ಮಾರ್ಗ್ಗಮಾಣೋ ಬಹಿಶ್ಚಾನ್ತಃ ಸೋsಶೋಕವನಿಕಾತಳೇ
।
ದದರ್ಶ ಶಿಂಶಪಾವೃಕ್ಷಮೂಲಸ್ಥಿತರಮಾಕೃತಿಮ್ ॥೭.೧೦॥
ಲಂಕೆಯ ಒಳಗೂ ಹೊರಗೂ
ಹುಡುಕುತ್ತ ಹನುಮಂತ ನಡೆದ,
ಅಶೋಕವನದಲ್ಲಿ
ಶಿಂಶಪಾವೃಕ್ಷದಡಿಯಲ್ಲಿದ್ದ ಸೀತಾಕೃತಿಯ ನೋಡಿದ.
ನರಲೋಕವಿಡಮ್ಬಸ್ಯ ಜಾನನ್ ರಾಮಸ್ಯ ಹೃದ್ಗತಮ್ ।
ತಸ್ಯ ಚೇಷ್ಟಾನುಸಾರೇಣ ಕೃತ್ವಾ ಚೇಷ್ಟಾಶ್ಚ ಸಂವಿದಃ ॥೭.೧೧॥
ತಾದೃಕ್ ಚೇಷ್ಟಾಸಮೇತಾಯಾ ಅಙ್ಗುಲೀಯಮದಾತ್ ತತಃ ।
ಸೀತಾಯ ಯಾನಿ ಚೈವಾsಸನ್ನಾಕೃತೇಸ್ತಾನಿ
ಸರ್ವಶಃ ॥೭.೧೨॥
ಭೂಷಣಾನಿ ದ್ವಿಧಾ ಭೂತ್ವಾ ತಾನ್ಯೇವಾsಸಂಸ್ತಥೈವ
ಚ ।
ಅಥ ಚೂಳಾಮಣಿಂ ದಿವ್ಯಂ ದಾತುಂ ರಾಮಾಯ ಸಾ ದದೌ ॥೭.೧೩॥
ಭಗವಂತನದು
ಮನುಷ್ಯಾವತಾರದಲ್ಲಿ ಮನುಷ್ಯರ ಅನುಕರಣೆ,
ಜಗದ್ ಮಾತಾಪಿತರ
ನಡೆಯಂತೆ ಹನುಮನದೂ ಅನುಸರಣೆ.
ರಾಮ ಸೀತಾಕೃತಿಯ
ಅಸುರಮೋಹನ ಕಾರ್ಯ ಅನೇಕ,
ಅಂತೇ ಹನುಮನ
ಸೀತಾಕೃತಿಯೊಂದಿಗೆ ಸಂವಾದದ ನಾಟಕ.
ನಂತರ ರಾಮನಿಂದ ತಂದ
ಉಂಗುರವ ಸೀತೆಗೆ ಕೊಟ್ಟ ಕಾಯಕ.
ಸೀತಾಮಾತೆ
ಧರಿಸಿದ್ದ ಆಭರಣಗಳದ್ದೇ ಪಡಿಯಚ್ಚು,
ಸೀತಾಕೃತಿಯೊಂದಿಗೂ
ಇದ್ದವೆಂಬುದು ಏನು ಹೆಚ್ಚು.
ಹನುಮನೊಡನೆ ಕೊಂಚ
ಹೊತ್ತು ಮಾತಾಡಿದ ಸೀತೆ,
ರಾಮಗೆ ಕೊಡೆಂದು
ಚೂಡಾಮಣಿಯ ಕೊಟ್ಟಳಂತೆ.
ಯದ್ಯಪ್ಯೇತನ್ನ ಪಶ್ಯನ್ತಿ ನಿಶಾಚರಗಣಾಸ್ತುತೇ ।
ದ್ಯುಲೋಕಚಾರಿಣಃ ಸರ್ವಂ ಪಶ್ಯಂತ್ಯೃಷಯ ಏವ ಚ ॥೭.೧೪॥
ತೇಷಾಂ ವಿಡಮ್ಬನಾಯೈವ ದೈತ್ಯಾನಾಂ ವಞ್ಚನಾಯ ಚ ।
ಪಶ್ಯತಾಂ ಕಲಿಮುಖ್ಯಾನಾಂ ವಿಡಮ್ಬೋsಯಂ ಕೃತೋ
ಭವೇತ್ ॥೭.೧೫॥
ಯಾರಿಗಾಗಿ ಈ ನಾಟಕ
ಪ್ರದರ್ಶನದ ಆಟ,
ರಕ್ಕಸರಿಗಾಗಿಲ್ಲ
ಹನುಮ ಸೀತಾ ಸಂವಾದದ ನೋಟ.
ಅಂತರಿಕ್ಷದಿ
ಸಂಚರಿಸುವ ದೇವತೆ ಋಷಿಗಳಿಗಾಗಿ ತೋರಿದ ಆಟ,
ಕಲ್ಯಾದಿದೈತ್ಯರಿಗೆ
ಅವರವರ ಸಾಧನಾ ಮಾರ್ಗಕ್ಕೆ ಕೊಟ್ಟ ಊಟ.
ಎಲ್ಲವೂ
ಸೃಷ್ಟಿಕರ್ತ ಶ್ರೀರಾಮನ ಸಂಕಲ್ಪ,
ಅಂತೇ ನಟಿಸಿದ ಮಗನಾದ ಹನುಮಪ್ಪ.[Contributed by Shri Govind Magal]
No comments:
Post a Comment
ಗೋ-ಕುಲ Go-Kula