Thursday, 28 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 83 - 88

ತತೋ ಯಯೌ ರಾಘವಮೇವ ರಾವಣೋ ನಿವಾರಯಾಮಾಸ ತಮಾಶು ಲಕ್ಷ್ಮಣಃ ।
ತತಕ್ಷತುಸ್ತಾವಧಿಕೌ ಧನುರ್ಭೃತಾಂ ಶರೈಃ ಶರೀರಾವರಣಾವದಾರಣೈಃ ॥೮.೮೩॥

ತದನಂತರ ರಾವಣ ಶ್ರೀರಾಮನತ್ತ  ಯುದ್ಧಕ್ಕೆಂದು ನಡೆದ.
ಹೀಗೆ ಹೊರಟ ರಾವಣನನ್ನು ಶೀಘ್ರವಾಗಿ  ಲಕ್ಷ್ಮಣ ತಡೆದ.
ಬಿಲ್ಲುಗಾರರಲ್ಲೇ  ಉತ್ತಮರಾದ ಅವರಿಬ್ಬರು,
ಕವಚ ಸೀಳುವ ಬಾಣಗಳಿಂದ ಯುದ್ಧ ಮಾಡಿದರು.

ನಿವಾರಿತಸ್ತೇನ ಸ ರಾವಣೋ ಭೃಶಂ ರುಷಾsನ್ವಿತೋ ಬಾಣಮಮೋಘಮುಗ್ರಮ್ ।
ಸ್ವಯಂಭುದತ್ತಂ ಪ್ರವಿಕೃಷ್ಯ ಚಾsಶು ಲಲಾಟಮಧ್ಯೇ ಪ್ರಮುಮೋಚ ತಸ್ಯ ॥೮.೮೪॥

ಲಕ್ಷ್ಮಣನಿಂದ ತಡೆಯಲ್ಪಟ್ಟ ಸಿಟ್ಟಿನಿಂದ ಕೂಡಿದ ರಾವಣ,
ಸೆಳೆದು ಬಿಟ್ಟ  ಬ್ರಹ್ಮದತ್ತ ವ್ಯರ್ಥವಾಗದ ಭಯಂಕರ ಬಾಣ,
ಗುರಿ ಇಟ್ಟಿದ್ದ  ಅದನ್ನು ಲಕ್ಷ್ಮಣನ ಹಣೆಯ ಮಧ್ಯದ ತಾಣ.

ಭೃಶಾಹತಸ್ತೇನ ಮುಮೋಹ ಲಕ್ಷ್ಮಣೋ ರಥಾದವಪ್ಲುತ್ಯ ದಶಾನನೋsಪಿ ।
ಕ್ಷಣಾದಭಿದ್ರುತ್ಯ ಬಲಾತ್ ಪ್ರಗೃಹ್ಯ ಸ್ವಭಾಹುಭಿರ್ನ್ನೆತುಮಿಮಂ ಸಮೈಚ್ಛತ್ ॥೮.೮೫॥

ಆ ಬಾಣದಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟ ಲಕ್ಷ್ಮಣ ಮೂರ್ಛಿತನಾದ
ತಕ್ಷಣ ರಾವಣ ತನ್ನ ರಥದಿಂದ ಕೆಳಗೆ ಹಾರಿ ಲಕ್ಷ್ಮಣನಿದ್ದಲ್ಲಿಗೆ ಓಡಿಬಂದ.
ತನ್ನಿಪ್ಪತ್ತು ಬಾಹುಗಳಿಂದ ಲಕ್ಷ್ಮಣನನ್ನು ಲಂಕೆಗೆ ಹೊತ್ತೊಯ್ಯಲು ಅನುವಾದ.

