Saturday 9 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 01 - 03


।। ಓಂ ।।

             ಹನೂಮತಿ ಶ್ರೀರಾಮದಯಾದಾನಮ್

ಶ್ರುತ್ವಾಹನೂಮದುದಿತಂ ಕೃತಮಸ್ಯ ಸರ್ವಂಪ್ರೀತಃ ಪ್ರಯಾಣಮಭಿರೋಚಯತೇ ಸ 
ರಾಮಃ ।
ಆರುಹ್ಯ ವಾಯುಸುತಮಙ್ಗದಗೇನ ಯುಕ್ತಃ ಸೌಮಿತ್ರಿಣಾ ಸರವಿಜಃ ಸಹ 
ಸೇನಯಾsಗಾತ್ ॥೮.೦೧॥
ಹನುಮ ಹೇಳಿದ ಎಲ್ಲಾ ವಾರ್ತೆ ಕರ್ಮಗಳ ಆಲಿಸಿದ ರಾಮಚಂದ್ರ,
ಸಂತುಷ್ಟನಾಗಿ ಲಂಕೆಗೆ ಪ್ರಯಾಣ ಬೆಳೆಸಲು ಬಯಸಿದ ಗುಣಸಾಂದ್ರ.
ಹನುಮನ ಹೆಗಲೇರಿದ ರಾಮ ಅಂಗದನ ಹೆಗಲೇರಿದ ಲಕ್ಷ್ಮಣ,
ಸುಗ್ರೀವಾದಿ ಕಪಿಸೈನ್ಯದೊಂದಿಗೆ ಆರಂಭಿಸಿದರು ಲಂಕಾ ಪಯಣ.

ಸಮ್ಪ್ರಾಪ್ಯ ದಕ್ಷಿಣಮಪಾಂನ್ನಿಧಿಮತ್ರ ದೇವಃ ಶಿಶ್ಯೇ ಜಗದ್ಗುರುತಮೋsಪ್ಯವಿಚಿನ್ತ್ಯಶಕ್ತಿಃ ।
ಅಗ್ರೇ ಹಿ ಮಾರ್ದ್ದವಮನುಪ್ರಥಯನ್ ಸ ಧರ್ಮ್ಮಂ ಪನ್ಥಾನಮರ್ತ್ಥಿತುಮಪಾಮ್ಪತಿತಃ ಪ್ರತೀತಃ॥೮.೦೨॥
ಸಾಗಿ ಬಂದು ಸೇರಿದರೆಲ್ಲ ದಕ್ಷಿಣದ ಸಮುದ್ರ ತೀರ,
ಸರ್ವಸಮರ್ಥನಾದರೂ ತೆರೆದ ವಾಡಿಕೆಯ ಮೃದುದ್ವಾರ.
ಸಮುದ್ರರಾಜಗೆ ತಿಳಿಸಿ ದಾರಿಕೇಳುವ ರಾಮನ ಪರಿ,
ದರ್ಭೆಯ ಮೇಲೆ ಪವಡಿಸಿದ ತಾಳ್ಮೆಯ ಧನುರ್ಧಾರಿ.

ತತ್ರಾsಜಗಾಮ ಸ ವಿಭಿಷಣನಾಮಧೇಯೋ ರಕ್ಷಃ ಪತೇರವರಜೋsಪ್ಯಥ ರಾವಣೇನ ।
ಭಕ್ತೋsಧಿಕಂ ರಘುಪತಾವಿತಿ ಧರ್ಮ್ಮನಿಷ್ಠಸ್ತ್ಯಕ್ತೋ ಜಗಾಮ ಶರಣಂ ಚ ರಘೂತ್ತಮಂ 
ತಮ್ ॥೮.೦೩॥
ರಾವಣನ ತಮ್ಮನಾದ ವಿಭೀಷಣ,
ದೈವಭಕ್ತ ಧರ್ಮನಿಷ್ಠನಾದ ಕಾರಣ,
ಅಣ್ಣ ರಾವಣನಿಂದ ಆಗಿದ್ದ ಪರಿತ್ಯಕ್ತ.
ರಾಮನಲ್ಲಿಗೆ ಬಂದಾದ ಶರಣಾಗತ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula