Sunday 1 April 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 5: 09 - 16

ಸಮಸ್ತಪೌರಾನುಗತೇsನುಜೇ ಗತೇ ಸ ಚಿತ್ರಕೂಟೇ ಭಗವಾನುವಾಸ ಹ ।
ಅಥಾsಜಗಾಮೇನ್ದ್ರಸುತೋsಪಿ ವಾಯಸೋ ಮಹಾಸುರೇಣಾsತ್ಮಗತೇನ ಚೋದಿತಃ  ॥೫.೦೯॥

ಎಲ್ಲ ದಂಡಿನೊಡನೆ ಭರತ ಅಯೋಧ್ಯೆಯೆಡೆಗೆ ಹೊರಟ,
ರಾಮನ ವಾಸಸ್ಥಾನವಾಯ್ತು ಕೆಲಕಾಲ ಆಗ ಚಿತ್ರಕೂಟ.
ಇಂದ್ರನ ಮಗನಾಗಿದ್ದೂ ಜಯಂತ ಒಮ್ಮೆ ಕಾಗೆಯಾಗಿ ಹುಟ್ಟಿದ್ದ,
ಕಾಗೆಯ ರೂಪದ ಕುರಂಗಾಸುರ ಸೀತಾರಾಮರ ಬಳಿಗೆ ಬಂದ.

ಸ ಆಸುರಾವೇಶವಶಾದ್ ರಮಾಸ್ತನೇ ಯದಾ ವ್ಯಧಾತ್ ತುಂಡಮಥಾಭಿವೀಕ್ಷಿತಃ ।
ಜನಾರ್ದನೇನಾsಶು ತೃಣೇ ಪ್ರಯೋಜಿತೇ ಚಚಾರ ತೇನ ಜ್ವಲತಾsನುಯಾತಃ ॥೫.೧೦॥

ಅಸುರಾವೇಷದಿ ಜಯಂತ ಸೀತೆಯ ಸ್ತನ ಕುಕ್ಕಲುದ್ಯುಕ್ತನಾದನಾಗ,
ರಾಮ ಮಂತ್ರಿಸಿ  ಎಸೆದ ಕಡ್ಡಿಯೇ ಆಯ್ತು ಬ್ರಹ್ಮಾಸ್ತ್ರ  ಪ್ರಯೋಗ.
ಜಯಂತಗೆ ಬೆನ್ನಟ್ಟಿದ ಅಸ್ತ್ರದ ಕಾಟ,
ಭಯಗೊಂಡ ಅಸುರ ಆರಂಭಿಸಿದ ಓಟ.

ಸ್ವಯಮ್ಭುಶರ್ವೇನ್ದ್ರಮುಖಾನ್ ಸುರೇಶ್ವರಾನ್ ಜಿಜೀವಿಷುಸ್ತಾನ್ ಶರಣಂ ಗತೋsಪಿ ।
ಬಹಿಷ್ಕೃತಸ್ತೈರ್ಹರಿಭಕ್ತಿಭಾವತೋ ಹ್ಯಲಙ್ಘ್ಯಶಕ್ತ್ಯಾ ಪರಮಸ್ಯ ಚಾಕ್ಷಮೈಃ ॥೫.೧೧॥

ಪ್ರಾಣಭಿಕ್ಷೆಗಾಗಿ ಅಸುರಾವೇಷದ ಜಯಂತನ ಪರದಾಟ,
ರಾಮಶಕ್ತಿ ,ಅವನ ವಿಶೇಷಭಕ್ತರಲ್ಲಿ ನಡೆಯಲಿಲ್ಲ ಆಟ.
ಇಂದ್ರ ರುದ್ರ ಬ್ರಹ್ಮಾದಿಗಳಲ್ಲಿ ಜಯಂತನ ಮೊರೆ,
ವಿಷ್ಣುಭಕ್ತ ಪರಿವಾರದಿಂದ ಬಹಿಷ್ಕಾರದ ಬರೆ.

ಪುನಃ ಪ್ರಯಾತಃ ಶರಣಂ ರಘೂತ್ತಮಂ ವಿಸರ್ಜಿತಸ್ತೇನ ನಿಹತ್ಯ ಚಾಸುರಮ್ ।
ತದಕ್ಷಿಗಂ ಸಾಕ್ಷಿಕಮಪ್ಯವಧ್ಯಂ ಪ್ರಸಾದತಶ್ಚನ್ದ್ರವಿಭೂಷಣಸ್ಯ ॥೫.೧೨॥

ದಾರಿಕಾಣದೇ ಜಯಂತ  ರಾಮಚಂದ್ರನಲ್ಲಿ ಬಂದು ಶರಣಾದ,
ಶಿವನನುಗ್ರಹದಿಂದ ಕಾಗೆಯ ಕಣ್ಣಲ್ಲಿದ್ದ ಕುರಂಗ ಅವಧ್ಯನಾಗಿದ್ದ.
ರಾಮಚಂದ್ರನಿಂದ ಕಣ್ಣಿನೊಡನೆ ಕುರಂಗಾಸುರನ ವಧೆ,
ಶರಣಾದ ಭಕ್ತ ಜಯಂತಗೆ ಕೊಟ್ಟ ಬಿಡುಗಡೆಯ ಸುಧೆ.


