ವವರ್ಷತುಸ್ತಾವತಿಮಾತ್ರವೀರ್ಯ್ಯೌ ಶರಾನ್ ಸುರೇಶಾಶನಿತುಲ್ಯವೇಗಾನ್ ।
ತಮೋಮಯಂ ಚಕ್ರತುರನ್ತರಿಕ್ಷಂ ಸ್ವಶಿಕ್ಷಯಾ ಕ್ಷಿಪ್ರತಮಾಸ್ತಬಾಣೈಃ
॥೮.೫೮॥
ಲಕ್ಷ್ಮಣ
ಅತಿಕಾಯರಿಬ್ಬರೂ ಅತ್ಯಂತ ಪರಾಕ್ರಮಿಗಳಾಗಿದ್ದರು,
ಇಂದ್ರನ
ವಜ್ರಾಯುಧದಷ್ಟು ವೇಗದ ಬಾಣಗಳ ಸುರಿಸಿಕೊಂಡರು.
ಅಭ್ಯಾಸ ಕೌಶಲಗಳಿಂದ
ಬಾಣಗಳ ಮಳೆಗರೆದರು ಸತತ,
ಬಾಣಮೋಡಗಳಿಂದಾಯಿತು
ಅಂತರಿಕ್ಷ ಕತ್ತಲಿಂದಾವೃತ.
ಶರೈಃ ಶರಾನಸ್ಯ ನಿವಾರ್ಯ್ಯ ವೀರಃ ಸೌಮಿತ್ರಿರಸ್ತ್ರಾಣಿ
ಮಹಾಸ್ತ್ರಜಾಲೈಃ ।
ಚಿಚ್ಛೇದ ಬಾಹೂ ಶಿರಸಾ ಸಹೈವ ಚತುರ್ಭುಜೋsಭೂತ್ ಸ ಪುನದ್ದ್ವಿಷೀರ್ಷಃ ॥೮.೫೯॥
ವೀರಲಕ್ಷ್ಮಣ ತನ್ನ
ಬಾಣಗಳಿಂದ ಅವನ ಬಾಣಗಳ ತಡೆದ ,
ತನ್ನಸ್ತ್ರಗಳಿಂದ
ಅವನಸ್ತ್ರಗಳ ತಡೆದು ನಿಲ್ಲಿಸುತ ಕತ್ತರಿಸಿದ.
ಲಕ್ಷ್ಮಣ ಅವನ ಬಾಹು
ಶಿರಸ್ಸನ್ನು ಕತ್ತರಿಸಲಾಗ,
ನಾಕು ಬಾಹು ಎರಡು
ತಲೆಗಳಿರುವವನಾದನಾಗ.
ಛಿನ್ನೇಷು ತೇಷು ದ್ವಿಗುಣಾಸ್ಯಬಾಹುಃ ಪುನಃ ಪುನಃ ಸೋsಥ ಬಭೂವ
ವೀರಃ ।
ಉವಾಚ ಸೌಮಿತ್ರಿಮಥಾನ್ತರಾತ್ಮಾ ಸಮಸ್ತಲೋಕಸ್ಯ ಮರುದ್ ವಿಷಣ್ಣಮ್
॥೮.೬೦॥
ಲಕ್ಷ್ಮಣ ಅವನ ಆ ಬಾಹು
ಶಿರಸ್ಸುಗಳ ಛೇದಿಸಿದ,
ಆತ ಮತ್ತೆರಡರಷ್ಟು
ಬಾಹು ಶಿರಸ್ಸುಗಳುಳ್ಳವನಾದ.
ಹೀಗೇ ಇದೇ ರೀತಿ ಪುನರಾವರ್ತಿಸುತ್ತಿರುವಾಗ,
ವಿಷಣ್ಣ ಲಕ್ಷ್ಮಣಗೆ
ಸರ್ವಾಂತರ್ಯಾಮಿ ಪ್ರಾಣ ನುಡಿದನಾಗ.
ಬ್ರಹ್ಮಾಸ್ತ್ರತೋsನ್ಯೇನ ನ
ವಧ್ಯ ಏಷ ವರಾದ್ ವಿಧಾತುಃ ಸುಮುಖೇತ್ಯದೃಶ್ಯಃ ।
ರಕ್ಷಃಸುತಸ್ಯಾಶ್ರವಣೀಯಮಿತ್ಥಮುಕ್ತ್ವಾ ಸಮೀರೋsರುಹದನ್ತರಿಕ್ಷಮ್
॥೮.೬೧॥
ಸುಂದರಮೊಗದವನೇ
ಅವನಿಗಿದೆ ಬ್ರಹ್ಮವರ,
ಬ್ರಹ್ಮಾಸ್ತ್ರದಿಂದಲ್ಲದೇ
ಆಗದವನ ಸಂಹಾರ.
ಅತಿಕಾಯಗೆ ಕಾಣದಂತೆ
ಕೇಳದಂತೆ ಲಕ್ಷ್ಮಣಗೆ ಹೇಳಿದ,
ಅಷ್ಟು ಹೇಳಿದ
ವಾಯುಪುತ್ರ ಹನುಮ ಅಂತರಿಕ್ಷಕ್ಕೆ ಹಾರಿದ.
ಅಥಾನುಜೋ ದೇವತಮಸ್ಯ ಸೋsಸ್ತ್ರಂ
ಬ್ರಾಹ್ಮಂ ತನೂಜೇ ದಶಕನ್ಧರಸ್ಯ ।
ಮುಮೋಚ ದಗ್ಧಃ ಸರಥಾಶ್ವಸೂತಸ್ತೇನಾತಿಕಾಯಃ ಪ್ರವರೋsಸ್ತ್ರವಿತ್ಸು
॥೮.೬೨॥
ಆಗ ರಾಮನನುಜ
ಲಕ್ಷ್ಮಣ ಮಾಡಿದ ಅತಿಕಾಯನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ,
ಉತ್ತಮ ಅಸ್ತ್ರಜ್ಞನಾದ ಅತಿಕಾಯ ರಥ ಕುದುರೆ ಸಾರಥಿಗಳೊಂದಿಗೆ
ಭಸ್ಮವಾದನಾಗ.
No comments:
Post a Comment
ಗೋ-ಕುಲ Go-Kula