ವೀಕ್ಷ್ಯೈವ ತಾಂ ನಿಪತಿತಾಮಥ ರಾಮದೇವಃ ಸೋsಙ್ಗುಷ್ಠಮಾತ್ರ
ಚಲನಾದತಿಲೀಲಯೈವ ।
ಸಮ್ಪ್ರಾಸ್ಯ ಯೋಜನಶತೇsಥ ತಯೈವ ಚೋರ್ವೀಂ ಸರ್ವಾಂ ವಿದಾರ್ಯ್ಯ ದಿತಿಜಾನಹನದ್ ರಸಾಸ್ಥಾನ್
॥೬.೦೪॥
ನೋಡಿದ ರಾಮ ಅಲ್ಲಿ
ಬಿದ್ದಿರುವ ದುಂದುಭಿಯ ಶರೀರ,
ಹೆಬ್ಬೆರಳಿಂದ ಎಸೆದ
ಅದನ ನೂರು ಯೋಜನ ದೂರ.
ಆ ರಕ್ಕಸ
ದೇಹದಿಂದಲೇ ಭೂಮಿಯ ಸೀಳಿದ,
ರಸಾತಳದಲ್ಲಿದ್ದ
ಅನೇಕ ದೈತ್ಯರ ಸಂಹರಿಸಿದ.
ಶರ್ವಪ್ರಸಾದಜಬಲಾದ್ ದಿತಿಜಾನವಧ್ಯಾನ್ ಸರ್ವಾನ್ ನಿಹತ್ಯ ಕುಣಪೇನ
ಪುನಶ್ಚ ಸಖ್ಯಾ ।
ಭೀತೇನ
ವಾಲಿಬಲತಃ ಕಥಿತಃ ಸ್ಮ ಸಪ್ತ ಸಾಲಾನ್ ಪ್ರದರ್ಶ್ಯ ದಿತಿಜಾನ್ ಸುದೃಢಾಂಶ್ಚ ವಜ್ರಾತ್ ॥೬.೦೫ ॥
ಏಕೈಕಮೇಷು ಸ ವಿಕಮ್ಪಯಿತುಂ ಸಮರ್ತ್ಥಃ ಪತ್ರಾಣಿ ಲೋಪ್ತುಮಪಿ ತೂತ್ಸಹತೇ ನ ಶಕ್ತಃ ।
ವಿಷ್ವಕ್
ಸ್ಥಿತಾನ್ ಯದಿ ಭವಾನ್ ಪ್ರತಿಭೇತ್ಸ್ಯತೀಮಾನೇಕೇಷುಣಾ ತರ್ ಹಿ ವಾಲಿ ವಧೇ ಸಮರ್ತ್ಥಃ ॥೭.೦೬ ॥
ರುದ್ರವರಬಲದಿಂದ
ಅವಧ್ಯರಾಗಿದ್ದ ಎಲ್ಲಾ ದೈತ್ಯರು,
ರಾಮ ಎಸೆದ ದುಂದುಭಿ
ದೇಹದಿಂದ ಹತರಾದರು.
ವಾಲಿಭೀತ ಸುಗ್ರೀವ
ರಾಮಚಂದ್ರಗೆ ತೋರಿಸಿದ,
ದೈತ್ಯ ಕಠಿಣ ಏಳು
ತಾಳೆಮರಗಳ ಕುರಿತಾಗಿ ಹೇಳಿದ.
ಕಷ್ಟಪಟ್ಟು ಈ ಮರಗಳ
ವಾಲಿ ಅಲುಗಾಡಿಸಬಲ್ಲ,
ಅವನಿಗೆ ಈ ಮರದ ಎಲೆ
ಕೀಳಲೂ ಆಗುವುದಿಲ್ಲ.
ಸಾಲಲ್ಲಿರದ ಈ
ದೈತ್ಯ ಏಳು ಮತ್ತಿ ಮರಗಳು,
ಒಂದೇ ಬಾಣದಿ
ತುಂಡರಿಸುವಿಯಾ ಹೇಳು.
ಹೀಗಿದೆ ಈ ದೈತ್ಯ
ತಾಳೆಮರಗಳ ಸಾಮರ್ಥ್ಯ,
ಅವುಗಳ ಭೇದಿಸಿದರೆ
ನೀ ವಾಲಿವಧೆಗೆ ಸಮರ್ಥ.
ಜೇತುಂ ಚತುರ್ಗುಣಬಲೋ ಹಿ ಪುಮಾನ್ ಪ್ರಭುಃ ಸ್ಯಾದ್ಧನ್ತುಂ ಶತಾಧಿಕಬಲೋsತಿಬಲಂ ಸುಶಕ್ತಃ ।
ತಸ್ಮಾದಿಮಾನ್ ಹರಿಹಯಾತ್ಮಜಬಾಹ್ವಲೋಪ್ಯಪತ್ರಾನ್ ವಿಭಿದ್ಯ ಮಮ
ಸಂಶಯಮಾಶು ಭಿನ್ಧಿ ॥೬.೦೭॥
ಶತ್ರುವನ್ನ
ಗೆಲ್ಲಲು ಬೇಕು ಅವನಿಗಿಂತ ನಾಕು ಪಟ್ಟು ಬಲ,
ಶತ್ರುವನ್ನ
ಕೊಲ್ಲಲು ಬೇಕು ಅವನಿಗಿಂತ ನೂರು ಪಟ್ಟು ಬಲ.
ಇಂದ್ರಪುತ್ರ
ವಾಲಿಯಿಂದ ಕೀಳಲಾಗದ ಎಲೆಯ ಮರ,
ಕತ್ತರಿಸಿ ಮಾಡುವೆಯಾ ನನ್ನ ಸಂದೇಹ ಪರಿಹಾರ.[Contributed by Shri Govind Magal]
No comments:
Post a Comment
ಗೋ-ಕುಲ Go-Kula