Friday 29 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 89 - 93


ಪ್ರಕರ್ಷತಿ ತ್ವೇವ ನಿಶಾಚರೇಶ್ವರೇ ತಥೈವ ರಾಮಾವರಜಂ ತ್ವರಾನ್ವಿತಃ ।
ಸಮಸ್ತಜೀವಾಧಿಪತೇಃ ಪರಾ ತನುಃ ಸಮುತ್ಪಪಾತಾಸ್ಯ ಪುರೋ ಹನೂಮಾನ್ ॥೮.೮೯॥

ರಾವಣ ತ್ವರೆಯಿಂದ ಕೂಡಿ ಲಕ್ಷ್ಮಣನನ್ನು ಭರದಿ  ಎಳೆಯುತ್ತಿದ್ದಾಗ,
ಎಲ್ಲಾ ಜೀವರಧಿಪತಿ ಮುಖ್ಯಪ್ರಾಣಾವತಾರ  ಹನುಮ ರಾವಣನೆದುರಾದನಾಗ.

ಸ ಮುಷ್ಟಿಮಾವರ್ತ್ತ್ಯ ಚ ವಜ್ರಕಲ್ಪಂ ಜಘಾನ ತೇನೈವ ಚ ರಾವಣಂ ರುಷಾ ।
ಪ್ರಸಾರ್ಯ್ಯ ಬಾಹೂನಖಿಲೈರ್ಮ್ಮುಖೈರ್ವಮನ್  ಸ ರಕ್ತಮುಷ್ಣಂ ವ್ಯಸುವತ್ ಪಪಾತ ॥೮.೯೦॥

ಹನುಮ ತನ್ನ ವಜ್ರಕಲ್ಪ ಮುಷ್ಟಿಯನ್ನು ಬಿಗಿ ಮಾಡಿ ರಾವಣನನ್ನು ಸಿಟ್ಟಿನಿಂದ ಗುದ್ದಿದ.
ಪ್ರಹಾರ ತಡೆಯಲಾಗದ ರಾವಣ  ತನ್ನೆಲ್ಲಾ  ಮುಖಗಳಿಂದ ರಕ್ತ ಕಕ್ಕುತ್ತಾ ಹೆಣದಂತೆ ಬಿದ್ದ.

ನಿಪಾತ್ಯರಕ್ಷೋಧಿಪತಿಂ ಸ ಮಾರುತಿಃ ಪ್ರಗೃಹ್ಯ ಸೌಮಿತ್ರಿಮುರಙ್ಗಶಾಯಿನಃ ।
ಜಗಾಮ ರಾಮಾಖ್ಯತನೋಃ ಸಮೀಪಂ ಸೌಮಿತ್ರಿಮುದ್ಧರ್ತ್ತುಮಲಂ ಹ್ಯಸೌ ಕಪಿಃ ॥೮.೯೧॥

ರಾಕ್ಷಸರ ಒಡೆಯನಾದ ರಾವಣನನ್ನು ಹೊಡೆದು ಕೆಡವಿದ ಹನುಮಂತ,
ಲಕ್ಷ್ಮಣನ ಹಿಡಿದು ಹೊರಟ ರಾಮನೆಂಬ  ಶೇಷಶಾಯಿ ನಾರಾಯಣನತ್ತ,
ಲಕ್ಷ್ಮಣನನ್ನೆತ್ತಲು ಈ ಹನುಮಂತನಲ್ಲದೇ ಇನ್ಯಾರು  ಸಮರ್ಥ?

ಸ ರಾಮಸಮ್ಸ್ಪರ್ಷನಿವಾರಿತಕ್ಲಮಃ ಸಮುತ್ಥಿತಸ್ತೇನ ಸಮುದ್ಧೃತೇ ಶರೇ ।
ಬಭೌ ಯಥಾ ರಾಹುಮುಖಾತ್ ಪ್ರಮುಕ್ತಃ ಶಶೀ ಸುಪೂರ್ಣ್ಣೋ ವಿಕಚಸ್ವರಶ್ಮಿಭಿಃ ॥೮.೯೨॥

ರಾಮನ ಸಂಸ್ಪರ್ಶದಿಂದ ತನ್ನೆಲ್ಲಾ ಶ್ರಮವನ್ನು ಲಕ್ಷ್ಮಣ ಕಳೆದುಕೊಂಡ.
ರಾಮನಿಂದ ತನ್ನ ಹಣೆಯಲ್ಲಿದ್ದ ಬಾಣ ಕೀಳಲ್ಪಡಲು ಆತ ಎಚ್ಚರಗೊಂಡ.
ಹೇಗೆ ರಾಹುವಿನಿಂದ ಮುಕ್ತನಾದ ಪೂರ್ಣಚಂದ್ರನ ಬೆಳಕು,
ಹಾಗೇ ಲಕ್ಷ್ಮಣನಾದ ತನ್ನ ಪೂರ್ಣಶಕ್ತಿ ವೀರ್ಯದ ಸರಕು.

ಸ ಶೇಷಭೋಗಾಭಮಥೋ ಜನಾರ್ದ್ದನಃ ಪ್ರಗೃಹ್ಯ ಚಾಪಂ ಸಶರಂ ಪುನಶ್ಚ ।
ಸುಲಬ್ಧಸಙ್ಜ್ಞಂ ರಜನೀಚರೇಶಂ ಜಗಾದ ಸಜ್ಜೀಭವ ರಾವಣೇತಿ ॥೮.೯೩॥

ಹೀಗೆ ಲಕ್ಷ್ಮಣನು ಸಂಪೂರ್ಣ ಸ್ವಸ್ಥನಾದ ನಂತರ ,  ಹಾವಂತೆ ದಪ್ಪವಾದ ಬಿಲ್ಲು ಬಾಣ ಹಿಡಿದ ರಾಮಚಂದ್ರ.
ಎಚ್ಚರಾದ ಮತ್ತು  ಆಯಾಸದಿಂದ ಚೇತರಿಸಿಕೊಂಡ ರಾವಣಗೆ,
 ಎಲೈ ರಾವಣನೇ, ಸಿದ್ಧನಾಗು” ಎಂದು ರಾಮನೆಚ್ಚರಿಸಿದ ಬಗೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula