Friday, 28 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 78 - 86

 ಹಸ್ತಪ್ರಾಪ್ತಂ ಚ ಪಾಞ್ಚಾಲಂ ನಾಗ್ರಹೀತ್ ಸ ವೃಕೋದರಃ ।

ಗುರ್ವರ್ತ್ಥಾಮರ್ಜ್ಜುನಸ್ಯೋರ್ವೀಂ ಪ್ರತಿಜ್ಞಾಂ ಕರ್ತ್ತುಮಪ್ಯೃತಾಮ್ ॥೧೮.೭೮॥

ಮಾನಭಙ್ಗಾಯ ಕರ್ಣ್ಣಸ್ಯ ಪಾರ್ತ್ಥಮೇವ ನ್ಯಯೋಜಯತ್ ।

ಸ ಶರಾನ್ ಕ್ಷಿಪತಸ್ತಸ್ಯ ಪಾಞ್ಚಾಲಸ್ಯಾರ್ಜ್ಜುನೋ ದ್ರುತಮ್ ॥೧೮.೭೯॥

ಪುಪ್ಲುವೇ ಸ್ಯನ್ದನೇ ಚಾಪಂ ಛಿತ್ವಾ ತಂ ಚಾಗ್ರಹೀತ್ ಕ್ಷಣಾತ್ ।

ಸಿಂಹೋ ಮೃಗಮಿವಾsದಾಯ ಸ್ವರಥೇ ಚಾಭಿಪೇತಿವಾನ್ ॥೧೮.೮೦॥

ತಮ್ಮನ ಮೇಲಿನ ಪ್ರೀತಿಯಿಂದ ದ್ರುಪದನ ಬಂಧಿಸಲಿಲ್ಲ ಭೀಮ ,

ಅರ್ಜುನನ ಮಹಾ ಪ್ರತಿಜ್ಞೆಯ ಈಡೇರಿಸುವಲ್ಲಿ ಇತ್ತವನ ಕಾಮ ,

ಕರ್ಣನ ಮಾನಭಂಗಕ್ಕೆ ಅರ್ಜುನನೇ ಕಾರಣವಾಗಲೆo ನೇಮ .

ಬಾಣ ಬಿಡುತ್ತಿದ್ದ ದ್ರುಪದನ ರಥದೊಳಗೆ ಅರ್ಜುನ ಹಾರಿದ ,

ಅವನ ಬಿಲ್ಲನ್ನು ಮುರಿದುಹಾಕಿ ಕ್ಷಣದಲ್ಲಿ ಅವನ ಸೆರೆ ಹಿಡಿದ ,

ಸಿಂಹ ಜಿಂಕೆಯ ಎಳೆತರುವಂತೆ ಅವನನ್ನು ತನ್ನ ರಥಕ್ಕೆ ಎಳೆತಂದ .

 

ಅಥ ಪ್ರಕುಪಿತಂ ಸೈನ್ಯಂ ಫಲ್ಗುನಂ ಪರ್ಯ್ಯವಾರಯತ್ ।

ಜಘಾನ ಭೀಮಸ್ತರಸಾ ತತ್ ಸೈನ್ಯಂ ಶರವೃಷ್ಟಿಭಿಃ ॥೧೮.೮೧॥

ಆಗ ಅರ್ಜುನನ ಸುತ್ತುವರೆಯಿತು ಕೋಪಗೊಂಡ ದ್ರುಪದಸೈನ್ಯ ,

ಆ ಸೈನ್ಯವನ್ನು ಸಂಹರಿಸತೊಡಗಿದ ಬಾಣಗಳಿಂದ ಭೀಮಸೇನ .

 

ಅಥ ಸತ್ಯಜಿದಭ್ಯಾಗಾತ್ ಪಾರ್ತ್ಥಂ ಮುಞ್ಚಞ್ಛರಾನ್ ಬಹೂನ್ ।

ತಮರ್ಜ್ಜುನಃ ಕ್ಷಣೇನೈವ ಚಕ್ರೇ ವಿರಥಕಾರ್ಮ್ಮುಕಮ್ ॥೧೮.೮೨ ॥

ಆನಂತರ ದ್ರುಪದಪುತ್ರ ಸತ್ಯಜಿತ್ ಅರ್ಜುನನ ಮೇಲೆ ಬಾಣ ಬಿಡುತ್ತಾ ಬಂದ ,

ಹಾಗೆ ಬಂದ ಅವನನ್ನು ಕ್ಷಣದಲ್ಲೇ ಅರ್ಜುನ ರಥ ಮತ್ತು ಶಸ್ತ್ರಹೀನನ ಮಾಡಿದ .

