Monday 10 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 228 234

 ತಯೋಃ ಸಹಾಯ  ಏವ ತೌ ವರಾಚ್ಛಿವಸ್ಯ ಭೂತಕೌ ।

ಅಜೇಯತಾಮವಾಪತುರ್ನ್ನಚಾನ್ಯಥಾsಮರಾವಪಿ ॥೧೭.೨೨೮॥

ಹಂಸ- ಡಿಭಕರಿಗೆ ಈ ಭೂತಗಳು ಸಹಾಯಕರಾಗಿದ್ದ ಕಾರಣ ,

ಶಿವನಿಂದಲೇ ಇತ್ತವುಗಳಿಗೆ ಅಜೇಯತ್ವ ಅವಧ್ಯತ್ವದ ವರದಾನ .

 

ಅಜೇಯತಾಮವದ್ಧ್ಯತಾಮವಾಪ್ಯ ತಾವುಭೌ ಶಿವಾತ್ ।

ಪಿತುಸ್ತು ರಾಜಸೂಯಿತಾಂ ಸಮಿಚ್ಛತೋ ಮದೋದ್ಧತೌ ॥೧೭.೨೨೯॥

ಈ ಸಾಲ್ವಪುತ್ರರಾಗಿದ್ದರು ಭಾರೀ ಮದೋನ್ಮತ್ತ ,

ಸೋಲು ಸಾವಿರದ ವರದಿಂದವರು ಸದಾ ರಕ್ಷಿತ ,

ತಮ್ಮ ತಂದೆ ರಾಜಸೂಯ ಮಾಡಲೆಂದವರ ಇಂಗಿತ .

(ಹಂಸ- ಡಿಭಕರು ತಂದೆಯ ರಾಜಸೂಯಯಾಗ ಮಾಡಲು ಬಯಸಿರುವ ಹಿಂದಿನ ಉದ್ದೇಶವೇನು?)

 

ಜರಾಸುತೋ ಗುರುತ್ವತೋ ವಿರೋದ್ಧುಮತ್ರ ನೇಚ್ಛತಿ ।

ನೃಪಾಂಸ್ತು ದೇವಪಕ್ಷಿಣೋ ವಿಜಿತ್ಯ ಕರ್ತುಮಿಚ್ಛತಃ ॥೧೭.೨೩೦॥

ಇಲ್ಲ-ತಮ್ಮ ಗುರುವಾದ ಜರಾಸಂಧನನ್ನು ವಿರೋಧಿಸುವ ಬಯಕೆ ,

ದೇವಗಣದ ರಾಜರ ಗೆದ್ದು  ಯಾಗಮಾಡಬೇಕೆಂದವರ ಅನಿಸಿಕೆ .

 

ಸ್ವಯಂ ಹಿ ರಾಜಸೂಯಿತಾಂ ಜರಾಸುತೋ ನ ಮನ್ಯತೇ ।

ಯತೋ ಹಿ ವೈಷ್ಣವಂ ಕ್ರತುಂ ತಮಾಹುರೀಶ ವೈದಿಕಾಃ ॥೧೭.೨೩೧॥

ಸ್ವಯಂ ಜರಾಸಂಧ ಇಷ್ಟಪಟ್ಟು ರಾಜಸೂಯ ಯಾಗ ಮಾಡಲಾರ ,

ವಿಷ್ಣುದ್ವೇಷಿಯಾದವಗೆ ವೈಷ್ಣವಯಾಗ ಸಹಜವಾಗೇ ಬಲುದೂರ .

 

ಇಮೌ ಪಿತುರ್ಯ್ಯಶೋsರ್ತ್ಥಿನೌ ಪರಾಭವಾಯ ತೇ ತಥಾ ।

ಸಮಿಚ್ಛತೋsದ್ಯ ತಂ ಕ್ರತುಂ ಭವನ್ತಮೂಚತುಶ್ಚತೌ ॥೧೭.೨೩೨॥

ಹಾರಿಸಲು ತಮ್ಮ ತಂದೆಯ ಕೀರ್ತಿಪತಾಕೆ ,

ಸೋಲಿಸಿ ನಿನ್ನ ಯಜ್ಞ ಮಾಡುವ ಬಯಕೆ ,

ವಿಪ್ರ ಮಾಡಿದ ಹಂಸ ಡಿಭಕರ ಸಂದೇಶದರಿಕೆ.

 

ಸಮುದ್ರಸಂಶ್ರಯೋ  ಭವಾನ್ ಬಹೂನ್ ಪ್ರಗೃಹ್ಯ ಲಾವಣಾನ್ ।

ಸುಭಾರಕಾನುಪೈಹಿ ನಾವಿತಿ ಕ್ಷಮಸ್ವ ಮೇ ವಚಃ ॥೧೭.೨೩೩॥

ಸಾಗರಶಾಯಿ ಸಾಗರ ಆಶ್ರಿತನಾಗಿರತಕ್ಕಂಥ ನೀನು ,

ಹೇರಳ ಉಪ್ಪು ಬೇರೆ ಕಾಣಿಕೆ ಒಪ್ಪಿಸಲೆಂದವರ ಫರ್ಮಾನು,

ಆ ಮಾತನ್ನೇ ಆಡುತ್ತಿರುವ ನನ್ನನ್ನು ಕ್ಷಮಿಸಬೇಕು ನೀನು .

 

ಇತೀರ್ಯ ತಂ ನನಾಮ ಸಃ ಪ್ರ ಚಾಹಸನ್ ಸ್ಮ ಯಾದವಾಃ ।

ಹರಿಸ್ತು ಸಾತ್ಯಕಿಂ ವಚೋ ಜಗಾದ ಮೇಘನಿಸ್ವನಃ ॥೧೭.೨೩೪॥

ಹೀಗೆ ಎಲ್ಲಾ ವಿವರಿಸಿ ನಮಿಸಿದ ಬ್ರಾಹ್ಮಣ ,

ಅಲ್ಲಿದ್ದ ಯಾದವರ ನಗುವಿಗಾಯಿತು ಕಾರಣ ,

ಗಂಭೀರ ಧ್ವನಿಯಲ್ಲಿ ಸಾತ್ಯಕಿಗೆ ಹೇಳುತ್ತಾನೆ ಕೃಷ್ಣ .

No comments:

Post a Comment

ಗೋ-ಕುಲ Go-Kula