ಅಥಾತಿಸಕ್ತೇ ಕ್ಷಿತಿಪೇ ಕಪೀನಾಂ ಪ್ರವಿಸ್ಮೃತೇ ರಾಮಕೃತೋಪಕಾರೇ ।
ಪ್ರಸಹ್ಯಂ ತಂ ಬುದ್ಧಿಮತಾಂ ವರಿಷ್ಠೋ ರಾಮಾಙ್ಘ್ರಿಭಕ್ತೋ
ಹನುಮಾನುವಾಚ ॥೬.೨೪॥
ರಾಜ್ಯ
ವೈಭೋಗಗಳಲ್ಲಿ ಮುಳುಗಿದ ಸುಗ್ರೀವ,
ತೋರಿದ
ರಾಮನುಪಕಾರಸ್ಮರಣೆಯ ಅಭಾವ.
ಬುದ್ಧಿವಂತರಲ್ಲಿ
ಅಗ್ರಗಣ್ಯನಾದ ಹನುಮಂತ,
ಸುಗ್ರೀವಗೆ
ಉಪದೇಶಿಸಿದ ಕರ್ತವ್ಯದ ಮಾತ.
ನ ವಿಸ್ಮೃತಿಸ್ತೇ ರಘುವರ್ಯ್ಯಕಾರ್ಯ್ಯೇ ಕಾರ್ಯ್ಯಾ ಕಥಞ್ಚಿತ್ ಸ ಹಿ
ನೋsಭಿಪೂಜ್ಯಃ
।
ನ ಚೇತ್ ಸ್ವಯಂ ಕರ್ತ್ತುಮಭಿಷ್ಟಮದ್ಯತೇ ದ್ಧ್ರು ವಂ ಬಲೇನಾಪಿ ಹಿ
ಕಾರಯಾಮಿ ॥೬.೨೫॥
ಶ್ರೀರಾಮನ ಸೇವೆಯ
ಮರೆವು ಅಲ್ಲ ಉಚಿತ,
ಇದು ಯಾವ ವಿಧದಲ್ಲೂ
ಆಗಲಾರದು ಸಮ್ಮತ.
ನೀನು
ನಿರುತ್ಸಾಹಿಯಾಗಿ ಭೋಗಗಳಲ್ಲೇ ಆದರೆ ಆಸಕ್ತ,
ಬಲತ್ಕಾರದಿ ಮಾಡಿಸುವೆ
ಕಾರ್ಯವನೆಂದ ಹನುಮಂತ.
ಸ ಏವಮುಕ್ತ್ವಾ ಹರಿರಾಜಸನ್ನಿಧೌ ದ್ವೀಪೇಷು ಸಪ್ತಸ್ವಪಿ ವಾನರಾನ್
ಪ್ರತಿ ।
ಸಮ್ಮೇಳನಾಯಾsಶುಗತೀನ್ ಸ್ಮ ವಾನರಾನ್ ಪ್ರಸ್ಥಾಪಯಾಮಾಸ ಸಮಸ್ತಶಃ ಪ್ರಭುಃ ॥೬.೨೬॥
ಸುಗ್ರೀವಗೆ
ಹನುಮಂತನಿಂದ ಎಚ್ಚರಿಕೆಯ ಮಾತು,
ಸಪ್ತದ್ವೀಪಗಳಲ್ಲಿರುವ
ಕಪಿಗಳ ಸೇರಿಸಲು ತಾಕೀತು.
ಹರೀಶ್ವರಾಜ್ಞಾಪ್ರಣಿಧಾನಪೂರ್ವಕಂ ಹನೂಮತಾ ತೇ ಪ್ರಹಿತಾ ಹಿ ವಾನರಾಃ ।
ಸಮಸ್ತಶೈಲದ್ರುಮಷಣ್ಡಸಂಸ್ಥಿತಾನ್ ಹರೀನ್ ಸಮಾಧಾಯ ತದಾsಭಿಜಗ್ಮುಃ ॥೬.೨೭॥
ಸುಗ್ರೀವಾಜ್ಞೆ
ಜೊತೆ ಹನುಮಂತನಿಂದ ಕಳಿಸಲ್ಪಟ್ಟ ಕಪಿಸೇನೆ,
ಬೆಟ್ಟ ಕಾಡು ಅಲೆದು ಮಾಡಿತು ಎಲ್ಲಾ ಕಪಿಸೈನ್ಯದ ಜಮಾವಣೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula