Monday 4 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 22 - 29


ಪುನಶ್ಚ ಮನ್ತ್ರಿಪುತ್ರಕಾನ್ ಸ ರಾವಣಪ್ರಚೋದಿತಾನ್ ।
ಮಮರ್ದ್ಧ ಸಪ್ತ ಪರ್ವತಪ್ರಭಾನ್ ವರಾಭಿರಕ್ಷಿತಾನ್ ॥೭.೨೨॥
ಬಲಾಗ್ರಗಾಮಿನಸ್ತಥಾ ಸ ಶರ್ವವಾಕ್ಸುಗರ್ವಿತಾನ್ ।
ನಿಹತ್ಯ ಸರ್ವರಕ್ಷಸಾಂ ತೃತೀಯಭಾಗಮಕ್ಷಿಣೋತ್ ॥೭.೨೩॥
ರುದ್ರದೇವನ ವರಗಳಿಂದ ರಕ್ಷಿತ,
ಬಲಿಷ್ಠ ಮಂತ್ರಿಪುತ್ರರವರು ಸಪ್ತ.
ಬೆಟ್ಟ ಸದೃಶರಾದ ಆ ರಾಕ್ಷಸರು,
ಹನುಮನ ತುಳಿತಕ್ಕೆ ಪುಡಿಯಾದರು.
ವರಬಲದಿಂದ ದರ್ಪಿತವಾದ ರಾಕ್ಷಸರ ರಾವಣನ  ಸೇನೆ,
ಸಂಹರಿಸಿದ ಹನುಮ ಸೇನೆಯ ಮೂರನೇ ಒಂದು ಭಾಗವನ್ನೇ.

ಅನೌಪಮಂ ಹರೇರ್ಬಲಂ ನಿಶಮ್ಯ ರಾಕ್ಷಸಾಧಿಪಃ ।
ಕುಮಾರಮಕ್ಷಮಾತ್ಮನಃ ಸಮಂ ಸುತಂ ನ್ಯಯೋಜಯತ್ ॥೭.೨೪॥
ಕಪಿಯ ಬಲ ಅಸದೃಶವೆಂದು ಅರಿತ ರಾವಣ,
ಸಮಬಲದ ಮಗ ಅಕ್ಷಕುಮಾರನ ಮಾಡಿದ ನಿಯೋಜನ.

ಸ ಸರ್ವಲೋಕಸಾಕ್ಷಿಣಃ ಸುತಂ ಶರೈರ್ವವರ್ಷ ಹ ।
ಶಿತೈರ್ವರಾಸ್ತ್ರಮನ್ತ್ರಿತೈರ್ನ್ನಚೈನಮಭ್ಯಚಾಲಯತ್ ॥೭.೨೫॥
ಸಕಲಲೋಕಸಾಕ್ಷಿಯಾದ ವಾಯುಪುತ್ರ ಹನುಮಂತ,
ಎಲ್ಲರ ಅಂತರ್ಯಾಮಿ ಜೀವದ ಉಸಿರಾಗಿ ಇರುವಾತ.
ಅಕ್ಷಕುಮಾರ ಸುರಿಸಿದ ತೀಕ್ಷ್ಣ ಮಂತ್ರಿತ ಬಾಣಗಳ ಅನವರತ,
ಯಾವುದಕ್ಕೂ ಜಗ್ಗದೆ ಬಗ್ಗದೇ ನಿಂತ ಬಲದಮೂಲ ಹನುಮಂತ.

ಸ ಮಣ್ಡಮಧ್ಯಕಾಸುತಂ ಸಮೀಕ್ಷ್ಯ ರಾವಣೋಪಮಮ್ ।
ತೃತೀಯ ಏಷ ಚಾಂಶಕೋ ಬಲಸ್ಯ ಹೀತ್ಯಚಿನ್ತಯತ್ ॥೭.೨೬॥
ಹನುಮ ಕಂಡ ರಾವಣನ ಮಗ ಅಕ್ಷಕುಮಾರ,
ರಾವಣಸದೃಶನವನು ಅವನ ಬಲ ಅಪಾರ.
ಹನುಮಂತ ತನ್ನಲ್ಲೇ ಯೋಚಿಸಿದನಂತೆ ಆಗ,
ಇವನಿರಬೇಕು ರಾವಣಬಲದ ಮೂರನೇ ಒಂದು ಭಾಗ.

ನಿದಾರ್ಯ್ಯ ಏವ ರಾವಣಃ ಸ ರಾಘವಸ್ಯ ನಾನ್ಯಥಾ ।
ಯದೀನ್ದ್ರಜಿನ್ಮಯಾ ಹತೋ ನಚಾಸ್ಯ ಶಕ್ತಿರೀಕ್ಷ್ಯತೇ ॥೭.೨೭ ॥
ರಾವಣನನ್ನು ನಾನು ಮಾಡುವುದಿಲ್ಲ ಸಂಹಾರ,
ಆಗಲೇಬೇಕವನು ರಾಮಬಾಣಕ್ಕೇ ಆಹಾರ.
ಬರಲಿರುವ ಇಂದ್ರಜಿತುವನ್ನು ಸಂಹರಿಸಿದರೆ ನಾನು,
ಲೋಕಕ್ಕಾಗುವುದಿಲ್ಲ ಅವನ ಶಕ್ತಿ ಪರಿಚಯ ತಾನು.

ಅತಸ್ತಯೋಃ ಸಮೋ ಮಯಾ ತೃತೀಯ ಏಷ ಹನ್ಯತೇ ।
ವಿಚಾರ್ಯ್ಯ ಚೈವಮಾಶು ತಂ ಪದೋಃ ಪ್ರಗೃಹ್ಯ ಪುಪ್ಲುವೇ ॥೭.೨೮॥
ಕಾರಣ ರಾವಣ ಇಂದ್ರಜಿತುಗಳ ಸಂಹಾರ ಸಲ್ಲದು,
ಅಕ್ಷಕುಮಾರನ ಮೇಲೆ ಕಳಿಸುವುದೇ ಒಳ್ಳೆಯದು.
ಕಾಲುಗಳಲ್ಲಿ ಅವನ ಹಿಡಿದ,
ಹಿಡಿದಂತೇ ತಾ ಮೇಲೆ ಹಾರಿದ.

ಸ ಚಕ್ರವದ್ ಭ್ರಮಾತುರಂ ವಿಧಾಯ ರಾವಣಾತ್ಮಜಮ್ ।
ಅಪೋಥಯದ್ ಧರಾತಳೇ ಕ್ಷಣೇನ ಮಾರುತೀ ತನುಃ ॥೭.೨೯॥
ಅಕ್ಷಕುಮಾರ ಹನುಮನ ಕೈಯ ಆಟದ ಚಕ್ರವಾದ,
ಗರಗರನೆ ತಿರುಗಿಸುತ್ತವನ ಎತ್ತಿ ನೆಲಕ್ಕೆ ಅಪ್ಪಳಿಸಿದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula