Wednesday 27 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 77 - 82

ಅಥೋ ಹನೂಮಾನುರಗೇನ್ದ್ರಭೋಗಸಮಂ ಸ್ವಬಾಹುಂ ಭೃಶಮುನ್ನಮಯ್ಯ ।
ತತಾಡ ವಕ್ಷಸ್ಯದಿಪಂ ತು ರಕ್ಷಸಾಂ ಮುಖೈಃ ಸ ರಕ್ತಂ ಪ್ರವಮನ್ ಪಪಾತ ॥೮.೭೭॥

ಆನಂತರ ರಾವಣನ ಎದುರುಗೊಂಡ ರಾಮಬಂಟ ಹನುಮಂತ,
ಸರ್ಪಶರೀರದಂಥ ತನ್ನ ಕೈಯಿಂದ ರಾವಣನೆದೆಗೆ ಗುದ್ದಿದನಾತ.
ಹತ್ತೂ ಮುಖಗಳಿಂದ ರಕ್ತ ಕಾರುತ್ತಾ ರಾವಣನಾದ ಮೂರ್ಛಿತ.

ಸ ಲಬ್ಧಸಙ್ಜ್ಞಃ ಪ್ರಶಶಂಸ ಮಾರುತಿಂ ತ್ವಯಾ ಸಮೋ ನಾಸ್ತಿ ಪುಮಾನ್ ಹಿ ಕಶ್ಚಿತ್ ।
ಕಃ ಪ್ರಾಪಯೇದನ್ಯ ಇಮಾಂ ದಶಾಂ ಮಾಮಿತೀರಿತೋ ಮಾರುತಿರಾಹ ತಂ ಪುನಃ ॥೮.೭೮॥

ಪ್ರಜ್ಞೆ ಬಂದ ನಂತರ ಹನುಮನ ಹೊಗಳುತ್ತಾ ಹೇಳುತ್ತಾನೆ ರಾವಣ,
ನನಗೀ ಅವಸ್ಥೆ ತಂದ ನಿನಗೆ ಯಾರೂ ಇಲ್ಲವೇ ಇಲ್ಲ ಸಮಾನ.
ರಾವಣನ ಕುರಿತು ಹೇಳುತ್ತಾನೆ ಮಾರುತಿ ರೂಪದ ಪವಮಾನ.




ಅತ್ಯಲ್ಪಮೇತದ್ ಯದುಪಾತ್ತಜೀವಿತಃ ಪುನಸ್ತ್ವಮಿತ್ಯುಕ್ತ ಉವಾಚ ರಾವಣಃ ।
ಗೃಹಾಣ ಮತ್ತೋsಪಿ ಸಮುದ್ಯತಂ ತ್ವಂ ಮುಷ್ಟಿಪ್ರಹಾರಂ ತ್ವಿತಿ ತಂ ಪುಪೋಥ ॥೮.೭೯॥

ತಿಂದಮೇಲೂ ನಾನು ಕೊಟ್ಟಂಥ ಆ ಏಟು,
ಬದುಕುಳಿದಿರಲು ಅದತ್ಯಲ್ಪವೆಂಬುದೇ ಗುಟ್ಟು.
ರಾವಣ ಹೇಳುತ್ತಾನೆ ತಗೋ ನನ್ನದೂ ಹೊಡೆತ,
ಗಟ್ಟಿಯಾಗಿ ಮಾರುತಿಗೆ ಮುಷ್ಠಿ ಪ್ರಹಾರವನ್ನಿತ್ತನಾತ.

ಕಿಞ್ಚಿತ್ ಪ್ರಹಾರೇಣ ತು ವಿಹ್ವಲಾಙ್ಗವತ್ ಸ್ಥಿತೇ ಹಿ ತಸ್ಮಿನ್ನಿದಮನ್ತರಂ ಮಮ ।
ಇತ್ಯಗ್ನಿಸೂನುಂ ಪ್ರಯಯೌ ಸ ರಾವಣೋ ನಿವಾರಿತೋ ಮಾರುತಿನಾsಪಿ ವಾಚಾ ॥೮.೮೦॥

ಸ್ವೀಕರಿಸಿ ರಾವಣನ  ಬಲವಾದ ಹೊಡೆತ,
ಹನುಮಂತ  ಕಂಡ ಆದಂತೆ ಸ್ವಲ್ಪ ಭ್ರಾಂತ.
ಇದುವೇ ಸುಸಮಯ ಎಂದರಿತುಕೊಂಡ ಆ ದಶಕಂಠ,
ಹನುಮನ ಕರೆಗೂ ನಿಲ್ಲದೆ ಹೊರಟ ಅಗ್ನಿಪುತ್ರ ನೀಲನತ್ತ.

ತಮಾಪತನ್ತಂ ಪ್ರಸಮೀಕ್ಷ್ಯ ನೀಲೋ ಧನುರ್ಧ್ವಜಾಗ್ರಾಶ್ವರಥೇಷು ತಸ್ಯ ।
ಚಚಾರ ಮೂರ್ದ್ಧಸ್ವಪಿ ಚಞ್ಚಲೋsಲಂ ಜಳೀಕೃತಸ್ತೇನ ಸ ರಾವಣೋsಪಿ ॥೮.೮೧॥

ತನ್ನತ್ತ ಬರುತ್ತಿರುವ ರಾವಣನ ನೋಡಿದ ನೀಲ,
ಎಲ್ಲೆಡೆ ಹಾರಾಡಿದ ನಿಲ್ಲದೇ ಒಂದೆಡೆಗೆ ಅಚಲ.
ಧನುಸ್ಸು ,ಧ್ವಜ ,ರಥ ,ರಾವಣನ ತಲೆ ಎಲ್ಲೆಡೆ ನೀಲನ ಹಾರಾಟ,
ನೀಲನ ಚಟುವಟಿಕೆಯಿಂದ ವಿಚಲಿತನಾದ ರಾವಣ ಕಂಗೆಟ್ಟ.

ಸ ಕ್ಷಿಪ್ರಮಾದಾಯ ಹುತಾಶನಾಸ್ತ್ರಂ ಮುಮೋಚ ನೀಲೇ ರಜನೀಚರೇಶಃ ।
ಸ ತೇನ ಭೂಮೌ ಪತಿತೋ ನಚೈನಂ ದದಾಹ ವಹ್ನಿಃ ಸ್ವತನುರ್ಯ್ಯತೋsಸೌ ॥೮.೮೨॥

ಆನಂತರ ರಾವಣ ನೀಲನಿಂದ ಒಂದಂತರ ಸಾಧಿಸಿದ,
ಆಗ್ನೇಯಾಸ್ತ್ರ ಅಭಿಮಂತ್ರಿಸಿ ನೀಲನ ಮೇಲೆ ಪ್ರಯೋಗಿಸಿದ.
ಹೊಡೆತಕ್ಕೆ ಕೆಳಕ್ಕೇನೋ ಬಿದ್ದನವ  ನೀಲ,
ಸ್ವಯಂ ಅಗ್ನಿಯಾದವಗೆ ಸುಡಲಿಲ್ಲ ಜ್ವಾಲಾ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula