ತಯಾ ರಮನ್ ಜನಾರ್ದ್ದನೋ
ವಿಯೋಗಶೂನ್ಯಯಾ ಸದಾ।
ಅಧತ್ತ ಪುತ್ರಮುತ್ತಮಂ
ಮನೋಭವಂ ಪುರಾತನಮ್ ॥೧೭.೧೮೧॥
ವಿಯೋಗವಿರದ ರುಗ್ಮಿಣಿಯೊಂದಿಗೆ ಶ್ರೀಕೃಷ್ಣನ ಕ್ರೀಡಾ ವಿನೋದ ,
ಅತ್ಯಂತ ಹಿಂದಿನವನಾದ, ಮನದಿಂದ ಹುಟ್ಟಿದ ಉತ್ಕೃಷ್ಟ ಮಗನಾದ ,
ಕಾಮನನ್ನು (ಮನ್ಮಥ) ಹೆಂಡತಿ ರುಗ್ಮಿಣಿಯ ಗರ್ಭದಲ್ಲಿ ಇಟ್ಟವನಾದ .
ಚತುಸ್ತನೋರ್ಹರೇಃ ಪ್ರಭೋಸ್ತೃತೀಯರೂಪಸಂಯುತಃ
।
ತತಸ್ತದಾಹ್ವಯೋSಭವತ್ ಸ ರುಗ್ಮಿಣೀಸುತೋ ಬಲೀ ॥೧೭.೧೮೨॥
ಬಲಿಷ್ಠನಾದ ಆ ರುಗ್ಮಿಣೀಪುತ್ರ ಭಗವಂತನ ನಾಕು ರೂಪಗಳಲ್ಲಿ ಮೂರನೇ ರೂಪ
,
ಪ್ರದ್ಯುಮ್ನ ರೂಪದಿಂದ ಪ್ರವಿಷ್ಟನಾಗಿ ಪ್ರದ್ಯುಮ್ನನೆಂದೇ ಕರೆಸಿಕೊಂಡ
ಆ ಭೂಪ .
ಪುರೈವ ಮೃತ್ಯವೇsವದತ್ ತಮೇವ ಶಮ್ಬರಸ್ಯ ಹ ।
ಪ್ರಜಾತಮಬ್ಜಜಾಙ್ಕಜಸ್ತವಾನ್ತಕೋsಯಮಿತ್ಯಪಿ ॥೧೭.೧೮೩॥
ಬ್ರಹ್ಮನ ತೊಡೆಯಿಂದ ಹುಟ್ಟಿದ ಮುನಿ ನಾರದ ,
ಶಂಬರನ ಕೊಲ್ಲುವವ ಹುಟ್ಟಲಿದ್ದಾನೆಂದು ಹೇಳಿದ್ದ ,
ಪ್ರದ್ಯುಮ್ನ ಹುಟ್ಟಿದ ಮೇಲೆ ಅವನೇ ನಿನ್ನ ಮೃತ್ಯುವೆಂದ.
ಸ ಮಾಯಯಾ ಹರೇಃ ಸುತಂ
ಪ್ರಗೃಹ್ಯ ಸೂತಿಕಾಗೃಹಾತ್ ।
ಅವಾಕ್ಷಿಪನ್ಮಹೋದಧಾವುಪೇಕ್ಷಿತೋsರಿಪಾಣಿನಾ ॥೧೭.೧೮೪॥
ತಮಗ್ರಸಜ್ಜಲೇಚರಃ ಸ
ದಾಶಹಸ್ತಮಾಗತಃ ।
ಕುಮಾರಮಸ್ಯ ತೂದರೇ
ನಿರೀಕ್ಷ್ಯ ಶಮ್ಬರೇ ದದುಃ ॥೧೭.೧೮೫॥
ಭಗವಂತನಿಂದ ಉಪೇಕ್ಷಿತನಾಗಿ ಶಂಬರ ತನ್ನ ಕೂಟ ವಿದ್ಯೆಯಿಂದ ,
ಪ್ರಸವಗೃಹದಿಂದ ಪ್ರದ್ಯುಮ್ನನ ಅಪಹರಿಸಿ ಸಮುದ್ರದ ಒಳಗೆ ಎಸೆದ .
ಹಾಗೆ ಎಸೆದ ಮಗುವನ್ನು ನುಂಗಿತೊಂದು ಮೀನು ,
ಮೀನು ಹಿಡಿವ ಬೆಸ್ತನೊಬ್ಬನ ಕೈಸೇರಿತು ತಾನು ,
ಮೀನಲ್ಲಿ ಮಗುವ ಕಂಡು ಶಂಬರಗೇ ಕೊಟ್ಟ ಬೆಸ್ತರವನು.
ವಿಪಾಟ್ಯ ಮತ್ಸ್ಯಕೋದರಂ
ಸ ಶಮ್ಬರಃ ಕುಮಾರಕಮ್ ।
ನ್ಯವೇದಯನ್ಮನೋಭವಪ್ರಿಯಾಕರೇ
ಸುರೂಪಿಣಮ್ ॥೧೭.೧೮೬॥
ಮೀನಿನ ಹೊಟ್ಟೆಯ
ಸೀಳಿದ ಶಂಬರಾಸುರ ,
ಕಂಡ ಬಾಲಕ ಪ್ರದ್ಯುಮ್ನನಿದ್ದ ಬಲುಸುಂದರ ,
ಮಾಡಿದ ಮಗುವನ್ನ ಪ್ರದ್ಯುಮ್ನ ಸತಿಗೆ ಹಸ್ತಾಂತರ .
No comments:
Post a Comment
ಗೋ-ಕುಲ Go-Kula