Friday 7 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 192 - 201

ಪತಿಂ ಸುಪೂರ್ಣ್ಣಯೌವನಂ ನಿರೀಕ್ಷ್ಯತಾಂ ವಿಷಜ್ಜತೀಮ್ ।

ಉವಾಚ ಕಾರ್ಷ್ಣ್ಣಿರಮ್ಬ ತೇ ಕುಚೇಷ್ಟಿತಂ ಕಥಂ ನ್ವಿತಿ ॥೧೭.೧೯೨॥

ಪೂರ್ಣ ಯೌವನಭರಿತನಾದ ಮನ್ಮಥನ ಕಂಡು ರತಿ ,

ಪತಿಯೆದುರು ಸಹಜವಾಗೇ ನಾಚಿಕೊಳ್ಳುತ್ತಿದ್ದಳು ಸತಿ,

ಪ್ರದ್ಯುಮ್ನ ಕೇಳಿದ-ಅಮ್ಮಾ ಇದೇನು ಕುಚೇಷ್ಟೆಯ ರೀತಿ.

 

ಜಗಾದ ಸಾsಖಿಲಂ ಪತೌ ತದಸ್ಯ ಜನ್ಮ ಚಾsಗತಿಮ್ ।

ತತೋsಗ್ರಹೀತ್ ಸ ತಾಂ ಪ್ರಿಯಾಂ ರತಿಂ ರಮಾಪತೇಃ ಸುತಃ ॥೧೭.೧೯೩॥

ಆಗ ರತಿ ಪ್ರದ್ಯುಮ್ನನಿಗೆ ಹೇಳುತ್ತಾಳೆ ಅವನ ಜನ್ಮವೃತ್ತಾಂತ ,

ನಂತರ ಹರಿಪುತ್ರ ಪ್ರದ್ಯುಮ್ನ ಒಪ್ಪಿಕೊಳ್ಳುತ್ತಾನೆ ತನ್ನ ಪ್ರಿಯೆಯಂತ .

 

ದದೌ ಚ ಮನ್ತ್ರಮುತ್ತಮಂ ಸಮಸ್ತಮಾಯಿನಾಶಕಮ್ ।

ಭೃಗೂತ್ಥರಾಮದೈವತಂ ರತಿರ್ಹರೇಃ ಸುತಾಯ ಸಾ ॥೧೭.೧೯೪॥

ರತಿಯಾಗ ಮಾಡುತ್ತಾಳೆ ಮಾಯಾವಿಗಳ ನಾಶಗೊಳಿಸುವ ಶಕ್ತಿಯ ತಂತ್ರ ,

ಕೊಡುತ್ತಾಳೆ ಪ್ರದ್ಯುಮ್ನಗೆ ಪರಶುರಾಮ ದೇವತೆಯಾದ ಉತ್ಕೃಷ್ಟವಾದ ಮಂತ್ರ .

 

ತತಃ ಸ್ವದಾರಧರ್ಷಕಂ ಸಮಾಹ್ವಯದ್ ಯುಧೇsಙ್ಗಜಃ ।

ಸ ಶಮ್ಬರಂ ಸ ಚೈತ್ಯ ತಂ ಯುಯೋಧ ಶಕ್ತಿತೋ ಬಲೀ ॥೧೭.೧೯೫ll

ಪ್ರದ್ಯುಮ್ನ ತನ್ನ ಹೆಂಡತಿಯ ಬಲಾತ್ಕರಿಸಿದ ಶಂಬರಗೀಯುತ್ತಾನೆ ಯುದ್ಧಾವ್ಹಾನ ,

ಶಕ್ತಿಯಿಂದ ಬಲಿಷ್ಟನಾಗಿ ಬಂದ ಅವನೊಡನೆ ನಡೆಸುತ್ತಾನೆ ಭೀಕರ ಕದನ .

 

ಸ ಚರ್ಮ್ಮಖಡ್ಗಧಾರಿಣಂ ವರಾಸ್ತ್ರಶಸ್ತ್ರಪಾದಪೈಃ ।

ಯದಾ ನ ಯೋದ್ಧುಮಾಶಕದ್ಧರೇಃ ಸುತಂ ನ ದೃಶ್ಯತೇ ॥೧೭.೧೯೬॥

ಪ್ರದ್ಯುಮ್ನ ಖಡ್ಗ ಚರ್ಮಧಾರಿಯಾಗಿ ಅಸ್ತ್ರ ಶಸ್ತ್ರಯುಕ್ತನಾಗಿ ಎದುರಾದ ,

ಆಗ ದೇವಪುತ್ರನೊಂದಿಗೆ ಶಂಬರ ಯುದ್ಧ ಮಾಡಲು ಅಸಮರ್ಥನಾದ ,

ಆಗ ಶಂಬರ ಮಾಯಾವಿದ್ಯೆಯ ಬಳಸಿಕೊಂಡು ತಾನು ಅದೃಶ್ಯನಾದ .

