Wednesday, 30 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 04 - 06

ನೈವಾತ್ರ ವಿಶ್ರಮಣಮೈಚ್ಛತ ನಿಃಶ್ರಮೋsಸೌ ನಿಃಸ್ಸೀಮಪೌರುಷಗುಣಸ್ಯ ಕುತಃ ಶ್ರಮೋsಸ್ಯ ।
ಆಶ್ಲಿಷ್ಯ ಪರ್ವತವರಂ ಸ ದದರ್ಶ ಗಚ್ಛನ್ ದೈವೈಸ್ತು ನಾಗಜನನೀಂ ಪ್ರಹಿತಾಂ ವರೇಣ ೦೭.೦೪॥

ಅಮಿತಬಲ ಪೌರುಷದ ಹನುಮಗೆಲ್ಲಿಯ ಶ್ರಮ,
ಶ್ರಮವಾಗದ ಶಕ್ತಿನಿಧಿಗ್ಯಾಕೆ ವಿಶ್ರಾಂತಿಯ ನೇಮ.
ಶ್ರೇಷ್ಠ ಪರ್ವತ ಮೈನಾಕಗಿತ್ತ ಪ್ರೀತಿಯ ಆಲಿಂಗನ,
ಮುನ್ನಡೆದು ಕಂಡ ನಾಗಮಾತೆಯಾದ ಸುರಸೆಯನ್ನ.

ಜಿಜ್ಞಾಸುಭಿರ್ನ್ನಿಜಬಲಂ ತವ ಭಕ್ಷಮೇತು ಯದ್ಯತ್ ತ್ವಮಿಚ್ಛಸಿ ತದಿತ್ಯಮರೋದಿತಾಯಾಃ ।
ಆಸ್ಯಂ ಪ್ರವಿಶ್ಯ ಸಪದಿ ಪ್ರವಿನಿಃಸೃತೋsಸ್ಮಾದ್ ದೇವಾನನನ್ದಯದುತ ಸ್ವೃತಮೇಷು ರಕ್ಷನ್ ॥೭-೦೫॥

ನುಂಗಬಯಸಿದ್ದೆಲ್ಲಾ ನಿನ್ನ ಬಾಯಿಗೆ ಬೀಳಲೆಂದು ಸುರಸೆಗೆ ದೇವತೆಗಳ ವರ,
ಕ್ಷಣಾರ್ಧದಲ್ಲಿ ಅವಳ ಬಾಯಿಹೊಕ್ಕು ಹೊರಬಂದ ತಾ ಅಂಜನೀಕುಮಾರ.
ದೇವತೆಗಳ ವರಕ್ಕೆ ಹನುಮಂತದೇವರು  ಕೊಟ್ಟ ಬೆಲೆ,
ತನ್ನ ಪೌರುಷ ಮೆರೆದು ಸುರಸೆಯಿಂದ ಸ್ತುತನಾದ ಕಲೆ.

ದೃಷ್ಟ್ವಾ ಸುರಪ್ರಣಯಿತಾಂ ಬಲಮಸ್ಯ ಚೋಗ್ರಂ ದೇವಾಃ ಪ್ರತುಷ್ಟುವುರಮುಂ ಸುಮನೋsಭಿವೃಷ್ಟ್ಯಾ ।
ತೈರಾದೃತಃ ಪುನರಸೌ ವಿಯತೈವ ಗಚ್ಛನ್ ಛಾಯಾಗ್ರಹಂ ಪ್ರತಿದದರ್ಶ ಚ ಸಿಂಹಿಕಾಖ್ಯಮ್ ॥೭.೦೬॥

ಹನುಮಂತಗಿರುವ ಬಲ ವಾತ್ಸಲ್ಯ ಕಂಡ ದೇವತಾವೃಂದ,
ಹಾಡಿ ಕೊಂಡಾಡಿದರವನ ಸ್ತುತಿಸುತ್ತ ಪುಷ್ಪವೃಷ್ಟಿಯಿಂದ.
ದೇವತೆಗಳಿಂದ ಆದರಿಸಲ್ಪಟ್ಟ ಹನುಮ ಮುಂದೆ ಸಾಗಿದ,
ನೆರಳಿಂದಲೇ ಸೆಳೆವ ರಾಕ್ಷಸಿ ಸಿಂಹಿಕೆಯನ್ನು ತಾ ನೋಡಿದ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula