Saturday, 2 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 16 - 21

ಕೃತ್ವಾ ಕಾರ್ಯಮಿದಂ ಸರ್ವಂ ವಿಶಙ್ಕಃ ಪವನಾತ್ಮಜಃ ।
ಆತ್ಮಾವಿಷ್ಕರಣೇ ಚಿತ್ತಂ ಚಕ್ರೇ ಮತಿಮತಾಂ ವರಃ ॥೭.೧೬॥
ಭಯವಿಲ್ಲದೇ ಅವಶ್ಯ ಕೆಲಸಗಳ ಮುಗಿಸಿದ ಮೇಲೆ  ರಾಮದೂತ,
ತನ್ನ ತಾ ತೋರಿಕೊಳ್ಳಲು ಸಂಕಲ್ಪಿಸಿದ ಬುದ್ಧಿವಂತ ಹನುಮಂತ.

ಅಥವನಮಖಿಲಂ ತದ್ ರಾವಣಸ್ಯಾವಲುಪ್ಯ ಕ್ಷಿತಿರುಹಮಿಮಮೇಕಂ ವರ್ಜ್ಜಯಿತ್ವಾssಶು ವೀರಃ ।
ರಜನಿಚರವಿನಾಶಂ ಕಾಙ್ಕ್ಷಮಾಣೋsತಿವೇಲಂ ಮುಹುರತಿರವನಾದೀ ತೋರಣಂ ಚಾsರುರೋಹ ॥೭.೧೭॥
ಸೀತೆ ಕುಳಿತಿದ್ದ ಶಿಂಶಪಾವೃಕ್ಷವ ಮುಟ್ಟಲಿಲ್ಲ,
ಧ್ವಂಸ ಮಾಡಿ ಹಾಕಿದ ರಾವಣನ ವನವನ್ನೆಲ್ಲಾ.
ರಕ್ಕಸರ ಸಂಹಾರವ ಉತ್ಕಟವಾಗಿ ಬಯಸುತ್ತ,
ದೊಡ್ಡ ಶಬ್ದ ಮಾಡುತ್ತಾ ತೋರಣವನ್ನೇರಿ ಕುಳಿತ.




ಅಥಾಶೃಣೋದ್ ದಶಾನನಃ ಕಪೀನ್ದ್ರಚೇಷ್ಟಿತಂ ಪರಮ್ ।
ದಿದೇಶ ಕಿಙ್ಕರಾನ್ ಬಹೂನ್ ಕಪಿರ್ನ್ನಿಗೃಹ್ಯತಾಮಿತಿ ॥೭.೧೮॥
ರಾವಣಗೆ ತಲುಪಿತು ಉತ್ಕೃಷ್ಟ ಕಪಿಯಿಂದಾದ ಕ್ರಿಯೆಯ ಸಂದೇಶ,
ಕಿಂಕರರೆಂಬ ಬಹು ರಕ್ಕಸರ ಕರೆದು ಇತ್ತ ಕಪಿಯ ಹಿಡಿಯಲು ಆದೇಶ.

ಸಮಸ್ತಶೋ ವಿಮೃತ್ಯವೋ ವರಾದ್ಧರಸ್ಯ ಕಿಙ್ಕರಾಃ ।
ಸಮಾಸದನ್ ಮಹಾಬಲಂ ಸುರಾನ್ತರಾತ್ಮನೋsಙ್ಗಜಮ್ ॥೭.೧೯॥

ರುದ್ರವರಬಲದಿಂದ ಸಾವಿಲ್ಲದ ಬಲಿಷ್ಠ ರಾಕ್ಷಸರ ಆ ಹಿಂಡು,
ದೇವತೆಗಳಂತರ್ಯಾಮಿ ಪ್ರಾಣಪುತ್ರಗೆದುರಾಯ್ತು  ದಂಡು.

ಅಶೀತಿಕೋಟಿಯೂಥಪಂ ಪುರಸ್ಸರಾಷ್ಟಕಾಯುತಮ್ ।
ಅನೇಕಹೇತಿಸಙ್ಕುಲಮ್ ಕಪೀನ್ದ್ರಮಾವೃಣೋದ್  ಬಲಮ್ ॥೭.೨೦॥

ಎಂಬತ್ತೆಂಟು ಕೋಟಿ ಸೇನಾಧಿಪತಿಗಳ ಬಲಾಢ್ಯ ಸೈನ್ಯ,
ಹರಿದು ಬಂದು ಸುತ್ತುವರೆಯಿತು ರಾಮದೂತ ಹನುಮನನ್ನ.

ಸಮಾವೃತಸ್ತಥಾssಯುಧೈಃ ಸತಾಡಿತಶ್ಚತೈರ್ಭೃಶಮ್ ।
ಚಕಾರ ತಾನ್ ಸಮಸ್ತಶಸ್ತಳಪ್ರಹಾರಚೂರ್ಣ್ಣಿತಾನ್ ॥೭.೨೧॥

ಸುತ್ತುವರಿದ ಸೇನೆ ಮಾಡಿತು ಹನುಮಂತಗೆ ನಾನಾ ಆಯುಧಗಳಿಂದ ಪ್ರಹಾರ,
ಅವರೆಲ್ಲರನ್ನೂ ತನ್ನ ಅಂಗೈಯಿಂದಲೇ ಹೊಡೆದು ಮಾಡಿದ ತಾ ಸಂಹಾರ.


No comments:

Post a Comment

ಗೋ-ಕುಲ Go-Kula