ತದೈವ ರಾಮೋsಪಿ ಹಿ ಭೋಗಸಕ್ತಂ ಪ್ರಮತ್ತಮಾಲಕ್ಷ್ಯ ಕಪೀಶ್ವರಂ ಪ್ರಭುಃ ।
ಜಗಾದ ಸೌಮಿತ್ರಿಮಿದಂ ವಚೋ ಮೇ ಪ್ಲವಙ್ಗಮೇಶಾಯ ವದಾsಶು ಯಾಹಿ
॥೬.೨೮॥
ಭೋಗದಲ್ಲಿರುವ
ಸುಗ್ರೀವನಿಂದಾಗುತ್ತಿದೆ ಪ್ರಮಾದ,
ಸರ್ವಜ್ಞ ರಾಮಚಂದ್ರ
ಇದ ಗಮನಿಸಿದಂತೆ ನಟಿಸಿದ.
ತಮ್ಮ ಲಕ್ಷ್ಮಣನ
ಸುಗ್ರೀವನೆಡೆಗೆ ಕಳಿಸಿದ,
ಅವನ ಕರ್ತವ್ಯವ
ನೆನಪಿಸಲು ತಿಳಿಸಿದ.
ಯದಿ ಪ್ರಮತ್ತೋsಸಿ ಮದೀಯಕಾರ್ಯ್ಯೇ ನಯಾಮ್ಯಹಂ ತ್ವೇನ್ದ್ರಸುತಸ್ಯ ಮಾರ್ಗ್ಗಮ್ ।
ಪ್ರಾಯಃ ಸ್ವಕಾರ್ಯ್ಯೇ ಪ್ರತಿಪಾದಿತೇ ಹಿ ಮದೋದ್ಧತಾ ನ
ಪ್ರತಿಕರ್ತ್ತುಮೀಶತೇ ॥೬.೨೯॥
ಪಡೆದುಕೊಂಡಮೇಲೆ
ಯಾರಿಂದಲಾದರೂ ಉಪಕಾರ,
ಕೃತಘ್ನಜನರು
ಮಾಡಬಯಸುವುದಿಲ್ಲ ಪ್ರತ್ಯುಪಕಾರ.
ಸುಗ್ರೀವ
ಕೃತಘ್ನನಾಗಿ ಹಿಡಿದರೆ ದುರ್ಮಾರ್ಗ,
ತೋರಬೇಕಾದೀತು
ವಾಲಿಯ ಕಳಿಸಿದ ಮಾರ್ಗ.
ಇತೀಡ್ಯರಾಮೇಣ ಸಮೀರಿತೇ ತದಾ ಯಯೌ ಸಬಾಣಃ ಸಧನುಃ ಸ ಲಕ್ಷ್ಮಣಃ ।
ದೃಷ್ಟ್ವೈವ ತಂ ತೇನ ಸಹೈವ ತಾಪನಿರ್ಭಯಾದ್ ಯಯೌ ರಾಮಪದಾನ್ತಿಕಂ
ತ್ವರನ್ ॥೬.೩೦॥
ರಾಮನಾಜ್ಞೆ
ಸ್ವೀಕರಿಸಿದ ಧನುರ್ಧಾರಿ ಲಕ್ಷ್ಮಣ,
ನಡೆದು ಬಂದು ಸೇರಿದ
ಸುಗ್ರೀವನಿದ್ದ ತಾಣ.
ಲಕ್ಷ್ಮಣನ ಕಂಡ
ಸೂರ್ಯಪುತ್ರ ಸುಗ್ರೀವನವನು,
ಲಕ್ಷ್ಮಣನೊಂದಿಗೆ
ತಲುಪಿದ ರಾಮಚಂದ್ರನ ತಾನು.
ಸಮಾಗತೇ ಸರ್ವಹರಿಪ್ರವೀರೈಃ ಸಹೈವ ತಂ ವೀಕ್ಷ್ಯ ನನನ್ದ ರಾಘವಃ ॥ ೬.೩೧ ॥
ಕೇಳಿ ಹನುಮಂತನ
ಒಳ್ಳೆಯ ಮಾತು,
ಭಕ್ತ ಸುಗ್ರೀವನ ಮನ
ಜಾಗೃತವಾಯ್ತು.
ರಾಮನ ಬಳಿ
ಕಪಿಸೈನ್ಯದೊಂದಿಗೆ ಬಂದ,
ನೋಡಿದ
ಆನಂದಧಾಮಗಾಯ್ತಂತೆ ಆನಂದ.
No comments:
Post a Comment
ಗೋ-ಕುಲ Go-Kula