ಸ  ವಾಯಸಾನಾಮಸುರೋsಖಿಲಾನಾಂ ವರಾದುಮೇಶಸ್ಯ ಬಭೂವ ಚಾಕ್ಷಿಗಃ ।
ನಿಪಾತಿತೋsಸೌ ಸಹ ವಾಯಸಾಕ್ಷಿಭಿಸ್ತೃಣೇನ ರಾಮಸ್ಯ ಬಭೂವ ಭಸ್ಮಸಾತ್॥೫.೧೩॥

ಕುರಂಗಾಸುರನಿಗಿತ್ತು ಶಿವನ ವರಬಲ,
ಎಲ್ಲಾ ಕಾಗೆಗಳ ಕಣ್ಣಾಗಿತ್ತು ಅವನ ಬಿಲ.
ರಾಮಾಸ್ತ್ರದಿಂದ ಸಮಸ್ಯೆಗೆ ಪರಿಹಾರ,
ಕಣ್ಣೊಂದಿಗಾಯ್ತು ಕುರಂಗನ ಸಂಹಾರ.

ದದುರ್ಹಿ ತಸ್ಮೈವಿವರಂ ಬಲಾರ್ಥಿನೋ ಯದ್ ವಾಯಸಾಸ್ತೇನ ತದಕ್ಷಿಪಾತನಮ್ ।
ಕೃತಂ ರಮೇಶೇನ ತದೇಕನೇತ್ರಾ ಬಭೂವುರನ್ಯೇsಪಿ ತು ವಾಯಸಾಃ ಸದಾ ॥೫.೧೪॥

ಕಾಗೆಗಳಿಗೂ ಕುರಂಗನಿಗೂ ಆಗಿತ್ತು ಅನೈತಿಕ ಒಪ್ಪಂದ,
ಇಬ್ಬರ ವ್ಯವಸ್ಥೆಯಾಗಿತ್ತದು ಹೆಚ್ಚು ಬಲದ ಲೋಭದಿಂದ.
ಜಯಂತನ ಮೂಲಕ ರಾಮ ಕಿತ್ತ ಕಾಗೆಗಳ ಒಂದು ಕಣ್ಣು,
ಅಸುರಗಾಶ್ರಯ ಕೊಟ್ಟ  ಕಾಗೆಗಳಿಗೆ ಇಂದೂ ಒಕ್ಕಣ್ಣು.

ಭವಿಷ್ಯತಾಮಪ್ಯಥ ಯಾವದೇವ ದ್ವಿನೇತ್ರತಾ ಕಾಕಕುಲೋದ್ಭವಾನಾಮ್ ।
ತಾವತ್ ತದಕ್ಷ್ಯಸ್ಯ ಕುರಙ್ಗನಾಮ್ನಃ ಶಿವೇನ ದತ್ತಂ ದಿತಿಜಸ್ಯ ಚಾಕ್ಷಯಮ್ ॥೫.೧೫॥

ಕಾಗೆ ಸಂತತಿಯಲ್ಲಿ ಎಲ್ಲೀವರೆಗಿರುತ್ತವೋ ಎರಡು ಕಣ್ಣು,
ಆವರೆಗೆ ಕುರಂಗನಿಗೆ ಮರಣವಿಲ್ಲೆಂಬ ಶಿವವರದ ಹಣ್ಣು.
ಎಲ್ಲಾ ಕಾಲದ ಕಾಗೆಗಳ ಕಣ್ಣುಗಳಲ್ಲಿ ಅವನ ಮನೆ,
ಕಾಗೆ -ಕಣ್ಣು ಇರುವವರೆಗೂ ಅವನಿಗಿಲ್ಲ ಕೊನೆ.

ಅತಃ ಪುನರ್ಭಾವಮಮುಷ್ಯ ಹಿನ್ವನ್ ಭವಿಷ್ಯತಶ್ಚೈಕದೃಶಶ್ಚಕಾರ ।
ಸ ವಾಯಸಾನ್ ರಾಘವ ಆದಿಪೂರುಷಸ್ತತೋ ಯಯೌ ಶಕ್ರಸುತಸ್ತದಾಜ್ಞಯಾ॥೫.೧೬॥

ತಡೆಯಬೇಕಿತ್ತು ಕುರಂಗಾಸುರನ ಮರುಹುಟ್ಟು,
ಅದಕೆಂದೇ ರಾಮನಿಂದ ಕಾಗೆಗಳ ಒಕ್ಕಣ್ಣಿಗೆ ಪೆಟ್ಟು.
ಹಾಗೆಂದೇ ಇಂದಿಗೂ ಕಾಗೆಗಳಿಗೆ ಒಕ್ಕಣ್ಣು,
ಕ್ಷಮೆ ಕೋರಿದ ಜಯಂತಗೆ ಬಿಡುಗಡೆಯ ಹಣ್ಣು.


No comments:

Post a Comment

ಗೋ-ಕುಲ Go-Kula