Thursday 13 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 243 - 248

 ಹರೌ ತು ಪುಷ್ಕರಂ ಗತೇ ಮುನೀಶ್ವರೈಃ ಸಮರ್ಚ್ಚಿತೇ ।

ಸಮೀಯತುಶ್ಚ ತಾವುಭಾವಥಾತ್ರ ಹಂಸಡೀಭಕೌ ॥೧೭.೨೪೩॥

ಮುನಿಗಳಿಂದೊಡಗೂಡಿ ಅರ್ಚಿತನಾಗಿ ಪುಷ್ಕರಕ್ಕೆ ಬಂದ ಕೃಷ್ಣ ,

ಆ ಸಮಯಕ್ಕೆ ಹಂಸ ಡಿಭಕರದೂ ಆಯಿತು ಅಲ್ಲಿಗೆ ಆಗಮನ .

 

ಸ ಬ್ರಹ್ಮದತ್ತನಾಮಕೋsತ್ರ ತತ್ಪಿತಾsಪ್ಯುಪಾಯಯೌ ।

ಸಮಾಗತೌ ಚ ಭೂತಕೌ ಶಿವಸ್ಯ ಯೌ ಪುರಸ್ಸರೌ ॥೧೭.೨೪೪॥

ಪುಷ್ಕರಕ್ಕೆ ಬಂದ ಹಂಸ ಡಿಭಕರ ತಂದೆ (ಸಾಲ್ವ)ಬ್ರಹ್ಮದತ್ತ,

ಬಂದವು ಶಿವನ ಪರಿವಾರವಾಗಿದ್ದ ಆ ಎರಡೂ ಭೂತ .

 

ವಿಚಕ್ರನಾಮಕೋsಸುರಃ ಪುರಾ  ವಿರಿಞ್ಚತೋ  ವರಮ್ ।

ಅವದ್ಧ್ಯತಾಮಜೇಯತಾಮವಾಪ್ಯ ಬಾಧತೇ ಸುರಾನ್ ॥೧೭.೨೪೫॥

ಸ ಚಾಭವತ್ ತಯೋಃ ಸಖಾ ಸಹಾಯಕಾಮ್ಯಯಾssಗಮತ್ ।

ಹಿಡಿಮ್ಬರಾಕ್ಷಸೋsಪಿ ಯಃ ಪುರಾssಪ ಶಙ್ಕರಾದ್ ವರಮ್ ॥೧೭.೨೪೬॥

ನ ಜೀಯಸೇ ನ ವದ್ಧ್ಯಸೇ ಕುತಶ್ಚನೇತಿ ತೋಷಿತಾತ್ ।

ಸ ಚೈತಯೋಃ ಸಖಾsಭವತ್ ಸಮಾಜಗಾಮ ತತ್ರ ಚ ॥೧೭.೨೪೭॥

ಬ್ರಹ್ಮನಿಂದ ಅವಧ್ಯತ್ವ ಅಜೇಯತ್ವ ಪಡೆದ ವಿಚಕ್ರ ಅಸುರನಿಂದ ದೇವತಾಪೀಡನೆ,

ಸೆಳೆದಿತ್ತವನಲ್ಲಿಗೆ ತನ್ನ ಗೆಳೆಯರಿಗೆ (ಹಂಸ ಡಿಭಕ) ನೆರವು ನೀಡಬೇಕೆಂಬ ಯೋಚನೆ .

ಸಾವು ಸೋಲಿಲ್ಲದ ರುದ್ರವರ ಪಡೆದ ಹಿಡಿಂಬನೂ ಬಂದ,

ಅವನನ್ನಲ್ಲಿಗೆ ಎಳೆದು ತಂದಿತ್ತು ಅವರ ಗೆಳೆತನದ ಸಂಬಂಧ .

 

ಅಕ್ಷೋಹಿಣೀದಶಾತ್ಮಕಂ ಬಲಂ ತಯೋರ್ಬಭೂವ ಹ ।

ವಿಚಕ್ರಗಂ ಷಡಾತ್ಮಕಂ ತಥೈಕಮೇವ ರಾಕ್ಷಸಮ್ ॥೧೭.೨೪೮॥

ಹಂಸ ಡಿಭಕರ ಹತ್ತು ಅಕ್ಷೋಹಿಣೀ ಸೇನೆ ,

ಜೊತೆಗೆ ವಿಚಕ್ರನ ಆರು ಅಕ್ಷೋಹಿಣೀ ಸೇನೆ ,

ಹಿಡಿಂಬನ ಒಂದಕ್ಷೋಹಿಣೀ ಆಯಿತು ಜಮಾವಣೆ.

No comments:

Post a Comment

ಗೋ-ಕುಲ Go-Kula