Saturday 23 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 53 -57

ವಿದ್ರಾವಿತಾಖಿಲಕಪಿಂ ವರಾತ್ ತ್ರಿಶಿರಸಂ ವಿಭೋಃ ।
ಭಙ್ಕ್ತ್ವಾರಥಂ ಧನುಃ ಖಡ್ಗಮಾಚ್ಛಿದ್ಯಾಶಿರಸಂ ವ್ಯಧಾತ್ ॥೮.೫೩॥

ತ್ರಿಶಿರಸನೆಂಬ ರಾಕ್ಷಸ ಬ್ರಹ್ಮವರಬಲದಿಂದ ಎಲ್ಲ ಕಪಿಗಳನೂ ಓಡಿಸುತ್ತಿದ್ದ,
ಹನುಮಂತ ಅವನ ರಥ ಧನುಸ್ಸನ್ನು ಪುಡಿಮಾಡಿ ಮಾಡಿದನವನ ಶಿರಚ್ಛೇದ.

ಯುದ್ಧೋನ್ಮತ್ತಶ್ಚ ಮತ್ತಶ್ಚ ಪಾರ್ವತೀವರದರ್ಪ್ಪಿತೌ ।
ಪ್ರಮಥನ್ತೌ ಕಪೀನ್ ಸರ್ವಾನ್ ಹತೌ ಮಾರುತಿಮುಷ್ಟಿನಾ ॥೮.೫೪॥

ರಾವಣಪಡೆಯ ಯುದ್ಧೋನ್ಮತ್ತ ಮತ್ತು ಮತ್ತ,
ಆಗಿದ್ದರು ಪಾರ್ವತಿವರಬಲದಿಂದ ಬಹು ದರ್ಪಿತ.
ಅವರೂ ಆದರು ಹನುಮನ ಮುಷ್ಠಿಯಿಂದ ಹತ.


ತತೋsತಿಕಾಯೋsತಿರಥೋ ರಥೇನ ಸ್ವಯಂಭುದತ್ತೇನ ಹರೀನ್ ಪ್ರಮೃದ್ನನ್ ।
ಚಚಾರ ಕಾಲಾನಲಸಿನ್ನಿಕಾಶೋ ಗನ್ಧರ್ವಿಕಾಯಾಂ ಜನಿತೋ ದಶಾಸ್ಯಾತ್ ॥೮.೫೫॥

ರಾವಣ ಗಂಧರ್ವಸ್ತ್ರೀಯಲ್ಲಿ ಆಗಿತ್ತು ಅತಿರಥ ಅತಿಕಾಯನ ಜನನ,
ಕಾಲಾಗ್ನಿಸದೃಶನಾಗಿ ಬ್ರಹ್ಮವರಬಲದಿ ಮಾಡುತ್ತಿದ್ದ ಕಪಿಸೈನ್ಯದ ಹನನ.

ಬೃಹತ್ತನುಃ ಕುಮ್ಭವದೇವ ಕರ್ಣ್ಣಾವಸ್ಯೇತ್ಯತೋ ನಾಮ ಚ ಕುಮ್ಭಕರ್ಣ್ಣಃ ।
ಇತ್ಯಸ್ಯ ಸೋsರ್ಕ್ಕಾತ್ಮಜಪೂರ್ವಕಾನ್ ಕಪೀನ್ ಜಿಗಾಯ ರಾಮಂ 
ಸಹಸಾsಭ್ಯಧಾವತ್ ॥೮.೫೬॥

ಅತಿಕಾಯ ದೊಡ್ಡಶರೀರದವ ,ಅವನ ಕಿವಿಗಳಿದ್ದವಂತೆ ಮಡಿಕೆಯಂತೆ,
ಹಾಗಾಗಿಯೇ  ಅವನಿಗೆ ಕುಂಭಕರ್ಣನೆಂಬ  ಹೆಸರಿಂದ  ಕರೆಯುತ್ತಿದ್ದರಂತೆ.
ಅವನು ಸುಗ್ರೀವಾದಿ ಕಪಿಗಳ ಗೆಲ್ಲುತ್ತಾ ಬಂದ,
ವೇಗದಿ ನುಗ್ಗುತ್ತಾ ರಾಮಚಂದ್ರನೆಡೆಗೆ ಧಾವಿಸಿದ.

ತಮಾಪತನ್ತಂ ಶರವರ್ಷಧಾರಂ ಮಹಾಘನಾಭಂ ಸ್ತನಯಿತ್ನುಘೋಷಮ್ ।
ನಿವಾರಯಾಮಾಸ ಯಥಾ ಸಮೀರಃ ಸೌಮಿತ್ರಿರಾತ್ತೇಷ್ವಸನಃ ಶರೌಘೈಃ ॥೮.೫೭॥

ಅತಿಕಾಯ ದೊಡ್ಡ ಮೋಡದಂತೆ ಕಪ್ಪಾಗಿದ್ದ,
ಬಾಣಗಳ ಮಳೆಗರೆಯುತ್ತ ಗುಡುಗುತ್ತ ಬಂದ.
ಅದಕಂಡ ಲಕ್ಷ್ಮಣ ಬಾಣಗಳಿಂದವನ ತಡೆದ.

No comments:

Post a Comment

ಗೋ-ಕುಲ Go-Kula