Thursday, 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 21 - 23

ಯಃ ಪ್ರೇರಕಃ ಸಕಲಲೋಕಬಲಸ್ಯ ನಿತ್ಯಂ ಪೂರ್ಣ್ಣಾವ್ಯಯೋಚ್ಚಬಲವೀರ್ಯ್ಯತನುಃ ಸ್ವತನ್ತ್ರಃ ।
ಕಿಂ ತಸ್ಯ ದೃಷ್ಟಿಪಥಗಸ್ಯ ಚ ವಾನರೋsಯಂ ಕರ್ತೈಶಚಾಪಮಪಿ ಯೇನ ಪುರಾ ವಿಭಗ್ನಮ್ ॥೬.೨೧॥
ಸೀತಾಸ್ವಯಂವರದಿ ಶಿವಧನುಸ್ಸ ಮುರಿದ ಶ್ರೀರಾಮ,
ಸಕಲಲೋಕ ಕಾರ್ಯವಾಗುವುದು ಅನುಸರಿಸಿ ಇವನ ನೇಮ.
ಸರ್ವತಂತ್ರ ಸ್ವತಂತ್ರ ಎಣೆಯಿರದ ಜ್ಞಾನ ಬಲದ ಭೂಪ,
ದೃಷ್ಟಿಗೋಚರನಾದರೂ ಕಪಿ ಏನು ಮಾಡಬಲ್ಲದು ಪಾಪ.

ಸನ್ನೇsಥ ವಾಲಿನಿ ಜಗಾಮ ಚ ತಸ್ಯ ಪಾರ್ಶ್ವಂ ಪ್ರಾಹೈನಮಾರ್ದ್ರವಚಸಾ ಯದಿ ವಾಞ್ಚಸಿ ತ್ವಮ್ ।
ಉಜ್ಜೀವಯಿಷ್ಯ ಇತಿ ನೈಚ್ಛದಸೌ ತ್ವದಗ್ರೇ ಕೋ ನಾಮ ನೇಚ್ಛತಿ ಮೃತಿಂ ಪುರುಷೋತ್ತಮೇತಿ ॥೬.೨೨॥
ವಾಲಿ ನೋವಿನಿಂದ ಬೀಳುತಿರಲು ಧರೆಗೆ,
ರಾಮಚಂದ್ರ ಕರುಣದಿ ಬಂದ ಅವನೆಡೆಗೆ.
ರಾಮನೆಂದ-ಬದುಕ ಬಯಸುವೆಯಾದರೆ ಬದುಕಿಸುವೆ
ವಾಲಿಯೆಂದ-ನಿನ್ನುಪಸ್ಥಿತಿಯಲಿ ಮರಣವನ್ನೇ ಸ್ವಾಗತಿಸುವೆ.

ಕಾರ್ಯ್ಯಾಣಿ ತಸ್ಯ ಚರಮಾಣಿ ವಿಧಾಯ ಪುತ್ರಂ ತ್ವಗ್ರೇ ನಿಧಾಯ ರವಿಜಃ ಕಪಿರಾಜ್ಯ ಆಸೀತ್ ।
ರಾಮೋsಪಿ ತದ್ಗಿರಿವರೇ ಚತುರೋsಥ ಮಾಸಾನ್ ದೃಷ್ಟ್ವಾ ಘನಾಗಮಮುವಾಸ ಸಲಕ್ಷ್ಮಣೋsಸೌ ॥೬.೨೩॥
ಪುತ್ರ ಅಂಗದನಿಂದ ವಾಲಿಯ ಅಂತ್ಯಸಂಸ್ಕಾರ,
ಸುಗ್ರೀವಗೆ ಆಯ್ತು ಶಾಸ್ತೋಕ್ತವಾಗಿ ಕಪಿರಾಜ್ಯಭಾರ.
ಮಳೆಗಾಲ ಅನುಸರಿಸಿ ಪರ್ವತದಲ್ಲೇ ಮುಂದುವರೆದ ವಾಸ,
ಲಕ್ಷ್ಮಣನೊಡಗೂಡಿ ಅಲ್ಲೇ ಶ್ರೀರಾಮನ ಚಾತುರ್ಮಾಸ್ಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula