Wednesday 13 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 10 - 12

ಸ ಕ್ರೋಧದೀಪ್ತನಯನಾನ್ತಹತಃ ಪರಸ್ಯ ಶೋಷಂ ಕ್ಷಣಾದುಪಗತೋ ದನುಜಾದಿಸತ್ವ್ಯಃ ।
‘ಸಿನ್ಧುಃ ಶಿರಸ್ಯರ್ಹಣಂ ಪರಿಗೃಹ್ಯ ರೂಪೀ ಪಾದಾರವಿನ್ದಮುಪಗಮ್ಯ ಬಭಾಷ 
ಏತತ್ ॥೮.೧೦॥
ಶ್ರೀರಾಮಚಂದ್ರ ಬೀರಿದ ಕೋಪದ ನೋಟದ ಜ್ವಾಲೆ,
ದಾನವಾದಿ ಜಲಚರಗಳೊಂದಿಗೆ ಬತ್ತಿತು ಸಮುದ್ರ ಆಗಲೆ.
ಸಮುದ್ರರಾಜ ಮೂರ್ತಿವೆತ್ತು ಪೂಜಾದ್ರವ್ಯ ಹೊತ್ತು ಬಂದ,
ಶ್ರೀರಾಮಚಂದ್ರನ ಪಾದಕಮಲ ಸಾರಿ ಹೀಗೆ ಹೇಳಿದ.

‘ತಂ ತ್ವಾ ವಯಂ ಜಡಧಿಯೋ ನ ವಿದಾಮ ಭೂಮನ್ ಕೂಟಸ್ಥಮಾದಿಪುರುಷಂ ಜಗತಾಮಧೀಶಮ್
‘ತ್ವಂ ಸತ್ವತಃ ಸುರಗಣಾನ್ ರಜಸೋ ಮನುಷ್ಯಾಂಸ್ತಾರ್ತ್ತೀಯತೋsಸುರಗಣಾನಭಿತಸ್ತಥಾsಸ್ರಾಃ ॥೮.೧೧॥
ಸರ್ವದೇಶ ಕಾಲ ವ್ಯಾಪ್ತ ಗುಣಪರಿಪೂರ್ಣನಾದ ಶ್ರೀರಾಮ,
ಜಗದೊಡೆಯ ಮಂದಮತಿಗಳರಿಯಲಾರೆವು ನಿನ್ನ ನೇಮ.
ಸತ್ವಗುಣದಿಂದ ದೇವತಾಸಮೂಹ,
ರಜೋಗುಣದಿಂದ ಮಾನವಸಮೂಹ,
ತಮೋಗುಣದಿಂದ ದಾನವಸಮೂಹ,
ಎಲ್ಲ ನೀನೇ ಸೃಜಿಸಿ ತುಂಬಿರುವೆ ಜೀವ.

‘ಕಾಮಂ ಪ್ರ ಯಾಹಿ ಜಹಿ ವಿಶ್ರವಸೋsವಮೇಹಂ ತ್ರೈಲೋಕ್ಯರಾವಣಮವಾಪ್ನುಹಿ ವೀರ ಪತ್ನೀಮ್ ।
‘ಬಧ್ನೀಹಿ  ಸೇತುಮಿಹ ತೇ ಯಶಸೋ ವಿತತ್ಯೈ ಗಾಯನ್ತಿ ದಿಗ್ವಿಜಯಿನೋ ಯಮುಪೇತ್ಯ ಭೂಪಾಃ’ ॥೮.೧೨॥
ವೀರನೇ ನಿನ್ನಿಚ್ಛಾನುಸಾರವಾಗಿ ಲಂಕೆಗೆ ಹೊರಡು,
ಮೂರ್ಲೋಕ ಅಳಿಸುವ ರಾವಣಗೆ ಮರಣ ನೀಡು.
ಮಾಡು ನಿನ್ನ ಪತ್ನಿಯ ಸ್ವೀಕಾರ,
ಆಗಲಿ ರಕ್ಕಸ ಪಡೆಯ ಸಂಹಾರ.
ವಿಶ್ರವಸ್ ಮುನಿಗೆ ಮಗನಲ್ಲನವ; ಮಲದ ಸಮಾನ,
ನಿನ್ನೆಶಸ್ಸಿನ ವಿಸ್ತರಣೆಗೆ ಆಗಲಿ ಸೇತುವೆ ನಿರ್ಮಾಣ.
ದಿಗ್ವಿಜಯಿಗಳಾದ,ಆಗುವ ಅರಸರ ದಂಡು,
ಹಾಡಿ ಕೊಂಡಾಡುವರು ನಿನ್ನೆಶಸ್ಸಿನ ಹಾಡು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula