ಗದಸ್ತು ಸಾಲ್ವಭೂಭೃತಾ ವಯೋಗತೇನ ಯೋಧಯನ್ ।
ವಿವಾಹನಂ ನಿರಾಯುಧಂ
ಚಕಾರ ಸೋsಪ್ಯಪಾದ್ರವತ್ ॥೧೭.೨೬೬
॥
ಗದ ಮುದುಕ ಸಾಲ್ವನೊಂದಿಗೆ
ಕಾದಾಡಿದ ,
ಅವನ ಮಾಡಿದ ರಥಹೀನ ಮತ್ತು
ನಿರಾಯುಧ ,
ಸಾಲ್ವನಾಗ ಯುದ್ಧಭೂಮಿಯಿಂದ
ಓಡಿಹೋದ .
ಸುತೇನ ತಸ್ಯ ಕನ್ಯಸಾ
ಯುಯೋಧ ಸಾತ್ಯಕೀ ರಥೀ ।
ವರಾಸ್ತ್ರಶಸ್ತ್ರಯೋಧಿನೌ
ವಿಜಹ್ರತುಶ್ಚ ತಾವುಭೌ ॥೧೭.೨೬೭ ॥
ಡಿಭಕನೊಡನೆ ರಥಿಕನಾದ
ಸಾತ್ಯಕಿಯ ಹೋರಾಟ ,
ಉತ್ತಮ ಅಸ್ತ್ರ ಶಸ್ತ್ರಗಳಿಂದ
ಅವರಿಬ್ಬರ ಕಾದಾಟ .
ಚಿರಂ ಪ್ರಯುದ್ಧ್ಯ
ಸಾತ್ಯಕಿಃ ಸ ಹಂಸಕನ್ಯಸಾ ಬಲೀ ।
ಶತಂ ಸಪಞ್ಚಕಮ್ ರಣೇ ಚಕರ್ತ್ತ ತಸ್ಯ ಧನ್ವನಾಮ್ ॥೧೭.೨೬೮ ॥
ಬಲಿಷ್ಠನಾದ ಸಾತ್ಯಕಿ ಹಂಸನ
ತಮ್ಮ ಡಿಭಕನೊಂದಿಗೆ ಮಾಡಿದ ಯುದ್ಧ ,
ಬಹುಕಾಲ ಯುದ್ಧಾನಂತರ ಅವನ
ನೂರಾಐದು ಬಿಲ್ಲುಗಳ ಕತ್ತರಿಸಿದ .
ಸ ಖಢ್ಗಚರ್ಮ್ಮಭೃದ್ ರಣೇsಭ್ಯಯಾತ್ ಸುತಾತ್ಮಜಂ ಶಿನೇಃ ।
ಸ ಚೈನಮಭ್ಯಯಾತ್ ತಥಾ
ವರಾಸಿಚರ್ಮ್ಮಭೃದ್ ವಿಭೀಃ ॥೧೭.೨೬೯ ॥
ಡಿಭಕ ಕತ್ತಿ
ಗುರಾಣಿಗಳೊಂದಿಗೆ ಸಾತ್ಯಕಿಯ ಎದುರಿಸಿದ ,
ಸಾತ್ಯಕಿಯೂ ಅಂಜದೆ ಖಡ್ಗ
ಢಾಲುಗಳಿಂದ ಎದುರಾದ .
ದ್ವಿಷೋಡಶಪ್ರಭೇದಕಂ
ವರಾಸಿಯುದ್ಧಮಶ್ರಮೌ ।
ಪ್ರದರ್ಶ್ಯ
ನಿರ್ವಿಶೇಷಕಾವುಭೌ ವ್ಯವಸ್ಥಿತೌ ಚಿರಮ್ ॥೧೭.೨೭೦ ॥
ನಡೆಯಿತು ಮೂವತ್ತೆರಡು ರೀತಿಯ
ಕತ್ತಿ ಕಾಳಗ ,
ಯಾರೂ ಸೋಲದೇ ಹಾಗೆಯೇ
ನಿಂತುಬಿಟ್ಟರಾಗ .
ಪರಸ್ಪರಾನ್ತರೈಷಿಣೌ
ನಚಾನ್ತರಂ ವ್ಯಪಶ್ಯತಾಮ್ ।
ತತೋ ವಿಹಾಯ ಸಙ್ಗರಂ ಗತೌ
ನಿರರ್ತ್ಥಕಂ ತ್ವಿತಿ ॥೧೭.೨೭೧॥
ಪರಸ್ಪರ ಅವಕಾಶ ಬಯಸುತ್ತಾ
ಕಾದಿದರಿಬ್ಬರು ,
ಇಬ್ಬರೂ ಯಾವ ಅವಕಾಶವನ್ನು
ಕಾಣದಾದರು ,
No comments:
Post a Comment
ಗೋ-ಕುಲ Go-Kula