Tuesday, 18 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 289 - 298

ಹರಿಸ್ತು ಹಂಸಮುಲ್ಬಣೈಃ ಶರೈಃ ಸಮರ್ದ್ದಯನ್ ಬಲಮ್ ।

ಜಘಾನ ತಸ್ಯ ಸರ್ವಶೋ ನ ಕಶ್ಚಿದತ್ರ ಶೇಷಿತಃ ॥ ೧೭.೨೮೯ ॥

ಶ್ರೀಹರಿ ಭಯಂಕರ ಬಾಣಗಳಿಂದ ಹಂಸನ ಪೀಡಿಸಿದ ,

ಯಾರೂ ಉಳಿಯದಂತೆ ಅವನ ಸೈನ್ಯವ ನಾಶ ಮಾಡಿದ .

 

ಸ ಏಕ ಏವ ಕೇಶವಂ ಮಹಾಸ್ತ್ರಮುಕ್ ಸಸಾರ ಹ ।

ನಿವಾರ್ಯ್ಯ ತಾನಿ ಸರ್ವಶೋ ಹರಿರ್ನ್ನಿಜಾಸ್ತ್ರಮಾದದೇ ॥೧೭.೨೯೦॥

ಸೈನ್ಯ ಕಳೆದುಕೊಂಡ ಹಂಸ ಕೇಶವನೆದುರಾಗಿ ಬಂದ ಬಿಡುತ್ತಾ ಮಹಾಸ್ತ್ರ ,

ಕೇಶವ ಅವನ್ನೆಲ್ಲ ಅಸ್ತ್ರಗಳ ತಡೆದು ಎತ್ತಿಕೊಂಡ ಆಗ  ನಾರಾಯಣಾಸ್ತ್ರ

 

ಸ ವೈಷ್ಣವಾಸ್ತ್ರಮುದ್ಯತಂ ನಿರೀಕ್ಷ್ಯ ಯಾನತೋ ಮಹೀಮ್ ।

ಗತಃ ಪರಾದ್ರವದ್ ಭಯಾತ್ ಪಪಾತ ಯಾಮುನೋದಕೇ ॥೧೭.೨೯೧॥

ನಾರಾಯಣಾಸ್ತ್ರವ ಎತ್ತಿಕೊಂಡ ಕೃಷ್ಣನ ಹಂಸ ನೋಡಿದ ,

ರಥದಿಂದ ಹಾರಿ ಭಯದಿ ಓಡಿ ಯಮುನಾ ನೀರಿಗೆ ಬಿದ್ದ .

 

ವರಾಸ್ತ್ರಪಾಣಿರೀಶ್ವರಃ ಪದಾsಹನಚ್ಛಿರಸ್ಯಮುಮ್ ।

ಸ ಮೂರ್ಛಿತೋ ಮುಖೇsಪತನ್ಮಹಾಭುಜಙ್ಗಮಸ್ಯ ಹ ॥೧೭.೨೯೨ ॥

ಅಸ್ತ್ರಧಾರಿಯಾದ ಶ್ರೀಕೃಷ್ಣ ಹಂಸನ ತಲೆಗೆ ತನ್ನ ಕಾಲಿಂದ ಒದ್ದ ,

ಮೂರ್ಛಿತ ಹಂಸ ದೊಡ್ಡದೊಂದು ಸರ್ಪದ ಬಾಯಿಗೆ ಬಿದ್ದ .

 

ಸ ಧಾರ್ತ್ತರಾಷ್ಟ್ರಕೋದರೇ ಯಥಾ ತಮೋsನ್ಧಮೇಯಿವಾನ್ ।

ತಥಾ ಸುದುಃಖಸಂಯುತೋ ವಸನ್ ಮನೋಃ ಪರಂ ಮ್ರಿಯೇತ್ ॥೧೭.೨೯೩॥

ಅವನು ಸೇರಿದ ಧಾರ್ತರಾಷ್ಟ್ರಕ ಮಹಾನಾಗದ  ಹೊಟ್ಟೆಯ ಒಳಗೆ ,

ಅಲ್ಲಿಯೇ ಅನುಭವಿಸುತ್ತಿದ್ದು ಅಂಧಂತಮಸ್ಸಿನ ಯಾತನೆಯ  ಬೇಗೆ .

 

ತತೋsನ್ಧಮೇವ ತತ್ ತಮೋ ಹರೇರ್ದ್ದ್ವಿಡೇತಿ ನಿಶ್ಚಯಾತ್ ।

ತದಾsಸ್ಯ  ಚಾನುಜೋsಗ್ರಜಂ ವಿಮಾರ್ಗ್ಗಯನ್ ಜಲೇsಪತತ್ ॥೧೭.೨೯೪॥

ವಿಹಾಯ ರೋಹಿಣೀಸುತಂ ಜಲೇ ನಿಮಜ್ಜ್ಯ ಮಾರ್ಗ್ಗಯನ್ ।

ಅಪಶ್ಯಮಾನ ಆತ್ಮನೋ ವ್ಯಪಾಟಯಚ್ಚ ಕಾಕುದಮ್ ॥೧೭.೨೯೫॥

ಪರಮಾತ್ಮನ ಶತ್ರುವಾದವನು ಅಂಧಂತಮಸ್ಸು ಸೇರುವುದು ನಿಶ್ಚಿತ ,

ಹಂಸ ಬಿದ್ದಾಗ ಡಿಭಕನೂ ನೀರಿಗ್ಹಾರಿದ ರಾಮನೊಂದಿಗೆ ಕಾದುತ್ತಿದ್ದಾತ .

ನೀರಲ್ಲಿ ಮಾಡಿದನವ ಅಣ್ಣ ಹಂಸನ ಅನ್ವೇಷಣೆ ,

ಅವನ ಕಾಣದೇ ಕಿತ್ತುಕೊಂಡ ತನ್ನ ಕಿರುನಾಲಗೆಯನ್ನೇ .

 

ವಿಹಾಯ ದೇಹಮುಲ್ಬಣಂ ತಮೋsವತಾರ್ಯ್ಯ ಚಾಗ್ರಜಮ್ ।

ಪ್ರತೀಕ್ಷಮಾಣ ಉಲ್ಬಣಂ ಸಮತ್ತಿ ತತ್ ಸುಖೇತರಮ್ ॥೧೭.೨೯೬॥

ಡಿಭಕ ಸೇರುತ್ತಾನೆ ಅಂಧಂತಮಸ್ಸು ಮಾಡಿಕೊಂಡು ದೇಹತ್ಯಾಗ ,

ಅಣ್ಣನ ನಿರೀಕ್ಷಿಸುತ್ತ ಅನುಭವಿಸುತ್ತಾನೆ ತಮಸ್ಸಿನ ದುಃಖದ ಭೋಗ.

 

ತತೋ ಹರಿರ್ಬಲೈರ್ಯ್ಯುತೋ ಬಲಾನ್ವಿತೋ ಮುನೀಶ್ವರೈಃ ।

ಸಮಂ ಕುಶಸ್ಥಲೀಂ ಯಯೌ ಸ್ತುತಃ ಕಶಙ್ಕರಾದಿಭಿಃ ॥೧೭.೨೯೭॥

ಆನಂತರ ಕೃಷ್ಣ ಯಾದವ ಸೈನ್ಯದಿಂದ ಕೂಡಿ ,

ಬಲರಾಮ ಮತ್ತು ಮುನಿಗಳಿಂದ ಒಡಗೂಡಿ ,

ಮಾಡಿಸಿಕೊಳ್ಳುತ್ತಾ ಬ್ರಹ್ಮ ರುದ್ರಾದಿಗಳಿಂದ ಸ್ತುತಿ ,

ದ್ವಾರಕಾ ಪಟ್ಟಣದತ್ತ ತೆರಳಿದ ಯದುಕುಲಪತಿ .

 

ಸ್ವಕೀಯಪಾದಪಲ್ಲವಾಶ್ರಯಂ ಜನಂ ಪ್ರಹರ್ಷಯನ್ ।

ಉವಾಸ ನಿತ್ಯಸತ್ಸುಖಾರ್ಣ್ಣವೋ ರಮಾಪತಿರ್ಗ್ಗೃಹೇ ॥೧೭.೨೯೮॥

 ತನ್ನ ಪಾದಕಮಲಾಶ್ರಿತ ಭಕ್ತರಿಗೆ ಈಯುತ್ತ ಆನಂದ ,

ದ್ವಾರಕೆಯಲ್ಲಿ ವಾಸಿಸಿದ ಸುಖಸಾಗರನಾದ ಗೋವಿಂದ .

 

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇಹಂಸಡಿಭಕವಧೋ ನಾಮ ಸಪ್ತದಶೋsಧ್ಯಾಯಃ ॥

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ ,

ಹಂಸ ಡಿಭಕ ವಧೆ ಹೆಸರಿನ ಹದಿನೇಳನೆಯ ಅಧ್ಯಾಯ ,

ಅಂತರ್ಯಾಮಿ ಶ್ರೀಕೃಷ್ಣಗೆ ಅರ್ಪಿಸಿದ ಧನ್ಯತಾ ಭಾವ .

[Contributed by Shri Govind Magal]


No comments:

Post a Comment

ಗೋ-ಕುಲ Go-Kula