Monday, 25 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 63 - 69


ಹತೇಷು ಪುತ್ರೇಷು ಸ ರಾಕ್ಷಸೇಶಃ ಸ್ವಯಂ ಪ್ರಯಾಣಂ ಸಮರಾರ್ತ್ಥಮೈಚ್ಛತ್ ।
ಸಜ್ಜೀಭವತ್ಯೇವ ನಿಶಾಚರೇಶೇ ಖರಾತ್ಮಜಃ ಪ್ರಾಹ ಧನುರ್ದ್ಧರೋತ್ತಮಃ ॥೮.೬೩॥

ಮಕ್ಕಳು ಹತರಾಗುತಿರಲು ರಾವಣ ತಾನೇ ಯುದ್ಧಕೆ ಹೊರಡಲು ಬಯಸಿದ,
ಅವ ಅನುವಾಗುತಿರುವಂತೆ ಉತ್ತಮ ಧನುರ್ಧಾರಿ ಖರನ ಪುತ್ರ ತಾ ನುಡಿದ.

ನಿಯುಙ್ಕ್ಷ್ವ ಮಾಂ ಮೇ ಪಿತುರನ್ತಕಸ್ಯ ವಧಾಯ ರಾಜನ್ ಸಹಲಕ್ಷ್ಮಣಂ ತಮ್ ।
ಕಪಿಪ್ರವೀರಾಂಶ್ಚ ನಿಹತ್ಯ ಸರ್ವಾನ್ ಪ್ರತೋಷಯೇ ತ್ವಾಮಹಮದ್ಯ ಸುಷ್ಠು ॥೮.೬೪॥

ರಾಜನೇ ನನ್ನ ತಂದೆಯ ಕೊಂದವನನ್ನು ಕೊಲ್ಲಲು ಕೊಡು ನನಗೆ ಅವಕಾಶ,
ಲಕ್ಷ್ಮಣಸಮೇತ ಸಮಸ್ತ ಕಪಿಗಳ ಕೊಂದು ನೀಡುವೆ ನಿನಗೆ ಸಂತೋಷ.

ಇತೀರಿತೇsನೇನ ನಿಯೋಜಿತಃ ಸ ಜಗಾಮ ವೀರೋ ಮಕರಾಕ್ಷನಾಮಾ ।
ವಿಧೂಯ ಸರ್ವಾಂಶ್ಚ ಹರಿಪ್ರವೀರಾನ್ ಸಹಾಙ್ಗದಾನ್ ಸೂರ್ಯ್ಯಸುತೇನ ಸಾಕಮ್ ॥೮.೬೫॥

ಹೀಗೆ ಹೇಳಿದ ಮಕರಾಕ್ಷ ರಾವಣನಿಂದ ಆಜ್ಞಪ್ತನಾಗಿ ಯುದ್ಧಕ್ಕೆ ನಡೆದ.
ಅಂಗದ ಮುಂತಾದ ಕಪಿವೀರರನ್ನು ಸುಗ್ರೀವನೊಡನೆ ಓಡಿಸುವವನಾದ.
ಸಮಸ್ತ ಕಪಿವೀರರನ್ನು ನಿರಾಕರಿಸುತ್ತಾ ಶ್ರೀರಾಮನ ಬಳಿಗೇ  ಸಾಗಿದ.

ಅಚಿನ್ತಯನ್  ಲಕ್ಷ್ಮಣಬಾಣಸಙ್ಘಾನವಜ್ಞಯಾ ರಾಮಮಥಾsಹ್ವಯದ್ ರಣೇ ।
ಉವಾಚ ರಾಮಂ ರಜನೀಚರೋsಸೌ ಹತೋ ಜನಸ್ಥಾನಗತಃ ಪಿತಾ ತ್ವಯಾ ॥೮.೬೬॥
ಕೇನಾಪ್ಯುಪಾಯೇನ ಧನುರ್ದ್ಧರಾಣಾಂ ವರಃ ಫಲಂ ತಸ್ಯ ದದಾಮಿ ತೇsದ್ಯ ।
ಇತಿ ಬ್ರುವಾಣಃ ಸ ಸರೋಜಯೋನೇರ್ವರಾದವದ್ಧ್ಯೋsಮುಚದಸ್ತ್ರಸಙ್ಘಾನ್ ॥೮.೬೭॥

ಮಕರಾಕ್ಷ ಲಕ್ಷ್ಮಣನ ಬಾಣಗಳ ಅನಾದರದಿಂದ ಲೆಕ್ಕಿಸದೇ ನಡೆದ,
ಯುದ್ಧಕ್ಕೆ ಶ್ರೀರಾಮಚಂದ್ರನನ್ನೇ ಆಹ್ವಾನಿಸುತ್ತಾ ಹೀಗೆ ಹೇಳಿದ.
ಶ್ರೇಷ್ಠ ಧನುರ್ಧಾರಿಯಾದ ನನ್ನ ತಂದೆಯ ಮೋಸದಿ ನೀ ಕೊಂದೆ,
ಅದಕೆ ಪ್ರತಿಫಲವ ನಾನು ಕೊಡಲು ಬಂದಿರುವೆ ನಿನಗಿಂದೇ.
ಹೀಗೆ ಹೇಳುತ್ತಿದ್ದವ ಅವಧ್ಯನಾಗಿದ್ದ ಬ್ರಹ್ಮ ವರದಿಂದ,
ಅಂಥಾ ಮಕರಾಕ್ಷ ರಾಮನೆಡೆಗೆ ಅಸ್ತ್ರಗಳ ಬಿಡುತ್ತಿದ್ದ.

ಪ್ರಹಸ್ಯ ರಾಮೋsಸ್ಯ ನಿವಾರ್ಯ್ಯ ಚಾಸ್ತ್ರೈರಸ್ತ್ರಾಣ್ಯಮೇಯೋsಶನಿಸನ್ನಿಭೇನ ।
ಶಿರಃ ಶರೇಣೋತ್ತಮಕುಣ್ಡಲೋಜ್ಜ್ವಲಂ ಖರಾತ್ಮಜಸ್ಯಾಥ ಸಮುನ್ಮಮಾಥ ॥೮.೬೮॥

ಅಪ್ರಮೇಯ ಶ್ರೀರಾಮ ನಸುನಗುತಾ ಅವನ ಅಸ್ತ್ರಗಳ ತಡೆದ,
ವಜ್ರಾಯುಧದಂಥ ಬಾಣದಿ ಕುಂಡಲದಿ ಹೊಳೆವ ಅವನ ಶಿರವ ತರಿದ.

ವಿದುದ್ರುವುಸ್ತಸ್ಯ ತು ಯೇsನುಯಾಯಿನಃ ಕಪಿಪ್ರವೀರೈರ್ನ್ನಿಹತಾವಶೇಷಿತಾಃ ।
ಯಥೈವ ಧೂಮ್ರಾಕ್ಷಮುಖೇಷು ಪೂರ್ವಂ ಹತೇಷು ಪೃಥ್ವೀರುಹಶೈಲಧಾರಿಭಿಃ ॥೮.೬೯॥

ಹಿಂದೆ ಧೂಮ್ರಾಕ್ಷ ಮುಂತಾದವರು ಹತರಾದಾಗ ಹೇಗೆ ಓಡಿದ್ದರೋ ಹಾಗೆ,
ಮರ ಬೆಟ್ಟ ಹಿಡಿದ ಕಪಿಗಳಿಂದ ಹತರಾಗದುಳಿದವರ ಪಲಾಯನಗೈದ ಬಗೆ.

No comments:

Post a Comment

ಗೋ-ಕುಲ Go-Kula