ಸಬ್ರಹ್ಮಕಾಃ ಸುರಗಣಾಃ ಸಹದೈತ್ಯಮರ್ತ್ತ್ಯಾಃ ಸರ್ವೇ ಸಮೇತ್ಯ ಚ
ಮದಙ್ಗುಲಿಚಾಲನೇsಪಿ ।
ನೇಶಾ ಭಯಂ ನ ಮಮ ರಾತ್ರಿ ಚರಾದಮುಷ್ಮಾಚ್ಛುದ್ಧಸ್ವಭಾವ ಇತಿ ಚೈನಮಹಂ
ವಿಜಾನೇ ॥೮.೦೭॥
ಬ್ರಹ್ಮಾದಿ ದೇವತಾ
ಸಮೂಹವಾಗಲೀ,
ದಾನವ ,ಬಲವಂತ ಮಾನವರಾಗಲೀ,
ಎಲ್ಲರೂ ಒಟ್ಟಾಗಿ
ಸೇರಿ ಬಂದರೂ,
ನನ್ನೊಂದು
ಬೆರಳನ್ನೂ ಅಲುಗಿಸಲಾರರು.
ನನಗಿಲ್ಲ ಈ
ರಕ್ಕಸನಿಂದ್ಯಾವ ಭಯ,
ಗೊತ್ತೆನಗೆ ಇವನು
ಶುದ್ಧ ಸ್ವಭಾವದವ.
ಇತ್ಯುಕ್ತವಾಕ್ಯ ಉತ ತಂ ಸ್ವಜನಂ ವಿಧಾಯ ರಾಜ್ಯೇsಭ್ಯಷೇಚಯದಪಾರಸುಸತ್ತ್ವರಾಶಿಃ
।
ಮತ್ವಾತೃಣೋಪಮಮಶೇಷಸದನ್ತಕಂ ತಂ ರಕ್ಷಃಪತಿಂ ತ್ವವರಜಸ್ಯ ದದೌ ಸ
ಲಙ್ಕಾಮ್ ॥೮.೦೮॥
ಹೀಗೆ ಮಾತಾಡಿದ
ಶ್ರೀರಘುಕುಲತೇಜ,
ಭೃತ್ಯನ ಮಾಡಿದ
ಲಂಕಾದೇಶದ ರಾಜ.
ಆದರೇನಂತೆ ಬಲವಂತ
ಯಮಸ್ವರೂಪಿಯಾದ ರಾವಣ,
ರಾಮನೆದುರು
ತೃಣಸಮಾನವಾಗಿ ಅಭಿಷಿಕ್ತನಾದ ವಿಭೀಷಣ.
ಕಲ್ಪಾನ್ತಮಸ್ಯ ನಿಶಿಚಾರಿಪತಿತ್ವಪೂರ್ವಮಾಯುಃ ಪ್ರದಾಯ ನಿಜಲೋಕಗತಿಂ
ತದನ್ತೇ ।
ರಾತ್ರಿತ್ರಯೇsಪ್ಯನುಪಗಾಮಿನಮೀಕ್ಷ್ಯ
ಸೋsಬ್ಧಿಂಚುಕ್ರೋಧ ರಕ್ತನಯನಾನ್ತಮಯುಞ್ಜದಬ್ಧೌ॥೮.೦೯॥
ಕಲ್ಪಾಂತ್ಯದವರೆಗೂ
ಇರುವ ರಾಕ್ಷಸಾಧಿಪತ್ಯಕ್ಕೆ ಆಯುಷ್ಯ,
ವಿಭೀಷಣಗಿತ್ತ
ಕೊನೆಯಲ್ಲಿ ತನ್ನ ಲೋಕ ಪ್ರಾಪ್ತಿಯ ಭವಿಷ್ಯ.
ಇಷ್ಟೆಲ್ಲಾ
ಅನುಗ್ರಹವಿತ್ತ ಶ್ರೀರಾಮಚಂದ್ರ ವಿಭೀಷಣಗೆ,
ಕೆಂಗಣ್ಣ ಬಿಟ್ಟ ತ್ರಿರಾತ್ರಿಯಾದರೂ ಬಾರದ ವರುಣನೆಡೆಗೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula