Sunday, 17 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 19 - 24


ವಿಜ್ಞಾಯ ತತ್ ಸ ಭಗವಾನ್ ಹನುಮನ್ತಮೇವ ದೇವೇನ್ದ್ರಶತ್ರುವಿಜಯಾಯ ದಿದೇಶ ಚಾsಶು ।
ನೀಲಂ ಪ್ರಹಸ್ತನಿಧನಾಯ ಚ ವಜ್ರದಂಷ್ಚ್ರಂ ಹನ್ತುಂ 
ಸುರೇನ್ದ್ರಸುತಸೂನುಮಥಾsದಿದೇಶ ॥೮.೧೯॥
ಶ್ರೀರಾಮ ತಿಳಿದುಕೊಂಡವನಾದ ರಾವಣನ ನಡೆ,
ಇಂದ್ರಜಿತುವ ಸೋಲಿಸಲು ಇಟ್ಟ ಹನುಮನ ತಡೆ.
ಪ್ರಹಸ್ತನನ್ನು ಕೊಲ್ಲಲು ನೀಲನ ನೇಮಕ,
ಅಂಗದಗಿತ್ತ ವಜ್ರದಂಷ್ಟ್ರನ ಕೊಲ್ಲುವ ಕಾಯಕ.

ಮಧ್ಯೇ ಹರೀಶ್ವರಮಧಿಜ್ಯದನುರ್ನ್ನಿಯುಜ್ಯ ಯಸ್ಯಾಂ ಸ ರಾಕ್ಷಸಪತಿರ್ದ್ದಿಶಮೇವ ತಾಂ ಹಿ ।
ಉದ್ದಿಶ್ಯ ಸಂಸ್ಥಿತ ಉಪಾತ್ತಶರಃ ಸಖಡ್ಗೋ 
ದೇದೀಪ್ಯಮಾನವಪುರುತ್ತಮಪೂರುಷೋsಸೌ॥೮.೨೦॥
ಸೇನೆಯ ಮಧ್ಯದಲ್ಲಿ ಸುಗ್ರೀವನ ನಿಲ್ಲಿಸಿದ ಶ್ರೀರಾಮ,
ರಾವಣನಿದ್ದ ಉತ್ತರಕೆದುರಾಗಿ ನಿಂತ ಸುಂದರ ಸಾರ್ವಭೌಮ.
ಬಿಲ್ಲು ಬಾಣ ಖಡ್ಗಗಳ ಸಮೇತ ನಿಂತ ತಯಾರಾಗಿ  ರಘುರಾಮ.

ವಿದ್ರಾವಿತೋ ಹನಮತೇನ್ದ್ರಜಿದಾಶು ಹಸ್ತಂ ತಸ್ಯ ಪ್ರಪನ್ನ ಇವ ವೀರ್ಯ್ಯಮಮುಷ್ಯ ಜಾನನ್ ।
ನೀಲೋ ವಿಭೀಷಣ ಉಭೌ ಶಿಲಯಾ ಚ ಶಕ್ತ್ಯಾ ಸಞ್ಚಕ್ರತುರ್ಯ್ಯಮವಶಂ ಗಮಿತಂ ಪ್ರಹಸ್ತಮ್ ॥೮.೨೧॥
ಇನ್ನೇನು ಹನುಮನ ಕೈಗೆ ಸಿಗುವುದರಲ್ಲಿದ್ದ ರಕ್ಕಸ ಇಂದ್ರಜಿತ್ತು,
ತಪ್ಪಿಸಿಕೊಂಡು ಓಡಿದವಗೆ ಹನುಮಬಲದ ತೀವ್ರತೆ ರುಚಿಯ ಅರಿವಿತ್ತು.
ಬಂಡೆಗಲ್ಲು ಶಕ್ತ್ಯಾಯುಧದಿಂದ ನೀಲ ವಿಭೀಷಣ,
ಪ್ರಹಸ್ತನ ಕೊಂದಿತ್ತರು ಯಮಲೋಕದ ಪಯಣ.

ನೀಲಸ್ಯ ನೈವ  ವಶಮೇತಿ ಸ ಇತ್ಯಮೋಘಶಕ್ತ್ಯಾ ವಿಭೀಷಣ ಇಮಂ ಪ್ರಜಹಾರ ಸಾಕಮ್ ।
ತಸ್ಮಿನ್ ಹತೇsಙ್ಗದ ಉಪೇತ್ಯ ಜಘಾನ ವಜ್ರದಂಷ್ಟ್ರಂ ನಿಪಾತ್ಯ ಭುವಿ ಶೀರ್ಷಮಮುಷ್ಯ ಮೃದ್ನನ್ ॥೮.೨೨ ॥
ಪ್ರಹಸ್ತ ನೀಲನ ವಶಕ್ಕೆ ಬರುವುದಿಲ್ಲೆಂಬ ಕಾರಣ
ಅಮೋಘ ಶ್ಯಕ್ತ್ಯಾಯುಧದಿಂದ ಹೊಡೆದ ವಿಭೀಷಣ.
ಹೀಗೆ ಇವರಿಬ್ಬರಿಂದ ಪ್ರಹಸ್ತನಾದ ಹತ,
ವಜ್ರದಂಷ್ಟ್ರ ಅಂಗದನ ತುಳಿತದಿಂದಾದ ಮೃತ.

ಸರ್ವೇಷು ತೇಷು ನಿಹತೇಷು ದಿದೇಶ ಧೂಮ್ರನೇತ್ರಂ ಸ ರಾಕ್ಷಸಪತಿಃ ಸ ಚ ಪಶ್ಚಿಮೇನ ।
ದ್ವಾರೇಣ ಮಾರುತಸುತಂ ಸಮುಪೇತ್ಯ ದಗ್ಧೋ ಗುಪ್ತೋsಪಿ ಶೂಲಿವಚನೇನ 
ದುರನ್ತಶಕ್ತಿಮ್ ॥೮.೨೩॥
ಅವರೆಲ್ಲರಲ್ಲರದೂ ಮುಗಿದಾಗ ಇಹಲೋಕ ಯಾತ್ರ,
ರಾವಣ ಕಳಿಸಿದ ಪಶ್ಚಿಮ ದ್ವಾರದಿಂದ ಧೂಮ್ರನೇತ್ರ.
ಅವನಿಗಿದ್ದರೂ ರುದ್ರದೇವನ ವರದ ರಕ್ಷಣ,
ಬಲದಮೂಲ ಹನುಮಗೆದುರಾಗಿ ಆದ ದಹನ.

ಅಕಮ್ಪನೋsಪಿ ರಾಕ್ಷಸೋ ನಿಶಾಚರೇಶಚೋದಿತಃ ।
ಉಮಾಪತೇರ್ವರೋದ್ಧತಃ ಕ್ಷಣಾದ್ಧತೋ ಹನೂಮತಾ ॥೮.೨೪॥
ರಾವಣನಿಂದ ಪ್ರಚೋದಿತನಾದ ರಾಕ್ಷಸನೊಬ್ಬ,
ಮೆರೆಯುತ್ತಿದ್ದ ಶಿವವರದಿಂದ ಉದ್ಧತನಾದ ಅಕಂಬ.
ರಾವಣನಾಜ್ಞೆಯಂತೆ ಹೊರ ಬಂದ,
ಹನುಮಂತ ಕ್ಷಣದಲ್ಲವನ ಕೊಂದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula