ಸುಪ್ತಘ್ನೋ ಯಜ್ಞಕೋಪಶ್ಚ ಶಕುನಿರ್ದ್ದೆವತಾಪನಃ ।
ವಿದ್ಯುಜ್ಜಿಹ್ವಃ̐ ಪ್ರಮಾಥೀ ಚ ಶುಕಸಾರಣಸಂಯುತಾಃ ॥೮.೩೫॥
ರಾವಣಪ್ರೇರಿತಾಃ ಸರ್ವಾನ್ ಮಥನ್ತಃ ಕಪಿಕುಞ್ಜರಾನ್ ।
ಅವಧ್ಯಾ ಬ್ರಹ್ಮವರತೋ ನಿಹತಾ ರಾಮಸಾಯಕೈಃ ॥೮.೩೬॥
ಸುಪ್ತಘ್ನ ,ಯಜ್ಞಕೋಪ ,ಶಕುನಿ ,ದೇವತಾಪನ;
ವಿದ್ಯುಜ್ಜಿಹ್ವ ,ಪ್ರಮಾಥೀ ,ಶುಕ ಮತ್ತು ಸಾರಣ.
ಬ್ರಹ್ಮವರದಿಂದ
ಅವಧ್ಯರಾದ ಎಂಟು ಜನರ ಈ ಹಿಂಡು,
ರಾವಣಾಜ್ಞೆಯಿಂದ
ಕಪಿಗಳ ಹೊಸಕುತ್ತ ಬಂದ ದಂಡು.
ರಾಮಬಾಣಗಳಿಂದ
ಹಿಡಿದರು ಯಮಲೋಕದ ಜಾಡು.
ಯುದ್ಧೋನ್ಮತ್ತಶ್ಚ ಮತ್ತಶ್ಚ ದೇವಾನ್ತಕನರಾನ್ತಕೌ ।
ತ್ರಿಶಿರಾ ಅತಿಕಾಯಶ್ಚ ನಿರ್ಯ್ಯಯೂ ರಾವಣಾಜ್ಞಯಾ ॥೮.೩೭॥
ಯುದ್ಧೋನ್ಮತ್ತ ,ಮತ್ತ ,ದೇವಾಂತಕ ,ನರಾಂತಕ,
ತ್ರಿಶಿರ ,ಅತಿಕಾಯ
ರಾವಣಾಜ್ಞೆಯಂತೆ ಆದರು ಯುದ್ಧೋನ್ಮುಖ.
ನರಾನ್ತಕೋ ರಾವಣಜೋ ಹಯವರ್ಯ್ಯೋಪರಿ ಸ್ಥಿತಃ ।
ಅಭೀಃ ಸಸಾರ ಸಮರೇ ಪ್ರಾಸೋದ್ಯತಕರೋ ಹರೀನ್ ॥೮.೩೮॥
ರಾವಣಪುತ್ರ ನರಾಂತಕ
ಬಂದ ಉತ್ತಮ ಕುದುರೆ ಏರಿ,
ನಿರ್ಭಯವಾಗಿ ಕಪಿಗಳ
ಎದುರಿಸಿದ ಪ್ರಾಸಾಯುಧಧಾರಿ.
ತಂ ದಹನ್ತಮನೀಕಾನಿ ಯುವರಾಜೋsಙ್ಗದೋ ಬಲೀ ।
ಉತ್ಪಪಾತ ನಿರೀಕ್ಷ್ಯಾsಶು ಸಮದರ್ಶಯದಪ್ಯುರಃ
॥೮.೩೯॥
ನರಾಂತಕ
ಕಪಿಸೈನ್ಯವನ್ನು ನಾಶಮಾಡುವ ಸಮಯ,
ಅಂಗದ ಹಾರಿ
ಎದುರುಬಂದು ತೋರಿದ ತನ್ನೆದೆಯ.
ತಸ್ಯೋರಸಿ ಪ್ರಾಸವರಂ ಪ್ರಜಹಾರ ಸ ರಾಕ್ಷಸಃ ।
ದ್ವಿಧಾ ಸಮಭವತ್ ತತ್ತು
ವಾಲಿಪುತ್ರಸ್ಯ ತೇಜಸಾ ॥೮.೪೦ll
ನರಾಂತಕ ಮಾಡಿದ
ಅಂಗದನೆದೆಗೆ ಪ್ರಾಸಾಯುಧ ಪ್ರಾಯೋಗ,
ಅಮೋಘ ಬಲದ
ಅಂಗದನೆದೆಗೆ ತಾಗಿ ಅದಾಯಿತು ಇಬ್ಭಾಗ.
