Thursday 14 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 13 - 15

ಇತ್ಯುಕ್ತವನ್ತಮಮುಮಾಶ್ವನುಗೃಹ್ಯ ಬಾಣಂ ತಸ್ಮೈ ಧೃತಂ ದಿತಿಸುತಾತ್ಮಸು ಚಾನ್ತ್ಯಜೇಷು ।
ಶಾರ್ವಾದ್ ವರಾದ್ ವಿಗತಮೃತ್ಯುಷು ದುರ್ಜ್ಜಯೇಷು ನಿಃಸಙ್ಖ್ಯಕೇಷ್ವಮುಚದಾಶು ದದಾಹ ಸರ್ವಾನ್ ॥೮.೧೩॥
ಈ ರೀತಿ ಹೇಳಿದ ವರುಣನನ್ನು ಶ್ರೀರಾಮ ಅನುಗ್ರಹಿಸಿದ,
ಅವನಿಗಿಟ್ಟ ಬಾಣದ ಗುರಿ ಅಸಂಖ್ಯ ದೈತ್ಯರೆಡೆಗೆ ತಿರುಗಿಸಿದ.
ಅಲ್ಲಿತ್ತು ರುದ್ರವರದಿಂದ ಅವಧ್ಯರಾದ ದೈತ್ಯ ಚಂಡಾಲ ಸೈನ್ಯ,
ತಿರುಗಿಸಿದ ಬಾಣದಿಂದ ಅವರೆಲ್ಲರನ್ನು ಶ್ರೀರಾಮ ಮಾಡಿದ ದಹನ.

ಕೃತ್ವೇರಿಣಂ ತದಥ ಮೂಲಫಲಾನಿ ಚಾತ್ರ ಸಮ್ಯಗ್ ವಿಧಾಯ ಭವಶತ್ರುರಮೋಘಚೇಷ್ಟಃ ।
ಬದ್ಧುಂ ದಿದೇಶ ಸುರವರ್ದ್ಧಕಿನೋsವತಾರಂ ತಜ್ಜಂ ನಳಂ ಹರಿವರಾನಪರಾಂಶ್ಚ 
ಸೇತುಮ್ ॥೮.೧೪॥
ಆ ರಾಕ್ಷಸರಿದ್ದ ಜಾಗವಾಗಿತ್ತು ಅಪ್ರಯೋಜಕ  ಮರುಭೂಮಿ,
ಅದನ್ನು ಹೂ ಹಣ್ಣುಗಳ ತೋಟ ಮಾಡಿದ ಭಕ್ತಪ್ರೇಮಿ.
ಭಕ್ತರ ಸಂಸಾರಪರಿಹಾರಕ ಎಂದೂ ವ್ಯರ್ಥವಲ್ಲ ಅವನ ಯಾವುದೇ ಕಾಯಕ,
ವಿಶ್ವಕರ್ಮಪುತ್ರ ನಳ ಮತ್ತಿತರ ಕಪಿಗಳ ಸೇತುವೆ ಕಟ್ಟಲು ಮಾಡಿದ ನೇಮಕ.

ಬಧ್ವೋದಧೌ ರಘುಪತಿರ್ವಿವಿಧಾದ್ರಿಕೂಟೈಃ ಸೇತುಂ ಕಪೀನ್ದ್ರಕರಕಮ್ಪಿತಭೂರುಹಾಙ್ಗೈಃ ।
'ಸುಗ್ರೀವನೀಲಹನುಮತ್ ಪ್ರಮುಖೈರನೀಕೈರ್ಲ್ಲಙ್ಕಾಂ ವಿಭೀಷಣದೃಶಾsವಿಶದಾಶು ದಗ್ಧಾಮ್’ ॥೮.೧೫॥
ಕಪಿಗಳಿಂದ ಅಲ್ಲಾಡಿಸಲ್ಪಟ್ಟ ಮರಗಿಡಗಳು,
ಮರಗಿಡ ಸಮೇತವಾದ ತರತರ ಪರ್ವತಗಳು.
ಇವೆಲ್ಲಾ ಆದವು ಸೇತುವೆ ನಿರ್ಮಾಣಕ್ಕೆ ಸಾಧನ,
ಎಲ್ಲರೊಡಗೂಡಿ ಕಟ್ಟಿದ ಸೇತುವೆ ರಘುನಂದನ.
ಸುಗ್ರೀವ ನೀಲ ಹನುಮಂತ ಮೊದಲಾದ ಅನೇಕ ಕಪಿಗಳ ಸಮೇತ,
ವಿಭೀಷಣನ ನೆರವಿಂದ ಹನುಮ ಸುಟ್ಟ ಲಂಕೆಯ ಹೊಕ್ಕ ರಘುನಾಥ.


No comments:

Post a Comment

ಗೋ-ಕುಲ Go-Kula