ಇತೀರಿತಸ್ತೇನ ಸ ರಾಕ್ಷಸೋತ್ತಮೋ ವರಾದಮೋಘಂ ಪ್ರಜಹಾರ ವಕ್ಷಸಿ ।
ಈ ರೀತಿ ಹನುಮಂತನ ಮಾತ ಕೇಳಿದ ನಿಕುಂಭನಾಗ,
ನಿಕುಂಭ ನೋಡಿದ ತನ್ನಾಯುಧ ಪುಡಿಯಾದ ನೋಟ,
ಆಗ ಮುಖ್ಯಪ್ರಾಣನ ಮಗನಾದ ಹನುಮಂತ,
ಯುದ್ಧ ರೂಪವಾದ ಮಹಾವೈಷ್ಣವ ಯಾಗದಲ್ಲಿ,
ವಿಚೂರ್ಣ್ಣಿತೋsಸೌ ತದುರಸ್ಯಭೇದ್ಯೇ ಯಥೈವ ವಜ್ರೋ ವಿಪತೌ ವೃಥಾsಭವತ್
॥೮.೩೧॥
ಈ ರೀತಿ ಹನುಮಂತನ ಮಾತ ಕೇಳಿದ ನಿಕುಂಭನಾಗ,
ಮಾಡಿದ ವರಬಲದ
ವ್ಯರ್ಥವಾಗದ ಶಸ್ತ್ರಪ್ರಯೋಗ.
ಇಂದ್ರ ಪ್ರಯೋಗಿಸಿದ
ವಜ್ರಾಯುಧ ಗರುಡನಲ್ಲಿ ವ್ಯರ್ಥವಾದ ರೀತಿ,
ನಿಕುಂಭನಾಯುಧ
ಹನುಮನಭೇದ್ಯದೆದೆಗಪ್ಪಳಿಸಿ ಪುಡಿಯಾದ ಗತಿ.
ವಿಚೂರ್ಣ್ಣಿತೇ ನಿಜಾಯುಧೇ ನಿಕುಮ್ಭ ಏತ್ಯ ಮಾರುತಿಮ್ ।
ಪ್ರಗೃಹ್ಯ ಚಾsತ್ಮನೋಂsಸಕೇ ನಿಧಾಯ ಜಗ್ಮಿವಾನ್ ದ್ರುತಮ್ ॥೮.೩೨॥
ನಿಕುಂಭ ನೋಡಿದ ತನ್ನಾಯುಧ ಪುಡಿಯಾದ ನೋಟ,
ಹನುಮನ ಹೆಗಲಲಿ ಹೊತ್ತುಕೊಂಡು
ಆರಂಭಿಸಿದ ಓಟ.
ಪ್ರಗೃಹ್ಯ ಕಣ್ಠಮಸ್ಯ ಸ ಪ್ರಧಾನಮಾರುತಾತ್ಮಜಃ ।
ಸ್ವಮಾಶು ಮೋಚಯಮ್ಸ್ತತೋ ನ್ಯಪಾತಯದ್ ಧರಾತಳೇ ॥೮.೩೩॥
ಆಗ ಮುಖ್ಯಪ್ರಾಣನ ಮಗನಾದ ಹನುಮಂತ,
ರಕ್ಕಸನ ಕೊರಳ
ಒತ್ತಿ ಗಟ್ಟಿಯಾಗಿ ಹಿಡಿದನಾತ.
ಹನುಮ ಬಿಡಿಸಿಕೊಂಡ
ರಕ್ಕಸನ ಹಿಡಿತ,
ನಿಕುಂಭನ ನೆಲಕೆ
ಬೀಳಿಸಿ ಕೆಡವಿದನಾತ.
ಚಕಾರ ತಂ ರಣಾತ್ಮಕೇ ಮಖೇ ರಮೇಶದೈವತೇ ।
ಪಶುಂ ಪ್ರಭಞ್ಜನಾತ್ಮಜೋ ವಿನೇದುರತ್ರ ದೇವತಾಃ ॥೮.೩೪॥
ಯುದ್ಧ ರೂಪವಾದ ಮಹಾವೈಷ್ಣವ ಯಾಗದಲ್ಲಿ,
ಹನುಮ ಕೊಟ್ಟ
ನಿಕುಂಭನೆಂಬ ವಿಶೇಷ ಪಶುಬಲಿ.
ಆಯಿತು ನಿಕುಂಭನ
ಸಂಹಾರ,
ದೇವತೆಗಳು ಹಾಕಿದರು
ಜಯಕಾರ.
No comments:
Post a Comment
ಗೋ-ಕುಲ Go-Kula