುಂದೇನೂ.[Contributed by Shri Govind Magal]
No comments:
Post a Comment
ಗೋ-ಕುಲ Go-Kula