Friday 8 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 48 - 50

ವಿಲಙ್ಘ್ಯ ಚಾರ್ಣ್ಣವಂ ಪುನಃ ಸ್ವಜಾತಿಭಿಃ ಪ್ರಪೂಜಿತಃ ।
ಪ್ರಭಕ್ಷ್ಯ ವಾನರೇಶಿತುರ್ಮ್ಮಧು ಪ್ರಭುಂ ಸಮೇಯಿವಾನ್ ॥೭.೪೮॥
ಮತ್ತೆ ತಿರುಗಿ ಸಮುದ್ರ ಹಾರಿದ ಹನುಮಂತ,
ತನ್ನೊಡನೆ ಇದ್ದ ಕಪಿಗಳಿಂದಾದ ತಾ ಪೂಜಿತ.
ಸುಗ್ರೀವಗೆಂದೇ ಮೀಸಲಾದ ಮಧುವನದ ಜೇನು,
ಸವಿದು ರಾಮನ ಬಳಿ ತೆರಳಿದ ಹನುಮಂತ ತಾನು.

ರಾಮಂ ಸುರೇಶ್ವರಮಗಣ್ಯಗುಣಾಭಿರಾಮಂ ಸಮ್ಪ್ರಾಪ್ಯ ಸರ್ವಕಪಿವೀರವರೈಃ ಸಮೇತಃ ।
ಚೂಳಾಮಣಿಂ ಪವನಜಃ ಪದಯೋರ್ನ್ನಿಧಾಯಸರ್ವಾಙ್ಗಕೈಃ ಪ್ರಣತಿಮಸ್ಯ ಚಕಾರ 
ಭಕ್ತ್ಯಾ ॥೭.೪೯॥
ಎಣೆಯಿರದ ಗುಣಗಳ ಭಂಡಾರವನ್ನು,
ದೇವತೆಗಳ ಒಡೆಯ ರಾಮಚಂದ್ರನನ್ನು,
ಸೇರಿದ ಅಂಗದ ಮೊದಲಾದವರೊಡಗೂಡಿ ರಾಮಬಂಟ,
ಸೀತೆ ಕೊಟ್ಟ ಚೂಡಾಮಣಿಯ ಶ್ರೀರಾಮಪಾದದ ಬಳಿ ಇಟ್ಟ.
ಶ್ರೀರಾಮಪಾದದ ಬಳಿ ಮಣಿಯಿಟ್ಟ ಧೀರ,
ಭಕ್ತಿಯಿಂದ ಮಾಡಿದ ಸರ್ವಾಂಗ ನಮಸ್ಕಾರ.

ರಾಮೋsಪಿ ನಾನ್ಯದನುದಾತುಮಮುಷ್ಯ ಯೋಗ್ಯಮತ್ಯನ್ತಭಕ್ತಿಪರಮಸ್ಯ ವಿಲಕ್ಷ್ಯ ಕಿಞ್ಚಿತ್ ।
ಸ್ವಾತ್ಮಪ್ರದಾನಮಧಿಕಂ ಪವನಾತ್ಮಜಸ್ಯ ಕುರ್ವನ್ ಸಮಾಶ್ಲಿಷದಮುಂ 
ಪರಮಾಭಿತುಷ್ಟಃ ॥೭.೫೦॥
ಹನುಮಂತನದು ಎಲ್ಲರಿಗೂ ಮಿಗಿಲಾದ ಶ್ರೇಷ್ಠ ಭಕ್ತಿ,
ಸಂತುಷ್ಟನಾದ ರಾಮಚಂದ್ರ  ತೋರಿದ ಸಂಪ್ರೀತಿ.
ಅವನಿಗೆ ಕೊಡುವಂಥದ್ದು ಅಲ್ಲೇನೂ ಕಾಣದ ಕಾರಣ,
ತನ್ನನ್ನೇ ತಾ ಕೊಡುತ್ತಾ ಹನುಮಂತಗಿತ್ತ ಪ್ರೀತಿಯ ಆಲಿಂಗನ.



ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೆ ಹನೂಮತ್ ಪ್ರತಿಯಾನಮ್ ನಾಮ ಸಪ್ತಮೋsಧ್ಯಾಯಃ ॥
ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಮಹಾಭಾರತತಾತ್ಪರ್ಯನಿರ್ಣಯದ ಅನುವಾದ,
ಹನೂಮತ್ ಪ್ರತಿಯಾನ ನಾಮದ ಏಳನೇ ಅಧ್ಯಾಯ,
ಮಧ್ವಾಂತರ್ಗತ ಶ್ರೀಕೃಷ್ಣಾರ್ಪಣ ಮಾಡಿದ ಧನ್ಯಭಾವ..

No comments:

Post a Comment

ಗೋ-ಕುಲ Go-Kula