Sunday, 16 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 272 - 279

 

ತತಃ ಸ ಹಂಸಸಂಯುತೋ ಜಗಾಮ ಯೋದ್ಧುಮಚ್ಯುತಮ್ ।

ಕ್ಷಣೇನ ತೌ ನಿರಾಯುಧೌ ಚಕಾರ ಕೇಶವಃ ಶರೈಃ ॥೧೭.೨೭೨॥

ಬಳಿಕ ಡಿಭಕ ಹಂಸನೊಡಗೂಡಿ ಕೃಷ್ಣನ ಮೇಲೆ ಯುದ್ಧಕೆ ಬಂದ ,

ಕೇಶವ ತನ್ನ ಬಾಣಗಳಿಂದ ಕೆಲವೇ ಕ್ಷಣದಲ್ಲವನ ಮಾಡಿದ ನಿರಾಯುಧ .

 

ಹತಂ ಚ ಸೈನ್ಯಮೇತಯೋಶ್ಚತುರ್ತ್ಥಭಾಗಶೇಷಿತಮ್ ।

ಕ್ಷಣೇನ ಕೇಶವೇನ ತದ್ಭಯಾದಪೇಯತುಶ್ಚತೌ ॥೧೭.೨೭೩ ॥

ಆಗ ಕಾಲುಭಾಗ ಮಾತ್ರ ಉಳಿಯಿತವರ ಸೈನ್ಯ ,

ಕೃಷ್ಣನಿಂದ ಸೋತ ಹಂಸ ಡಿಭಕರಿಂದ ಪಲಾಯನ .

 

ಸ ಪುಷ್ಕರೇಕ್ಷಣಸ್ತದಾ ಸುರೈರ್ನ್ನುತೋsಥ ಪುಷ್ಕರೇ ।

ಉವಾಸ ತಾಂ ನಿಶಾಂ ಪ್ರಭುಃ ಸಯಾದವೋsಮಿತಪ್ರಭಃ ॥೧೭.೨೭೪ ॥

ಕಮಲನಯನನಾದ ಕೃಷ್ಣ ದೇವತೆಗಳಿಂದ ಸ್ತೋತ್ರ ಮಾಡಲ್ಪಟ್ಟವನಾದ ,

ಯಾದವರ ಕೂಡಿ ಕಾಂತಿ ಚಿಮ್ಮುತ್ತಾ ಆರಾತ್ರಿ ಕೃಷ್ಣ ಪುಷ್ಕರದಲ್ಲೇ ಉಳಿದ .

 

ಪರೇ ದಿನೇ ಜನಾರ್ದ್ದನೋ ನೃಪಾತ್ಮಜೌ ಪ್ರವಿದ್ರುತೌ ।

ಯಮಸ್ವಸುಸ್ತಟೇ ಪ್ರಭುಃ ಸಮಾಸಸಾದ ಪೃಷ್ಠತಃ ॥೧೭.೨೭೫ ॥

ಮರುದಿನ ಕೃಷ್ಣ ಓಡುತ್ತಿರುವ ಹಂಸ ಡಿಭಕರ ನೋಡಿದ

ಯಮುನಾತೀರದಲ್ಲಿ ಅವರ ಬೆನ್ನಟ್ಟಿ ಹೋಗಿ ಹೊಂದಿದ .

 

ಸ ರೌಹಿಣೇಯಸಂಯುತಃ ಸಮನ್ವಿತಶ್ಚ ಸೇನಯಾ ।

ಸ್ವಶಿಷ್ಟಸೇನಯಾ ವೃತೌ ಪಲಾಯಿನಾವವಾರಯತ್ ॥೧೭.೨೭೬ ॥

ಅಳಿದುಳಿದ ಸೇನೆಯೊಂದಿಗೆ ಪಲಾಯನಗೈಯುತ್ತಿದ್ದರು ಹಂಸ ಡಿಭಕರು ,

ಯಾದವಸೇನೆಯೊಂದಿಗೆ ಹೋಗಿ ಅವರ ತಡೆದರು ಕೃಷ್ಣ ಬಲರಾಮರು .

 

ನಿವೃತ್ಯ ತೌ ಸ್ವಸೇನಯಾ ಶರೋತ್ತಮೈರ್ವವರ್ಷತುಃ ।

ಸುಕೋಪಿತೌ ಸಮಸ್ತಶೋ ಯದೂನವಾರ್ಯ್ಯಪೌರುಷೌ ॥೧೭.೨೭೭॥

ತಡೆಯಲಾಗದ ಪರಾಕ್ರಮದ ಆ ಹಂಸ ಡಿಭಕರು ,

ಕೋಪದಿ ಬಾಣಗಳ ಮಳೆಗರೆಯಲಾರಂಭಿಸಿದರು .

 

ಅಥಾsಸಸಾದ ಹಂಸಕೋ ಹಲಾಯುಧಂ ಮಹಾಧನುಃ ।

ಅನನ್ತರೋsಸ್ಯ ಸಾತ್ಯಕಿಂ ಗದಂ ಚ ಸರ್ವಸೈನಿಕಾನ್ ