Thursday 31 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 07 - 09

ಲಙ್ಕಾವನಾಯ ಸಕಲಸ್ಯ ಚ ನಿಗ್ರಹೇsಸ್ಯಾಃ ಸಾಮರ್ಥ್ಯಮಪ್ರತಿಹತಂ ಪ್ರದದೌ ವಿಧಾತಾ ।
ಛಾಯಾಮವಾಕ್ಷಿಪದಸೌ ಪವನಾತ್ಮಜಸ್ಯ ಸೋsಸ್ಯಾಃ ಶರೀರಮನುವಿಶ್ಯ ಬಿಭೇದ 
ಚಾsಶು ॥೭.೦೭॥

ನಿರ್ವಹಿಸಲು ಲಂಕೆಯ ರಕ್ಷಣಾಕಾರ್ಯ,
ಸಿಂಹಿಕೆಗಿತ್ತು ಬ್ರಹ್ಮನಿಂದ ಅಮಿತಶಕ್ತಿಯ ವರ.
ಯಾವಾಗ ಸಿಂಹಿಕೆ ಮಾಡಿತೋ ಹನುಮನ ಛಾಯಾಗ್ರಹಣ,
ಅವಳ ದೇಹಹೊಕ್ಕು ಸೀಳಿದ ಹನುಮ ಕೊಟ್ಟವಳಿಗೆ ಮರಣ.

ನಿಸ್ಸೀಮಮಾತ್ಮಬಲಮಿತ್ಯನುದರ್ಶಯಾನೋ ಹತ್ವೈವ ತಾಮಪಿ ವಿಧಾತೃವರಾಭಿಗುಪ್ತಾಮ್  ।
ಲಮ್ಬೇ ಸ ಲಮ್ಬಶಿಖರೇ ನಿಪಪಾತ ಲಙ್ಕಾಪ್ರಾಕಾರರೂಪಕಗಿರಾವಥ ಸಞ್ಚುಕೋಚ ॥೭.೦೮॥

ಹನುಮಂತ  ತನ್ನ ಎಣೆಯಿರದ ಬಲವ ಲೋಕಕ್ಕೆ ತೋರಿದ,
ಸಿಂಹಿಕೆಯ ಸೀಳಿ ಲಂಕಾಪ್ರಾಕಾರದಲ್ಲಿದ್ದ ಲಂಬ ಶಿಖರದ ಮೇಲಿಳಿದ.
ಈರೀತಿ ಹನುಮಂತ ಲಂಕಾಪ್ರಾಕಾರ ಸೇರಿಕೊಂಡ,
ನಗರಪ್ರವೇಶಕ್ಕೆ ತಕ್ಕಂತೆ ತನ್ನ ರೂಪ ಕುಗ್ಗಿಸಿಕೊಂಡ.

ಭೂತ್ವಾಬಿಲಾಳಸಮಿತೋ ನಿಶಿತಾಂ ಪುರೀಂ ಚ ಪ್ರಾಪ್ಸ್ಯನ್ ದದರ್ಶ ನಿಜರೂಪವತೀಂ ಸ ಲಙ್ಕಾಮ್ ।
ರುದ್ಧೋsನಯಾssಶ್ವಥ ವಿಜಿತ್ಯ ಚ ತಾಂ ಸ್ವಮುಷ್ಟಿಪಿಷ್ಟಾಂ ತಯಾsನುಮತ ಏವ ವಿವೇಶ ಲಙ್ಕಾಮ್ ॥೭.೦೯॥

ಹನುಮಂತ ಬೆಕ್ಕಿಗೆ ಸಮವಾದ ಪರಿಮಾಣದ ದೇಹ ಹೊಂದಿದ,
ಪಟ್ಟಣ ಪ್ರಾಕಾರದಲ್ಲಿ ಲಂಕಾಭಿಮಾನಿ ದೇವತೆ ಎದುರಾದದ್ದು ನೋಡಿದ.
ಅವಳಿಂದ ತಡೆಯಲ್ಪಟ್ಟ ಹನುಮ ಕೊಟ್ಟವಳಿಗೆ ಎಡಗೈ ಹೊಡೆತ,
ಗೆದ್ದು ಅವಳ ಒಪ್ಪಿಗೆ ಪಡೆದೇ ಲಂಕೆಯ ಪ್ರವೇಶಿಸಿದ ಹನುಮಂತ.


No comments:

Post a Comment

ಗೋ-ಕುಲ Go-Kula