ಜನಾರ್ದ್ದನಶ್ಚ
ರುಗ್ಮಿಣೀಕರಂ ಶುಭೇ ದಿನೇSಗ್ರಹೀತ್
।
ಮಹೋತ್ಸವಸ್ತಧಾSಭವತ್ ಕುಶಸ್ಥಲೀನಿವಾಸಿನಾಮ್ ॥೧೭.೧೭೬॥
ಶ್ರೀಕೃಷ್ಣ ಕೂಡಾ
ಶುಭದಿನದಲ್ಲಿ ಮಾಡಿದ ರುಗ್ಮಿಣಿಯ ಪಾಣಿಗ್ರಹಣ ,
ಸಂಭ್ರಮದ ದೊಡ್ಡ ಉತ್ಸವಾಚರಣೆ ನಡೆಸಿತು ಆಗ ಇಡೀ ದ್ವಾರಕಾಪಟ್ಟಣ .
ಚತುರ್ಮ್ಮುಖೇಶಪೂರ್ವಕಾಃ
ಸುರಾ ವಿಯತ್ಯವಸ್ಥಿತಾಃ ।
ಪ್ರತುಷ್ಟುವುರ್ಜ್ಜನಾರ್ದ್ದನಂ
ರಮಾಸಮೇತಮವ್ಯಯಮ್ ॥೧೭.೧೭೭॥
ಬ್ರಹ್ಮ ರುದ್ರ ಮೊದಲಾದ ದೇವತೆಗಳೆಲ್ಲಾ ಆಕಾಶದಿ ನಿಂತು ,
ಸ್ತೋತ್ರ ಮಾಡಿದರು ಲಕ್ಷ್ಮೀಸಮೇತನಾದ ಭಗವಂತನ ಕುರಿತು .
ಮುನೀನ್ದ್ರದೇವಗಾಯನಾದಯೋSಪಿ ಯಾದವೈಃ ಸಹ ।
ವಿಚೇರುರುತ್ತಮೋತ್ಸವೇ
ರಮಾರಮೇಶಯೋಗಿನಿ ॥೧೭.೧೭೮॥
ಮುನಿಶ್ರೇಷ್ಠರು, ಗಂಧರ್ವರು
ಮೊದಲಾದವರು,
ಯಾದವರ ಕೂಡಿ ರುಗ್ಮಿಣೀಕೃಷ್ಣರ ವಿವಾಹದಿ ನಲಿದರು .
ಸುರಾಂಶಕಾಶ್ಚ ಯೇ ನೃಪಾಃ
ಸಮಾಹುತಾ ಮಹೋತ್ಸವೇ ।
ಸಪಾಣ್ಡವಾಃ
ಸಮಾಯಯುರ್ಹರಿಂ ರಮಾಸಮಾಯುತಮ್ ॥೧೭.೧೭೯॥
ದೇವಾಂಶಸಂಭೂತರಾದ ಅನೇಕ ರಾಜರು ,
ಪಾಂಡವರನ್ನು ಸೇರಿ ಆವ್ಹಾನಿಸಲ್ಪಟ್ಟವರು ,
ಕೃಷ್ಣನ ವಿವಾಹಮಹೋತ್ಸವಕ್ಕೆ ಸಾರಿ ಬಂದರು .
ಸಮಸ್ತಲೋಕಸುನ್ದರೌ ಯುತೌ
ರಮಾರಮೇಶ್ವರೌ ।
ಸಮೀಕ್ಷ್ಯಮೋದಮಾಯಯುಃ
ಸಮಸ್ತಲೋಕಸಜ್ಜನಾಃ ॥೧೭.೧೮೦॥
ಸಮಸ್ತಲೋಕಕ್ಕೆಲ್ಲಾ ಅತ್ಯಂತ ಸುಂದರವಾದ ರುಗ್ಮಿಣೀ ಕೃಷ್ಣರ ಜೋಡಿ ,
No comments:
Post a Comment
ಗೋ-ಕುಲ Go-Kula