 

ಘ್ನನ್ತಂ ಭೀಮಂ ಪುನಃ ಸೈನ್ಯಮರ್ಜ್ಜುನಃ ಪ್ರಾಹ ಮಾ ಭವಾನ್ ।

ಸೇನಾಮರ್ಹತಿ ರಾಜ್ಞೋsಸ್ಯ ವೀರ ಹನ್ತುಮಶೇಷತಃ ॥೧೮.೮೩॥

ಸಮ್ಬನ್ಧಯೋಗ್ಯಸ್ತಾತಸ್ಯ ಸಖಾsಯಂ ನಃ ಸುಧಾರ್ಮ್ಮಿಕಃ ।

ನೇಷ್ಯಾಮ ಏನಮೇವಾತೋ ಗುರೋರ್ವಚನಗೌರವಾತ್ ॥೧೮.೮೪॥

ಪಾಂಚಾಲಸೈನ್ಯ ತರಿಯುತ್ತಿದ್ದ ಭೀಮಗೆ ಹೇಳುತ್ತಾನೆ ಅರ್ಜುನ ,

ಎಲವೋ ವೀರ ಪೂರ್ಣಸೈನ್ಯವನ್ನು ಮಾಡಿಬಿಡಬೇಡ ದಮನ ,

ಈ ದ್ರುಪದ ಧಾರ್ಮಿಕ ಮತ್ತು ನಮ್ಮ ತಂದೆಯ ಮಿತ್ರ ,

ಧರ್ಮದಲ್ಲಿದ್ದು , ನಮ್ಮ ಸಂಬಂಧಕ್ಕೆ ಕೂಡಾ ಪಾತ್ರ .

ನಮ್ಮ ಗುರುಗಳ ಮಾತಿಗೆ ಗೌರವ ಕೊಡುವ ,

ಇವನನ್ನು ಮಾತ್ರ ಹಿಡಿದುಕೊಂಡೊಯ್ಯುವ .

 

ಸ್ನೇಹಪಾಶಂ ತತಶ್ಚಕ್ರೇ ಬೀಭತ್ಸೌ ದ್ರುಪದೋsಧಿಕಮ್ ।

ತತಃ ಸೇನಾಂ ವಿಹಾಯೈವ ಭೀಮೋ ಬೀಭತ್ಸುಮನ್ವಯಾತ್ ॥೧೮.೮೫॥

ಅರ್ಜುನನ ಈ ಮಾತಿನಿಂದ ದ್ರುಪದಗಾಯಿತು ಅವನಲ್ಲಿ ತುಂಬು ಸ್ನೇಹ ,

ಭೀಮ ಪಾಂಚಾಲಸೇನೆಯ ಸಂಹಾರ ಬಿಟ್ಟ ಅನುಸರಿಸಿ ತಮ್ಮನ ಭಾವ .

 

ಮುಕ್ತಾ ಕಥಞ್ಚಿದ್ ಭೀಮಾತ್ ಸ್ಯಾತ್ ಸಾ ಸೇನಾ ದುದ್ರುವೇ ಭಯಾತ್ ।

ದ್ರುಪದಂ ಸ್ಥಾಪಯಾಮಾಸಾಥಾರ್ಜ್ಜುನೋ ದ್ರೋಣಸನ್ನಿಧೌ ॥೧೮.೮೬ ॥

ಭೀಮಸೇನನಿಂದ ಪಾರಾಗಿ ಉಳಿದ ಆ ಸೇನೆ ಆರಂಭಿಸಿತು ಓಟ ,

ಹೀಗೆ ಅರ್ಜುನ ದ್ರೋಣಸನ್ನಿಧಿಯಲ್ಲಿ ದ್ರುಪದನ ನಿಲ್ಲಿಸಿದ ಆಟ .

No comments:

Post a Comment

ಗೋ-ಕುಲ Go-Kula