Monday 11 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 04 - 06

ಬ್ರಹ್ಮಾತ್ಮಜೇನ ರವಿಜೇನ ಬಲಪ್ರಣೇತ್ರಾ ನೀಲೇನ ಮೈನ್ದವಿವಿದಾಙ್ಗದತಾರಪೂರ್ವೈಃ ।
ಸರ್ವೈಶ್ಚ ಶತ್ರುಸದನಾದುಪಯಾತ ಏಷ ಭ್ರಾತಾsಸ್ಯ ನ ಗ್ರಹಣಯೋಗ್ಯ ಇತಿ 
ಸ್ಥಿರೋಕ್ತಃ ॥೮.೦೪॥
ಜಾಂಬವಂತ ಸುಗ್ರೀವ ನೀಲ ಮೈಂದ ವಿವಿದ ಅಂಗದ ತಾರ,
ಮೊದಲಾದ ಎಲ್ಲ ಕಪಿಗಳಿಂದಲೂ ವಿಭೀಷಣ ಸ್ವೀಕಾರಕ್ಕೆ ನಕಾರ.
ಶತ್ರುವಿನ ಮನೆಯಿಂದ ಬಂದ ಶತ್ರುವಿನ ಸಹೋದರ,
ಹೇಗಿದ್ದರೂ ತಮ್ಮ ಕಡೆ ಸೇರಲರ್ಹನಲ್ಲವೆಂಬ ವಿಚಾರಧಾರ.

ಅತ್ರಾsಹ ರೂಪಮಪರಂ ಬಲದೇವತಾಯಾ ಗ್ರಾಹ್ಯಃ ಸ ಏಷ ನಿತರಾಂ ಶರಣಂ ಪ್ರಪನ್ನಃ ।
ಭಕ್ತಶ್ಚ ರಾಮಪದಯೋರ್ವಿನಶಿಷ್ಣು ರಕ್ಷೋ ವಿಜ್ಞಾಯ ರಾಜ್ಯಮುಪಭೋಕ್ತುಮಿಹಾಭಿಯಾತಃ ॥೮.೦೫॥
ಬಲದ ದೇವತೆ ಮುಖ್ಯಪ್ರಾಣ ರೂಪವಾದ ಹನುಮಂತ,
ಈ ವಿಚಾರದಲ್ಲಿ ಹೇಳುತ್ತಾನೆ ತನ್ನ ವಿವೇಚನೆಯ ಮಾತ.
ಇವನು ಶರಣು ಬಂದ ರಾಮಚಂದ್ರನ ಭಕ್ತ,
ರಾವಣ ನಾಶವಾಗಲಿರುವನೆಂದು ತಿಳಿದಾತ.
ರಾವಣನ ನಂತರದ ರಾಜ್ಯದ ಉತ್ತರಾಧಿಕಾರಿ,
ಸ್ವೀಕಾರಾರ್ಹನಾದ್ದರಿಂದ ಸೇರಿಸಿಕೊಳ್ಳುವುದು ಸರಿ.

ಇತ್ಯುಕ್ತವತ್ಯಥ ಹನೂಮತಿ ದೇವದೇವಃ ಸಙ್ಗೃಹ್ಯ ತದ್ವಚನಮಾಹ ಯಥೈವ ಪೂರ್ವಮ್ ।
ಸುಗ್ರೀವಹೇತುತ ಇಮಂ ಸ್ಥಿರಮಾಗ್ರಹೀಷ್ಯೇ ಪಾದಪ್ರಪನ್ನಮಿದಮೇವ ಸದಾ ವ್ರತಂ 
ಮೇ ॥೮.೦೬॥
ಹನುಮಂತನ ಮಾತ ಕೇಳುತ್ತಿರಲು ಶ್ರೀರಾಮಚಂದ್ರ,
ಸುಗ್ರೀವನಂತೆ ಇವನನ್ನೂ ಸ್ವೀಕರಿಸಿದ ಗುಣಸಾಂದ್ರ.
ಹಿಂದೆಯೂ ಹನುಮನ ಮಾತಿನಂತೆ ಸುಗ್ರೀವನಾಗಿದ್ದ ಒಪ್ಪಿಗೆ,
ಈಗಲೂ ವಿಭೀಷಣಗೆ ಸಿಕ್ಕಿತು ರಾಮಚಂದ್ರದೇವರ ಅಪ್ಪುಗೆ.
ಹನುಮನ ಮಾತ ಕೇಳಿದ ಶ್ರೀರಾಮ,
ಸ್ಪಷ್ಟಪಡಿಸುತ್ತಾನೆ ತನ್ನ ಖಚಿತ ನೇಮ.
ನನ್ನ ಪಾದದಲ್ಲಿ ಯಾರಾಗುತ್ತಾರೋ ಶರಣಾಗತ,
ಅವರನ್ನು ಸ್ವೀಕರಿಸಿ ಅನುಗ್ರಹಿಸುವುದು ನನ್ನ ವ್ರತ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula