Thursday, 27 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 69 -77

 ತಾನ್ ಪ್ರಭಗ್ನಾನ್ ಸಮಾಲೋಕ್ಯ ಭೀಮಃ ಪ್ರಹರತಾಂ ವರಃ ।

ಆರುರೋಹ ರಥಂ ವೀರಃ ಪುರ ಆತ್ತಶರಾಸನಃ ॥೧೮.೬೯॥

ಪ್ರಹಾರದಲ್ಲಿ ಮುಖ್ಯ ಮುಂದಾಳಾದ ಭೀಮಸೇನ ,

ಕಂಡು ಸೋಲುಂಡು ಬಂದ ದುರ್ಯೋಧನಾದಿಗಳನ್ನ ,

ಮುಂದೆ ರಥವೇರಿದ ತಾನು ಹಿಡಿದು ಬಿಲ್ಲುಬಾಣಗಳನ್ನ.

 

ತಮನ್ವಯಾದಿನ್ದ್ರಸುತೋ ಯಮೌ ತಸ್ಯೈವ ಚಕ್ರಯೋಃ ।

ಯುಧಿಷ್ಠಿರಸ್ತು ದ್ರೋಣೇನ ಸಹ ತಸ್ಥೌ ನಿರೀಕ್ಷಕಃ ॥೧೮.೭೦॥

ಭೀಮನ ಅನುಸರಿಸಿಕೊಂಡು ತಾನು ಹೊರಟ ಅರ್ಜುನನಾಗ ,

ನಕುಲ ಸಹದೇವರು ವಹಿಸಿಕೊಂಡರು ರಥಚಕ್ರ ರಕ್ಷಕರಜಾಗ ,

ಧರ್ಮರಾಜ ದ್ರೋಣರೊಡಗೂಡಿ ಯುದ್ಧನಿರೀಕ್ಷಕ ಆದರಾಗ .

 

 

ಅಯಾನ್ತಮಗ್ರತೋ ದೃಷ್ಟ್ವಾಭೀಮಮಾತ್ತಶರಾಸನಮ್ ।

ದುದ್ರುವುಃ ಸರ್ವಪಾಞ್ಚಾಲಾಃ ವಿವಿಶುಃ ಪುರಮೇವ ಚ ॥೧೮.೭೧॥

ಮುಂದೆ ಬಿಲ್ಲು ಹಿಡಿದು ನುಗ್ಗಿ ಬರುತ್ತಿರುವ ಭೀಮಸೇನನ ಆ ನೋಟ ,

ಹೆಂಗಸರು ಮಕ್ಕಳು ಪಾಂಚಾಲರನ್ನು ಪಟ್ಟಣಕ್ಕೆ ಸೇರಿಸಿತು ಅವರ ಓಟ .

 

ದ್ರುಪದಸ್ತ್ವಭ್ಯಯಾದ್ ಭೀಮಂ ಸಪುತ್ರಃ ಸಾರಸೇನಯಾ ।

ಚಕ್ರರಕ್ಷೌ ತು ತಸ್ಯಾsಸ್ತಾಂ ಯುಧಾಮನ್ಯೂತ್ತಮೋಜಸೌ ॥೧೮.೭೨॥

ಧಾತ್ರರ್ಯ್ಯಮಾವೇಶಯುತೌ ವಿಶ್ವಾವಸುಪರಾವಸೂ ।

ಸುತೌ ತಸ್ಯ ಮಹಾವೀರ್ಯ್ಯೌ ಸತ್ಯಜಿತ್ ಪೃಷ್ಠತೋsಭವತ್ ॥೧೮.೭೩॥

ಸ ಮಿತ್ರಾಂಶಯುತೋ ವೀರಶ್ಚಿತ್ರಸೇನೋ ಮಹಾರಥಃ ।

ಅಗ್ರತಸ್ತು ಶಿಖಣ್ಡ್ಯಾಗಾದ್ ರಥೋದಾರಃ ಶರಾನ್ ಕ್ಷಿಪನ್ ॥೧೮.೭೪॥

ದ್ರುಪದ ಮಕ್ಕಳೊಡಗೂಡಿ ನುರಿತ ಸೈನಿಕರೊಂದಿಗೆ ಭೀಮನ ಎದುರಿಸಿದಾಗ ,

ಯುಧಾಮನ್ಯು ಮತ್ತು ಉತ್ತಮೋಜಸ್ ಅವನ ರಥ ಚಕ್ರರಕ್ಷಕರಾಗಿ ನಿಂತರಾಗ .

