ವಿಚೂರ್ಣ್ಣಿತೇ ಧರಾತಳೇ ನಿಜೇ ಸುತೇ ಸ ರಾವಣಃ ।
ನಿಶಮ್ಯ ಶೋಕತಾಪಿತಸ್ತದಗ್ರಜಂ ಸಮಾದಿಶತ್ ॥೭.೩೦॥
ಮಗ ಅಕ್ಷಕುಮಾರನ
ಮರಣವಾರ್ತೆ ಕೇಳಿದ ರಾವಣನಾದ ಶೋಕತಪ್ತ,
ಅವನಣ್ಣ
ಇಂದ್ರಜಿತುವಿಗೆ ಯುದ್ಧಕ್ಕೆ ಹೋಗಲು ಆಜ್ಞೆಯ ಇತ್ತ.
ಅಥೇನ್ದ್ರಜಿನ್ಮಹಾಶರೈರ್ವರಾಸ್ತ್ರಸಮ್ಪ್ರಯೋಜಿತೈಃ ।
ತತಕ್ಷ ವಾನರೋತ್ತಮಂ ನಚಾಶಕದ್ ವಿಚಾಲನೇ ॥೭.೩೧॥
ಇಂದ್ರಜಿತು ಬಳಸಿದ ಹನುಮನ ಮೇಲೆ ಉತ್ತಮ
ಅಸ್ತ್ರಗಳನ್ನೆಲ್ಲ,
ಆದರೂ ಅವನನ್ನು
ಅಲುಗಿಸಲೂ ಇಂದ್ರಜಿತುವಿಗೆ ಸಾಧ್ಯವಾಗಲಿಲ್ಲ.
ಅಥಾಸ್ತ್ರಮುತ್ತಮಂ ವಿಧೇರ್ಯ್ಯುಯೋಜ ಸರ್ವದುಷ್ಷಹಮ್
।
ಸ ತೇನ ತಾಡಿತೋ ಹರಿರ್ವ್ಯಚಿನ್ತಯನ್ನಿರಾಕುಲಃ ॥೭.೩೨॥
ನಂತರ
ಇಂದ್ರಜಿತುವಿನಿಂದ ಬ್ರಹ್ಮಾಸ್ತ್ರದ ಪ್ರಯೋಗ,
ಕೊಂಚವೂ
ವಿಚಲಿತನಾಗದ ಹನುಮ ಯೋಚಿಸಿದನಾಗ.
ಮಯಾ ವರಾ ವಿಲಙ್ಘಿತಾ ಹ್ಯನೇಕಶಃ ಸ್ವಯಮ್ಭುವಃ ।
ಸ ಮಾನನೀಯ ಏವ ಮೇ ತತೋsತ್ರ ಮಾನಯಾಮ್ಯಹಮ್ ॥೭.೩೩॥
ನನ್ನಿಂದಾಗಲೇ
ಆಗಿದೆ ಅನೇಕ ಬ್ರಹ್ಮವರಗಳ ಉಲ್ಲಂಘನೆ,
ಸರ್ವದಾ ಬ್ರಹ್ಮದೇವ
ನನಗೂ ಕೂಡಾ ಬಲು ಮಾನ್ಯನೆ.
ತೋರಿಕೊಳ್ಳುವೆ ಈಗ
ಈ ಅಸ್ತ್ರಕ್ಕಾದಂತೆ ಬಂಧಿತ,
ಹೀಗೆಂದು ಮನದಲ್ಲೇ
ಯೋಚಿಸಿದ ಹನುಮಂತ.
ಇಮೇ ಚ ಕುರ್ಯ್ಯುರತ್ರ ಕಿಂ ಪ್ರಹೃಷ್ಟರಕ್ಷಸಾಂ ಗಣಾಃ ।
ಇತೀಹ ಲಕ್ಷ್ಯಮೇವ ಮೇ ಸ ರಾವಣಶ್ಚ ದೃಶ್ಯತೇ ॥೭.೩೪॥
ಇದಂ ಸಮೀಕ್ಷ್ಯ ಬದ್ಧವತ್ ಸ್ಥಿತಂ ಕಪೀನ್ದ್ರಮಾಶು ತೇ ।
ಬಬನ್ಧುರನ್ಯಪಾಶಕೈರ್ಜ್ಜಗಾಮ ಚಾಸ್ತ್ರಮಸ್ಯ ತತ್ ॥೭.೩೫॥
ಗೊತ್ತಾಗುತ್ತದೆ
ಸಂತಸಗೊಂಡ ರಕ್ಕಸರ ನಡವಳಿಕೆ,
ಸಿದ್ಧವಾಗುತ್ತದೆ
ರಾವಣನ ಭೇಟಿಗೆ ಒಂದು ವೇದಿಕೆ.
ಇಂತು ಯೋಚಿಸಿದ
ಹನುಮ ಬಂಧನಕ್ಕೊಳಗಾದವನಂತೆ ನಿಂತ,
ದೈತ್ಯಪಡೆಯವರ
ಹಗ್ಗಗಳಿಂದ ಕಟ್ಟಿಸಿಕೊಂಡಾದ ಬಂಧಿತ.
ಬ್ರಹ್ಮಾಸ್ತ್ರ ಅವನ ಬಿಟ್ಟು ಹೋಯಿತಂತೆ ಆಗಿ ಅವಮಾನಿತ.
No comments:
Post a Comment
ಗೋ-ಕುಲ Go-Kula