ಅಥಾಸ್ಯ ಹಯಮಾಶ್ವೇವ ನಿಜಘಾನ ಮುಖೇ ಕಪಿಃ ।
ಪೇತತುಶ್ಚಾಕ್ಷಿಣೀ ತಸ್ಯ ಸ ಪಪಾತ ಮಮಾರ ಚ ॥೮.೪೧॥
ಅಂಗದ ಕೊಟ್ಟ
ನರಾಂತಕನ ಕುದುರೆಗೆ ಹೊಡೆತ,
ಅದರ ಕಣ್ಣುಗಳೆರಡೂ
ಉದುರಿ ಅದಾಯಿತು ಮೃತ.
ಸ ಖಡ್ಗವರಮಾದಾಯ ಪ್ರಸಸಾರ ರಣೇ ಕಪಿಮ್ ।
ಆಚ್ಛಿದ್ಯ ಖಡ್ಗಮಸ್ಯೈವ ನಿಹತೋ ವಾಲಿಸೂನುನಾ ॥೮.೪೨॥
ನರಾಂತಕ ದೊಡ್ಡ
ಖಡ್ಗವನೆತ್ತಿ ಅಂಗದನೆದುರು ಬಂದ,
ಅಂಗದ ಅದನ್ನೇ
ಸೆಳೆದು ಅದರಿಂದಲೇ ಅವನ ಕೊಂದ.
ವಿಚೂರ್ಣ್ಣಿತೇ ನಿಜಾಯುಧೇ ನಿಕುಮ್ಭ ಏತ್ಯ ಮಾರುತಿಮ್ ।
ಪ್ರಗೃಹ್ಯ ಚಾsತ್ಮನೋಂsಸಕೇ ನಿಧಾಯ ಜಗ್ಮಿವಾನ್ ದ್ರುತಮ್ ॥೮.೩೨॥
ನಿಕುಂಭ ನೋಡಿದ
ತನ್ನಾಯುಧ ಪುಡಿಯಾದ ನೋಟ,
ಹನುಮನ ಹೆಗಲಲಿ
ಹೊತ್ತುಕೊಂಡು ಆರಂಭಿಸಿದ ಓಟ.
ಪ್ರಗೃಹ್ಯ ಕಣ್ಠಮಸ್ಯ ಸ ಪ್ರಧಾನಮಾರುತಾತ್ಮಜಃ ।
ಸ್ವಮಾಶು ಮೋಚಯಮ್ಸ್ತತೋ ನ್ಯಪಾತಯದ್ ಧರಾತಳೇ ॥೮.೩೩॥
ಆಗ ಮುಖ್ಯಪ್ರಾಣನ
ಮಗನಾದ ಹನುಮಂತ,
ರಕ್ಕಸನ ಕೊರಳ
ಒತ್ತಿ ಗಟ್ಟಿಯಾಗಿ ಹಿಡಿದನಾತ.
ಹನುಮ ಬಿಡಿಸಿಕೊಂಡ
ರಕ್ಕಸನ ಹಿಡಿತ,
ನಿಕುಂಭನ ನೆಲಕೆ
ಬೀಳಿಸಿ ಕೆಡವಿದನಾತ.
ಚಕಾರ ತಂ ರಣಾತ್ಮಕೇ ಮಖೇ ರಮೇಶದೈವತೇ ।
ಪಶುಂ ಪ್ರಭಞ್ಜನಾತ್ಮಜೋ ವಿನೇದುರತ್ರ ದೇವತಾಃ ॥೮.೩೪॥
ಯುದ್ಧ ರೂಪವಾದ
ಮಹಾವೈಷ್ಣವ ಯಾಗದಲ್ಲಿ,
ಹನುಮ ಕೊಟ್ಟ
ನಿಕುಂಭನೆಂಬ ವಿಶೇಷ ಪಶುಬಲಿ.
ಆಯಿತು ನಿಕುಂಭನ
ಸಂಹಾರ,
ದೇವತೆಗಳು ಹಾಕಿದರು ಜಯಕಾರ. [Contributed by Shri Govind Magal]
No comments:
Post a Comment
ಗೋ-ಕುಲ Go-Kula