Wednesday 6 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7:36 - 41

ಅಥ ಪ್ರಗೃಹ್ಯ ತಂ ಕಪಿಂ ಸಮೀಪಮಾನಯಂಶ್ಚ ತೇ ।
ನಿಶಾಚರೇಶ್ವರಸ್ಯ ತಂ ಸ ಪೃಷ್ಟವಾಂಶ್ಚ ರಾವಣಃ ॥೭.೩೬॥

ಕಪೇ ಕುತೋsಸಿ ಕಸ್ಯ ವಾ ಕಿಮರ್ತ್ಥಮೀದೃಶಂ ಕೃತಮ್ ।
ಇತೀರಿತಃ ಸ ಚಾವದತ್ ಪ್ರಣಮ್ಯ ರಾಮಮೀಶ್ವರಮ್ ॥೭.೩೭॥

ದೈತ್ಯಪಡೆ ಹಿಡಿದು ತಂದಿತು ಮಹಾಕಪಿಯ ರಾವಣನ ಬಳಿಗೆ,
ತನ್ನೆದುರು ನಿಂತ ಹನುಮನ ಕುರಿತು ಹೇಳುತ್ತಾನೆ ರಾವಣ ಹೀಗೆ.
ಎಲೈ ಕಪಿಯೇ ಎಲ್ಲಿಂದ ಬಂದಿರುವೆ,
ನೀನು ಯಾರ ದಾಸನಾಗಿ ನಿಂದಿರುವೆ,
ಯಾವ ಕಾರಣಕೆ ಈ ರೀತಿ ಮಾಡಿರುವೆ.
ಈ ರೀತಿ ಪ್ರಶ್ನಿತನಾದ ಹನುಮಂತ,
ರಾಮಗೆ ವಂದಿಸಿ ಉತ್ತರಿಸಲು ನಿಂತ.

ಅವೈಹಿ ದೂತಮಾಗತಂ ದುರನ್ತವಿಕ್ರಮಸ್ಯ ಮಾಮ್ ।
ರಘೂತ್ತಮಸ್ಯ ಮಾರುತಿಂ ಕುಲಕ್ಷಯೇ ತವೇಶ್ವರಮ್ ॥೭.೩೮॥

ಬಲು ಪರಾಕ್ರಮಿ ಶ್ರೀರಾಮನ ದೂತ ಹನುಮಂತ ನಾನು,
ನಿನ್ನ ಕುಲ ನಾಶ ಮಾಡುವುದರಲ್ಲಿ ಸಮರ್ಥ ತಿಳಿ ನೀನು.

ನ ಚೇತ್ ಪ್ರದಾಸ್ಯಸಿ ತ್ವರನ್ ರಘೂತ್ತಮಪ್ರಿಯಾಂ ತದಾ ।
ಸಪುತ್ರಮಿತ್ರಬಾನ್ಧವೋ ವಿನಾಶಮಾಶು ಯಾಸ್ಯಸಿ ॥೭.೩೯॥

ತಕ್ಷಣ ನೀನು ರಾಮಪತ್ನಿ ಸೀತೆಯ ರಾಮಗೆ ಒಪ್ಪಿಸದಿದ್ದಲ್ಲಿ,
ಮಕ್ಕಳು ಬಂಧು ಮಿತ್ರರ ಸಮೇತ ವಿನಾಶ ಹೊಂದುವೆಯಿಲ್ಲಿ.

ನ ರಾಮಬಾಣಧಾರಣೇ ಕ್ಷಮಾಃ ಸುರೇಶ್ವರಾ ಅಪಿ ।
ವಿರಿಞ್ಚಶರ್ವಪೂರ್ವಕಾಃ ಕಿಮು ತ್ವಮಲ್ಪಸಾರಕಃ ॥೭.೪೦॥

ಪ್ರಕೋಪಿತಸ್ಯ ತಸ್ಯ ಕಃ ಪುರಃಸ್ಥಿತೌ ಕ್ಷಮೋ ಭವೇತ್ ।
ಸುರಾಸುರೋರಗಾದಿಕೇ ಜಗತ್ಯಚಿನ್ತ್ಯಕರ್ಮಣಃ ॥೭.೪೧॥

ರಾಮಬಾಣ ತಡೆವ ಶಕ್ತಿ ಯಾವ ದೇವತೆಗಳಿಗೂ ಇಲ್ಲ,
ಬ್ರಹ್ಮ ರುದ್ರ ಮೊದಲಾದವರಿಗೂ ಆ ಸಾಮರ್ಥ್ಯ ಇಲ್ಲ.
ಅತಿ ಕಡಿಮೆ ಬಲ ಹೊಂದಿರುವ ನಿನ್ನಿಂದ ಹೇಗೆ ಸಾಧ್ಯ ತಡೆ,
ಮುನಿದ ರಾಮಗೆದುರಾಗಲಾರದು ದೇವತೆಗಳ ಅಸುರರ ಪಡೆ.
ಶ್ರೀರಾಮಚಂದ್ರ ಅವ ಸರ್ವಶಕ್ತ,
ಅವನೆದುರಿಸಲು ಯಾರಿಲ್ಲ ಸಮರ್ಥ.


No comments:

Post a Comment

ಗೋ-ಕುಲ Go-Kula