Thursday 17 May 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 6: 12 - 16

ದೃಷ್ಟ್ವಾ ಬಲಂ ಭಗವತೋsಥ ಹರೀಶ್ವರೋsಸಾವಗ್ರೇ ನಿಧಾಯ ತಮಯಾತ್ ಪುರಮಗ್ರಜಸ್ಯ।
ಆಶ್ರುತ್ಯ ರಾವಮನುಜಸ್ಯ ಬಿಲಾತ್ ಸ ಚಾsಗಾದಭ್ಯೇನಮಾಶು ದಯಿತಾಪ್ರತಿವಾರಿತೋsಪಿ ॥೬.೧೨॥
ಸುಗ್ರೀವಗೆ ಉಳಿಯಲಿಲ್ಲ ರಾಮಬಲದ ಸಂದೇಹ,
ರಾಮನೊಡನೆ ನಡೆದುಬಂದ ವಾಲಿನಗರದ ಸನಿಹ.
ಕೇಳಿದ ವಾಲಿ ಸುಗ್ರೀವನ ಯುದ್ಧದಾಹ್ವಾನ,
ತಾರೆಯ ತಡೆಗೂ ನಿಲ್ಲದ ವಾಲಿಯ  ಆಗಮನ.

ತನ್ಮುಷ್ಟಿಭಿಃ ಪ್ರತಿಹತಃ ಪ್ರಯಯಾವಶಕ್ತಃ ಸುಗ್ರೀವ ಆಶು ರಘುಪೋsಪಿ ಹಿ ಧರ್ಮ್ಮಮೀಕ್ಷನ್ 
ನೈನಂ ಜಘಾನ ವಿದಿತಾಖಿಲಲೋಕಚೇಷ್ಟೋsಪ್ಯೇನಂ ಸ ಆಹ ಯುಧಿ ವಾಂ ನ ಮಯಾ ವಿವಿಕ್ತೌ ॥೬.೧೩ ॥
ಸುಗ್ರೀವ ತಿಂದ ವಾಲಿಯಿಂದ ಮುಷ್ಠಿಪ್ರಹಾರ,
ವಾಪಸಾದ ರಾಮನ ಬಳಿ ಅಶಕ್ತನಾಗಿ ಅಪಾರ.
ರಾಮಚಂದ್ರ ತೋರುತ್ತಾನೆ ಸೂಕ್ಷ್ಮ ಧರ್ಮ,
ಒಮ್ಮೆಲೇ ವಾಲಿಯ ಕೊಲ್ಲದಿರುವ ಮರ್ಮ.
ಎಲ್ಲವನೂ ಬಲ್ಲ ಸೀಮಾತೀತ ಜಗದ್ ಸೃಷ್ಟಿಕರ್ತ,
ಇಬ್ಬರನು ಗುರುತಿಸಲಾರದವನಂತೆ ಸುಮ್ಮನೆ ನಿಂತ.

ಸೌಭ್ರಾತ್ರಮೇಷ ಯದಿ ವಾಞ್ಚತಿ ವಾಲಿನೈವ ನಾಹಂ ನಿರಾಗಸಮಥಾಗ್ರಜನಿಂ ಹನಿಷ್ಯೇ ।
ದೀರ್ಘಃ ಸಹೋದರಗತೋ ನ ಭವೇದ್ಧಿ ಕೋಪೋ ದೀರ್ಘೋsಪಿ ಕಾರಣಮೃತೇ ವಿನಿವರ್ತ್ತತೇ ಚ ॥೬.೧೪ ॥
ಅಣ್ಣ ತಮ್ಮಂದಿರ ಮಧ್ಯದ ಜಗಳ,
ಬಹುಕಾಲ ಉಳಿಯುವುದು ವಿರಳ.
ಇಬ್ಬರಲ್ಲಿ ಬಂದ ವೈರ ಅಸಮಧಾನ,
ಯಾವಾಗಲಾದರೂ ಆದೀತು ಶಮನ.
ಸಹೋದರ ಪತ್ನಿಯೊಡನೆ ಅನೈತಿಕ ಕೂಟ,
ಶ್ರೀರಾಮ ಕೊಡಬೇಕಿತ್ತು ಇಬ್ಬರಿಗೂ ಪಾಠ.
ಹೀಗಾಗಿ ವಾಲಿಯ ವಧಿಸಲು ಇಲ್ಲ ಕಾರಣ,
ರಾಮಚಂದ್ರ ಜಗಕೆ ತೋರಿದ ಲೋಕಶಿಕ್ಷಣ.

ಕೋಪಃ ಸಹೋದರಜನೇ ಪುನರನ್ತಕಾಲೇ ಪ್ರಾಯೋ ನಿವೃತ್ತಿಮುಪಗಚ್ಛತಿ ತಾಪಕಶ್ಚ ।
ಏಕಸ್ಯ ಭಙ್ಗ ಇತಿ ನೈವ ಝಟಿತ್ಯಪಾಸ್ತ ದೋಷೋ ನಿಹನ್ತುಮಿಹ ಯೋಗ್ಯ ಇತಿ ಸ್ಮ ಮೇನೇ ॥೬.೧೫॥
ಸಹೋದರರ ಮಧ್ಯದ ಯಾವುದೇ ಕೋಪ,
ಮರಣಾನಂತರ ತರಬಹುದು ಪಶ್ಚಾತ್ತಾಪ.
ತಿದ್ದಿಕೊಳ್ಳಲು ಕೊಡಬೇಕವರಿಗೆ ಅವಕಾಶ,
ಹೀಗಾಗಿ ರಾಮಚಂದ್ರ ಧರಿಸಿದ ತಟಸ್ಥ ವೇಷ.

ತಸ್ಮಾನ್ನ ಬನ್ಧುಜನಗೇ ಜನಿತೇ ವಿರೋಧೇ ಕಾರ್ಯ್ಯೋ ವಧಸ್ತದನುಭನ್ಧಿಭಿರಾಶ್ವಿತೀಹ ।
ಧರ್ಮ್ಮಂ ಪ್ರದರ್ಶಯಿತುಮೇವ ರವೇಃ ಸುತಸ್ಯಭಾವೀ ನ ತಾಪ ಇತಿ ವಿಚ್ಚ ನ ತಂ ಜಘಾನ ॥೬.೧೬॥
ಬಂಧುಗಳಲ್ಲಿ ತಲೆದೋರಿದಾಗ ವೈಮನಸ್ಯ,
ಮೂರನೆಯವರು ದುಡುಕಬಾರದು ಅನವಶ್ಯ.
ಸುಗ್ರೀವಗೆ ಮುಂದಾಗಬಾರದು ದುಃಖ,
ಪಶ್ಚಾತ್ತಾಪದಿ ಮರಳಬಹುದದು  ಸಖ್ಯ.
ಸೂಕ್ಷ್ಮವಾಗಿ ತಿಳಿಯಬೇಕು ಉಭಯರ ಮನಸ್ಥಿತಿ,
ಇದು ರಾಮಚಂದ್ರ ತೋರಿದ ವಿಶೇಷ ಲೋಕನೀತಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula