Thursday 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 32 - 35

ಸಸಮ್ಭ್ರಮನ್ತಂ ಪತಿತಂ ಪದಾಬ್ಜಯೋಸ್ತ್ವರನ್ ಸಮುತ್ಥಾಪ್ಯ ಸಮಾಶ್ಲಿಷತ್ ಪ್ರಭುಃ ।
ಸ ಚೋಪವಿಷ್ಟೋ ಜಗದೀಶಸನ್ನಿಧೌ ತದಾಜ್ಞಯೈವಾsದಿಶದಾಶು ವಾನರಾನ್ ॥೬.೩೨॥

ಉದ್ವೇಗಾತುರದಿ ರಾಮಪಾದಕ್ಕೆರಗಿದ ಸುಗ್ರೀವ ,
ವಾತ್ಸಲ್ಯದಿಂದ  ಹಿಡಿದೆತ್ತಿ ಆಲಂಗಿಸಿದ ರಾಘವ .
ಜಗನ್ನಾಥನ ಬಳಿ ಸುಗ್ರೀವ ಆಸೀನನಾದ,
ಸೀತಾನ್ವೇಷಣೆಗಾಗಿ ಕಪಿಗಳಿಗೆ ಆದೇಶಿದ.

ಸಮಸ್ತದಿಕ್ಷು ಪ್ರಹಿತೇಷು ತೇನ ಪ್ರಭುರ್ಹನೂಮನ್ತಮಿದಂ ಬಭಾಷೇ ।
ನ ಕಶ್ಚಿದೀಶಸ್ತ್ವದೃತೇsಸ್ತಿ ಸಾಧನೇ ಸಮಸ್ತಕಾರ್ಯ್ಯಪ್ರವರಸ್ಯ ಮೇsಸ್ಯ ॥೬.೩೩॥

ಎಲ್ಲಾ ದಿಕ್ಕುಗಳಿಗೂ ಕಪಿಸೈನ್ಯದ ನಿಯೋಜನೆ,
ಹನುಮಂತಗೊಬ್ಬಗೇ ಸಾಧ್ಯವದು ಸೀತಾನ್ವೇಷಣೆ.
ಹನುಮಂತನ ಸಾಮರ್ಥ್ಯದ ಬಗ್ಗೆ ಶ್ರೀರಾಮ ಬಿಚ್ಚಿಟ್ಟ  ನಂಬಿಕೆ,
ಜೀವೋತ್ತಮನ ಬಲ ಜ್ಞಾನಗಳ ಹಿರಿಮೆಯ ಜಗಕೆ  ತೋರಿಕೆ.




ಅತಸ್ತ್ವಮೇವ ಪ್ರತಿಯಾಹಿ ದಕ್ಷಿಣಾಂ ದಿಶಂ ಸಮಾದಾಯ ಮದಙ್ಗುಲೀಯಕಮ್ ।
ಇತೀರಿತೋsಸೌ ಪುರುಷೋತ್ತಮೇನ ಯಯೌ ದಿಶಂ ತಾಂ ಯುವರಾಜಯುಕ್ತಃ॥೬.೩೪॥

ಶ್ರೀರಾಮನಿಂದ ಹನುಮಂತಗೆ ಆದೇಶ,
ಗುರುತಿನ ಉಂಗುರ ಕೊಟ್ಟ ಸರ್ವೇಶ.
ಹನುಮನಿಂದ ರಾಮ ಕೊಟ್ಟ ಉಂಗುರದ ಸ್ವೀಕಾರ,
ಅಂಗದನೊಡಗೂಡಿ ದಕ್ಷಿಣಕ್ಕೆ ಹೊರಟ ವ್ಯಾಪಾರ.

ಸಮಸ್ತದಿಕ್ಷು ಪ್ರತಿಯಾಪಿತಾ ಹಿ ತೇ ಹರೀಶ್ವರಾಜ್ಞಾಮುಪಧಾರ್ಯ್ಯ ಮಾಸತಃ ।
ಸಮಾಯ ಯುಸ್ತೇSಙ್ಗದಜಾಮ್ಬವನ್ಮುಖಾಃ ಸುತೇನ ವಾಯೋಃ ಸಹಿತಾ ನ ಚಾSಯಯುಃ ॥೬.೩೫॥

ಎಲ್ಲಾ ದಿಕ್ಕುಗಳಲಿ ಹೊರಟ ವಾನರ ಪಡೆ,
ವಾಪಸಾದರು ಮುಗಿಯದ ಮುನ್ನ ತಿಂಗಳ ನಡೆ.
ದಕ್ಷಿಣಕ್ಕೆ ಹೋದ ಅಂಗದ ಜಾಂಬವಂತ ಹನುಮಂತ,
ವಾಪಸಾಗಲಿಲ್ಲ ದಿನಗಳುರುಳಿ ಬಂದರೂ ಮಾಸಾಂತ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula