Thursday, 7 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 42 - 47

ಇತೀರಿತೇ ವಧೋದ್ಯತಂ ನ್ಯವಾರಯದ್ ವಿಭೀಷಣಃ ।
ಸ ಪುಚ್ಛದಾಹಕರ್ಮ್ಮಣಿ ನ್ಯಯೋಜಯನ್ನಿಶಾಚರಾನ್ ॥೭.೪೨॥

ಹನುಮಂತನಿಂದ ಶ್ರೀರಾಮನ ಕುರಿತು ಪ್ರಸ್ತಾಪ,
ಹನುಮನ ಕೊಲ್ಲಲು ರಾವಣ ತೊಟ್ಟ ಸಂಕಲ್ಪ.
ದೂತನ ವಧೆ ತಡೆಯುತ್ತಾನೆ ತಮ್ಮ ವಿಭೀಷಣ,
ಹನುಮನ ಬಾಲ ಸುಡಿರೆನ್ನುತ್ತಾನೆ ಅಣ್ಣ ರಾವಣ.

ಅಥಾಸ್ಯ ವಸ್ತ್ರಸಞ್ಚಯೈಃ ಪಿಧಾಯ ಪುಚ್ಛಮಗ್ನಯೇ ।
ದದುರ್ದ್ದದಾಹ ನಾಸ್ಯ ತನ್ಮರುತ್ಸಖೋ ಹುತಾಶನಃ ॥೭.೪೩॥

ರಾಕ್ಷಸರೆಲ್ಲ ಹನುಮನ ಬಾಲವ ಬಟ್ಟೆಗಳಿಂದ ಮುಚ್ಚಿ,
ಸಂಭ್ರಮಿಸಿದರೆಲ್ಲಾ ದೂತನ ಬಾಲಕೆ ಬೆಂಕಿಯ ಹಚ್ಚಿ.
ಆ ಬೆಂಕಿ ಬಾಲವ ಸುಡಲಿಲ್ಲ ತಾನು,
ಅಗ್ನಿ ವಾಯುವಿನ ಸಖನಲ್ಲವೇನು.

ಮಮರ್ಷ ಸರ್ವಚೇಷ್ಟಿತಂ ಸ ರಕ್ಷಸಾಂ ನಿರಾಮಯಃ ।
ಬಲೋದ್ಧತಶ್ಚ ಕೌತುಕಾತ್ ಪ್ರದಗ್ಧುಮೇವ ತಾಂ ಪುರೀಮ್ ॥೭.೪೪॥

ಬಲವಂತ ಹನುಮಗೆ ಇವರಿಂದೇನು ತೊಂದರೆ ಕಾಟ,
ರಕ್ಕಸರ ಎಲ್ಲಾ ಚೇಷ್ಟೆಗಳ ಸಹಿಸುತ್ತಾ ಸುಮ್ಮನಿದ್ದ ಆಟ.
ಇವರೇನು ಮಾಡುತ್ತಾರೆ ನೋಡುವ ಎಂಬ ಕುತೂಹಲ,
ಮನದಲ್ಲೇ ಹೆಣೆದ ಲಂಕಾಪಟ್ಟಣವನ್ನು ಸುಡುವ ಜಾಲ.


ದದಾಹ ಚಾಖಿಲಂ ಪುರಂ ಸ್ವಪುಚ್ಛಗೇನ ವಹ್ನಿನಾ ।
ಕೃತಿಸ್ತು ವಿಶ್ವಕರ್ಮ್ಮಣೋsಪ್ಯದಹ್ಯತಾಸ್ಯ ತೇಜಸಾ ॥೭.೪೫॥

ಬಾಲದಲ್ಲಿದ್ದ ಬೆಂಕಿಯಿಂದ ಹನುಮ ಲಂಕೆಯನ್ನೆಲ್ಲಾ ಸುಟ್ಟ,
ವಿಶ್ವಕರ್ಮನ ನಿರ್ಮಾಣ ಕೂಡಾ ಅಗ್ನಿಗಾಯಿತು ತಾ ಊಟ.

ಸುವರ್ಣ್ಣರತ್ನಕಾರಿತಾಂ ಸ ರಾಕ್ಷಸೋತ್ತಮೈಃ ಸಹ ।
ಪ್ರದಹ್ಯಸರ್ವಶಃ ಪುರೀಂ ಮುದಾsನ್ವಿತೋ ಜಗರ್ಜ್ಜ ಚ ॥೭.೪೬॥

ಅನೇಕ ರಾಕ್ಷಸ ಶ್ರೇಷ್ಠರ ಪರಿವಾರ,
ಬಂಗಾರ ರತ್ನಗಳಿಂದಾದ ಲಂಕಾನಗರ,
ಹನುಮ ನೀಡಿದನೆಲ್ಲವ ಅಗ್ನಿಗೆ ಆಹಾರ.
ಸಂತಸದಿ ಗಟ್ಟಿಯಾಗಿ ಘರ್ಜಿಸಿದ ಧೀರ.

ಸ ರಾವಣಂ ಸಪುತ್ರಕಂ ತೃಣೋಪಮಂ ವಿಧಾಯ ಚ ।
ತಯೋಃ ಪ್ರಪಶ್ಯತೋಃ ಪುರಂ ವಿಧಾಯ ಭಸ್ಮಸಾದ್ ಯಯೌ ॥೭.೪೭॥

ಇಂದ್ರಜಿತು ರಾವಣಾದಿಗಳ ಬಲಿಷ್ಠ ಕೂಟ,
ಹನುಮಗದು ಹುಲ್ಲಿಗಿಂತ ಕಡೆಯಾದ ನೋಟ.
ಅವರ ಕಣ್ಣೆದುರೇ ಸುಟ್ಟ ಲಂಕೆಯ ಬೀದಿ ಬೀದಿ,
ತೆರಳಿದ ಹನುಮ ಲಂಕಾಪಟ್ಟಣವ ಮಾಡಿ ಬೂದಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula