Thursday 6 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 187 - 191

ಅನಙ್ಗತಾಮುಪಾಗತೇ ಪುರಾ ಹರೇಣ ಸಾsಙ್ಗಜೇ।

ವಶಂ ವಿರಿಞ್ಚಶಾಪತೋ ಜಗಾಮ ಶಮ್ಬರಸ್ಯ ಹಿ ॥೧೭.೧೮೭॥

ಹಿಂದೆ ರುದ್ರದೇವರಿಂದ ಮನ್ಮಥ ಸುಟ್ಟು ಆದಾಗ ಅನಂಗ,

ಬ್ರಹ್ಮಶಾಪದಿಂದ ರತಿ ಶಂಬರಾಸುರನ ವಶವಾಗಿದ್ದಳು ಆಗ .

(ಬ್ರಹ್ಮದೇವರ ಶಾಪಕ್ಕೆ ಕಾರಣವನ್ನು ಹೇಳುತ್ತಾರೆ: )

 

ಪುರಾ ಹಿ ಪಞ್ಚಭರ್ತ್ತೃಕಾಂ ನಿಶಮ್ಯ ಕಞ್ಜಜೋದಿತಾಮ್ ।

ಜಹಾಸ ಪಾರ್ಶತಾತ್ಮಜಾಂ ಶಶಾಪ ತಾಂ ತತಸ್ತ್ವಜಃ ॥೧೭.೧೮೮॥

ಒಮ್ಮೆ ಬ್ರಹ್ಮರಿಂದ ಹೇಳಲ್ಪಟ್ಟ ದ್ರೌಪದಿ ಪಂಚಪತಿ ಹೊಂದಿದ ಸಂಗತಿ ,

ಅಪಹಾಸ್ಯ ಮಾಡಿ ಬ್ರಹ್ಮಶಾಪಕ್ಕೆ ಗುರಿಯಾಗಿದ್ದಳು ಮನ್ಮಥಸತಿ ರತಿ .

 

ಭವಾಸುರೇಣ ದೂಷಿತೇತಿ ಸಾ ತತೋ ಹಿ ಮಾಯಯಾ ।

ವಿಧಾಯ ತಾಂ ನಿಜಾಂ ತನುಂ ಜಗಾಮ ಚಾನ್ಯಯಾsಸುರಮ್ ॥೧೭.೧೮೯॥

 ಒಬ್ಬ ಅಸುರನಿಂದ ನಿನ್ನ ಮೈ ಮಲಿನವಾಗಲಿ ಎಂದು ಬ್ರಹ್ಮದೇವರ ಶಾಪ ,

ಮಾಯೆಯಿಂದ ನಿಜರೂಪ ಮರೆಮಾಡಿ ಬೇರೆ ರೂಪದಿ ಅಸುರನಲ್ಲಿದ್ದಳು ಪಾಪ .

 

ಗೃಹೇsಪಿಸಾssಸುರೇ ಸ್ಥಿತಾ ನಿಜಸ್ವರೂಪತೋsಸುರಮ್ ।

ನ ಗಚ್ಛತಿ ಸ್ಮ ಸಾ ಪತಿಂ ನಿಜಂ ಸಮೀಕ್ಷ್ಯ ಹರ್ಷಿತಾ ॥೧೭.೧೯೦॥

ಶಂಬರನ ಅರಮನೆಯಲ್ಲಿದ್ದರೂ ಮನ್ಮಥ ಸತಿ ,

ತನ್ನ ನಿಜರೂಪದಿಂದ ಅಸುರನ ಕೂಡಲಿಲ್ಲ ರತಿ .

ರತಿಗೆ ಮಗುವಾಗಿ ಗಂಡನ ಕಂಡಾಯ್ತು ಸಂತಸದ ಸ್ಥಿತಿ.

 

ರಸಾಯನೈಃ ಕುಮಾರಕಂ ವ್ಯವರ್ದ್ಧಯದ್ ರತಿಃ ಪತಿಮ್ ।

ಸ ಪೂರ್ಣ್ಣಯೌವನೋsಭವಚ್ಚತುರ್ಭಿರೇವ ವತ್ಸರೈಃ ॥೧೭.೧೯೧॥

ರತಿ ತನ್ನ ಪುಟ್ಟರೂಪದ ಗಂಡನ ಬೆಳೆಸಿದಳು ಕೊಟ್ಟು ವಿಶೇಷ ರಸಾಯನ ,

ಅವನು ನಾಕೇ ವರ್ಷದಲ್ಲಿ ಯುವಕನಾದ ಹೊಂದಿ ಪೂರ್ಣ ಯೌವನ

No comments:

Post a Comment

ಗೋ-ಕುಲ Go-Kula