ಸಮ್ಪ್ರಾಪ್ಯ ಸಙ್ಜ್ಞಾಂ ಸ ಸುವಿಹ್ವಲೋsಪಿ ಸಸ್ಮಾರ ರೂಪಂ ನಿಜಮೇವ ಲಕ್ಷ್ಮಣಃ ।
ಶೇಷಂ ಹರೇರಂಶಯುತಂ ನಚಾಸ್ಯ ಸ ಚಾಲನಾಯಾಪಿ ಶಶಾಕ ರಾವಣಃ ॥೮.೮೬॥

ಒಂದಷ್ಟು ವಿಚಲಿತನಾದರೂ ಲಕ್ಷ್ಮಣ,
ಸ್ಮರಣೆ ಮಾಡಿದ ಭಗವದ್ರೂಪ ಸಂಕರ್ಷಣ.
ಯಾವಾಗೊದಗಿತೋ ಲಕ್ಷ್ಮಣಗೆ ಮೂಲರೂಪದ ಸ್ಮರಣಾಶಕ್ತಿ,
ಲಕ್ಷ್ಮಣನ ಅಲುಗಾಡಿಸಲೂ ಆಗಲಿಲ್ಲ ರಾವಣನ ಯಾವ ಯುಕ್ತಿ.

ಬಲಾತ್ ಸ್ವದೋರ್ಭಿಃ ಪ್ರತಿಗೃಹ್ಯ ಚಾಖಿಲೈರ್ಯ್ಯದಾ ಸ ವೀರಂ ಪ್ರಚಕರ್ಷ ರಾವಣಃ ।
ಚಚಾಲ ಪೃಥ್ವೀ ಸಹಮೇರುಮನ್ದರಾ ಸಸಾಗರಾ ನೈವ ಚಚಾಲ ಲಕ್ಷ್ಮಣಃ ॥೮.೮೭॥

ರಾವಣ ತನ್ನೆಲ್ಲಾ ಕೈಗಳಿಂದ ಲಕ್ಷ್ಮಣನ ಬಲಿಷ್ಠವಾಗಿ ಹಿಡಿದು ಎಳೆದ ಆ ಪ್ರಯತ್ನ,
ಮೇರು-ಮಂದಾರ ಪರ್ವತ ಸಮುದ್ರ ಕೂಡಿರುವ ಭೂಮಿಗಾಯಿತಂತೆ ಕಂಪನ,
ಇಷ್ಟೆಲ್ಲಾ ಆದರೂ ಅಲ್ಲೋಲಕಲ್ಲೋಲ,
ಲಕ್ಷ್ಮಣನ ಅಲುಗಾಡಿಸಲು ಅವನಿಂದಾಗಲಿಲ್ಲ




ಸಹಸ್ರಮೂರ್ಧ್ನೋsಸ್ಯ ಬತೈಕಮೂರ್ಧ್ನಿ ಸಸಪ್ತಪಾತಾಳಗಿರೀನ್ದ್ರಸಾಗರಾ ।
ಧರಾsಖಿಲೇಯಂ ನನು ಸರ್ಷಪಾಯತಿ ಪ್ರಸಹ್ಯ ಕೋ ನಾಮ ಹರೇತ್ ತಮೇನಮ್ ॥೮.೮೮॥

ಸಾವಿರ ಹೆಡೆಗಳುಳ್ಳ  ಶೇಷನ ಒಂದು ಹೆಡೆಯಲ್ಲಿ ,
ಏಳು ಪಾತಾಳ ಲೋಕ ಮತ್ತು ದೊಡ್ಡಬೆಟ್ಟಗಳಲ್ಲಿ ,
ಸಾಗರಗಳೂ,ಸಮಗ್ರ ಭೂಮಿ ಸಾಸಿವೆಯಂತೆ ಅಲ್ಲಿ.
ಅಂತಹ ಶೇಷನ ಅವತಾರಿಯಾದ ಲಕ್ಷ್ಮಣನನ್ನು,
ಯಾರು ತಾನೇ ಎಳೆದೊಯ್ಯಲು ಸಾಧ್ಯವಿನ್ನು.


No comments:

Post a Comment

ಗೋ-ಕುಲ Go-Kula