 

ಸಹಸ್ರಮಾಯಮುಲ್ಬಣಂ ತ್ವದೃಶ್ಯಮಮ್ಬರಾದ್ ಗಿರೀನ್ ।

ಸೃಜನ್ತಮೇತ್ಯ ವಿದ್ಯಯಾ ಜಘಾನ ಕೃಷ್ಣನನ್ದನಃ ॥೧೭.೧೯೭॥

ಕುಟಿಲವಿದ್ಯೆಗಳಿಂದ ಮಾಯೆ ಮಾಡಿ ಬಂಡೆಗಳನುರುಳಿಸಿದ ಶಂಬರಾಸುರ ,

ರತಿ ಕೊಟ್ಟ ದೈವೀವಿದ್ಯೆಯಿಂದ ಪ್ರದ್ಯುಮ್ನ ಮಾಡಿದ ಶಂಬರನ ಸಂಹಾರ .

 

ಸ ವಿದ್ಯಯಾ ವಿನಾಶಿತೋರುಮಾಯ ಆಶು ಶಮ್ಬರಃ ।

ನಿಕೃತ್ತಕನ್ಧರೋsಪತದ್ ವರಾಸಿನಾsಮುನಾ ಕ್ಷಣಾತ್ ॥೧೭.೧೯೮॥

 ಶಂಬರ ತನ್ನ ಕುಟಿಲ ಮಾಯಾವಿದ್ಯೆಗಳನ್ನೆಲ್ಲಾ ಕಳೆದುಕೊಂಡವನಾದ ,

ಪ್ರದ್ಯುಮ್ನನ ಕತ್ತಿಯಿಂದ ಆಯಿತು ಶಂಬರನೆಂಬ ಅಸುರನ ಶಿರಚ್ಛೇದ .

 

ನಿಹತ್ಯ ತಂ ಹರೇಃ ಸುತಃ ತಯೈವ ವಿದ್ಯಯಾsಮ್ಬರಮ್ ।

ಸಮಾಸ್ಥಿತಃ ಸ್ವಭಾರ್ಯ್ಯಯಾ ಸಮಂ ಕುಷಸ್ಥಲೀಂ ಯಯೌ ॥೧೭.೧೯೯॥

ಯಾವ ರೀತಿಯ ವಿದ್ಯೆಯಿಂದ ಶಂಬರನ ಕೊಂದ ಪ್ರದ್ಯುಮ್ನನು,

ಅದೇ ವಿದ್ಯೆಯಿಂದ ಸಪತ್ನೀಕನಾಗಿ ಮೇಲೇರಿ ದ್ವಾರಕೆ ತಲುಪಿದನು .

 

ಸಮಸ್ತವೇದಿನೋರ್ಮ್ಮುನಿರ್ನ್ನರಾನ್ ವಿಡಮ್ಬಮಾನಯೋಃ ।

ರಮಾರಮೇಶಯೋಃ ಸುತಂ ಜಗಾದ ತಂ ಸ್ಮ ನಾರದಃ ॥೧೭.೨೦೦॥

ಸರ್ವಜ್ಞರಾದ ಜಗದ ಮಾತಾಪಿತರಿಂದ ಸಾಮಾನ್ಯ ನರರ ಅನುಕರಣೆ ,

ನಾರದರು ಹೇಳುತ್ತಾರೆ ರಮಾರಮೇಶರಿಗೆ ಈ ಪ್ರದ್ಯುಮ್ನ ನಿಮ್ಮ ಮಗನೇ .

 

ಸ ರುಗ್ಮಿಣೀಜನಾರ್ದ್ದನಾದಿಭಿಃ ಸರಾಮಯಾದವೈಃ ।

ಪಿತಾಮಹೇನ ಚಾsದರಾತ್ ಸುಲಾಳಿತೋsವಸತ್ ಸುಖಮ್ ॥೧೭.೨೦೧॥

ಬಲರಾಮ , ಯಾದವರು , ರುಗ್ಮಿಣೀಕೃಷ್ಣ ಮುಂತಾದವರ ಜೊತೆ ,

ತಾತ ವಸುದೇವನಿಂದಲೂ ಪ್ರೀತಿಸಲ್ಪಟ್ಟು ವಾಸ ಮಾಡಿದನಂತೆ .

No comments:

Post a Comment

ಗೋ-ಕುಲ Go-Kula