ಧಾತ್ರ ಮತ್ತು ಅರ್ಯಮಾ ಹೆಸರಿರುವವರು

ದ್ವಾದಶ ಆದಿತ್ಯರಲ್ಲಿ ಅವರೂ ಕೂಡಾ ಇಬ್ಬರು .

ಅವರ ಆವೇಶದಿ ಕೂಡಿದ ವಿಶ್ವಾವಸು ಪರಾವಸು ಎಂಬ ಗಂಧರ್ವರು,

ಮಹಾಪರಾಕ್ರಮಶಾಲಿಗಳಾಗಿ ದ್ರುಪದರಾಜನ ಮಕ್ಕಳಾಗಿ ಬಂದವರು .

ಸತ್ಯಜಿತ್ ಎಂಬುವವ ದ್ರುಪದನ ಹಿಂದಿನ ರಕ್ಷಕನಾಗಿದ್ದ ,

ಅವ ಮಿತ್ರಾಂಶದಿ ಕೂಡಿದ ಚಿತ್ರಸೇನ ಗಂಧರ್ವನಾಗಿದ್ದ .

ಮುಂಭಾಗದಿ ಶ್ರೇಷ್ಠರಥಿ ಶಿಖಂಡಿ ಬಾಣ ಬಿಡುತ್ತಾ ಬಂದ .

 

ಜನಮೇಜಯಸ್ತಮನ್ವೇವ ಪೂರ್ವಂ ಚಿತ್ರರಥೋ ಹಿ ಯಃ ।

ತ್ವಷ್ಟುರಾವೇಶಸಂಯುಕ್ತಃ ಸ ಶರಾನಭ್ಯವರ್ಷತ ॥೧೮.೭೫॥

ಜನಮೇಜಯ ಶಿಖಂಡಿಯ ಹಿಂದಿನಿಂದ ಬಾಣಗಳ ಎಸೆದ ,

ಮೊದಲು ಅವನು ಚಿತ್ರರಥ ಎಂಬ ಹೆಸರಿನ ಗಂಧರ್ವ ಆಗಿದ್ದ .

ದ್ವಾದಶಾದಿತ್ಯರಲ್ಲಿ ಒಬ್ಬನಾದ ತ್ವಷ್ಟವಿನ ಆವೇಶದವ ಆಗಿದ್ದ .

 

ತಾವುಭೌ ವಿರಥೌ ಕೃತ್ವಾ ವಿಚಾಪೌ ಚ ವಿವರ್ಮ್ಮಕೌ ।

ಭೀಮೋ ಜಘಾನ ತಾಂ ಸೇನಾಂ ಸವಾಜಿರಥಕುಞ್ಜರಾಮ್ ॥೧೮.೭೬॥

ಜನಮೇಜಯ ಶಿಖಂಡಿಯರ ರಥ ಬಿಲ್ಲು ಕವಚಗಳ ಮುರಿದ ಭೀಮ ,

ಆನೆ ರಥ ಕುದುರೆ ಒಳಗೊಂಡ ಆ ಸೇನೆಯ ಮಾಡಿದ ನಿರ್ನಾಮ .

 

ಅಥೈನಂ ಶರವರ್ಷೇಣ ಯುಧಾಮನ್ಯೂತ್ತಮೋಜಸೌ ।

ಅಭೀಯತುಸ್ತೌ ವಿರಥೌ ಚಕ್ರೇ ಭೀಮೋ ನಿರಾಯುಧೌ ॥೧೮.೭೭॥

ನಂತರ ಯುಧಾಮನ್ಯು ಮತ್ತು ಉತ್ತಮೋಜಸ್ರದು ಭೀಮನ ಮೇಲೆ ಯುದ್ಧ ,

ಭೀಮಸೇನ ಅವರಿಬ್ಬರನ್ನೂ ಆಯುಧಹೀನ ಮತ್ತು ರಥಹೀನರ ಮಾಡಿದ.

No comments:

Post a Comment

ಗೋ-ಕುಲ Go-Kula