ಪ್ರಾಪ್ತಂ ನಿಶಾಮ್ಯ ಪರಮಂ ಭುವನೈಕಸಾರಂ ನಿಃಸೀಮಪೌರುಷಮನನ್ತಮಸೌ
ದಶಾಸ್ಯಃ ।
ತ್ರಾಸಾದ್ ವಿಷಣ್ಣಹೃದಯೋ ನಿತರಾಂ ಬಭೂವ ಕರ್ತ್ತವ್ಯಕರ್ಮ್ಮವಿಷಯೇ ಚ
ವಿಮೂಢಚೇತಾಃ॥೮.೧೬॥
ಲೋಕದಲ್ಲಿಯೇ
ಅಪ್ರತಿಮ ಬಲವಂತ,
ಅಪಾರ ಪೌರುಷದ
ಸರ್ವೋತ್ತಮ ಅನಂತ.
ಅಂಥಾ ಶ್ರೀರಾಮ
ಲಂಕೆಗೆ ಬಂದ ಸುದ್ದಿ ಕೇಳಿದ ರಾವಣ,
ಏನೂ ತೋಚದೇ ಭಯ ಖಿನ್ನತೆಯಿಂದಾದ ವಿಷಣ್ಣ.
ಪ್ರಸ್ಥಾಪ್ಯ ವಾಲಿಸುತಮೇವ ಚ ರಾಜನೀತ್ಯೈ ರಾಮಸ್ತದುಕ್ತವಚನೇsಪ್ಯಮುನಾsಗೃಹೀತೇ ।
ದ್ವಾರೋ ರುರೋಧ ಸ ಚತಸ್ರ ಉದೀರ್ಣ್ಣಸೈನ್ಯೋ ರಕ್ಷಃಪತೇಃ ಪುರ
ಉದಾರಗುಣಃ
ಪರೇಶಃ॥೮.೧೭॥
ಅತ್ಯುತ್ತಮ ಗುಣವಂತ
ದೇವತೆಗಳ ದೇವ ಪರಮೇಶ್ವರ,
ಅಂಗದನ
ರಾಯಭಾರಿಯಾಗಿ ಕಳುಹಿದ ರಾಜನೀತಿಗನುಸಾರ.
ಅಂಗದ ಕೊಂಡೊಯ್ದ
ಮಾತ ರಾವಣ ಮಾಡದಿದ್ದಾಗ ಸ್ವೀಕಾರ,
ಶ್ರೀರಾಮ
ಪ್ರತಿಭಂಧಿಸಿದ ಲಂಕಾಪಟ್ಟಣದ ನಾಕೂದ್ವಾರ.
ದ್ವಾರಾಂ ನಿರೋಧಸಮಯೇ ಸ ದಿದೇಶ ಪುತ್ರಂ ವಾರಾಮ್ಪತೇರ್ದ್ಧಿಶಿ
ಸುರೇಶ್ವರಶತ್ರುಮುಗ್ರಮ್ ।
ಪ್ರಾಚ್ಯಾಂ ಪ್ರಹಸ್ತಮದಿಶದ್ ದಿಶಿ ವಜ್ರದಂಷ್ಟ್ರಂ ಪ್ರೇತಾಧಿಪಸ್ಯ
ಶಶಿನಃ ಸ್ವಯಮೇವ ಚಾಗಾತ್ ॥೮.೧೮॥
ರಾವಣನರಿವಿಗೆ ಬಂತು
ರಾಮ ತನ್ನ ಪಟ್ಟಣಕ್ಹಾಕಿದ ಮುತ್ತಿಗೆ,
ಅತಿದುಷ್ಟನಾದ ಮಗ
ಇಂದ್ರಜಿತುವ ಕಳಿಸಿದ ಪಶ್ಚಿಮ ದಿಕ್ಕಿಗೆ,
ಪ್ರಹಸ್ತನ
ಕಳಿಸಿಕೊಟ್ಟ ಪೂರ್ವ ದಿಕ್ಕಿಗೆ.
ದಕ್ಷಿಣಕೆ
ವಜ್ರದಂಷ್ಟ್ರನ ಕಳಿಸಿದ ಆತ,
ಉತ್ತರದೆಡೆಗೆ ತಾನೇ
ಹೊರಟು ನಿಂತ.
No comments:
Post a Comment
ಗೋ-ಕುಲ Go-Kula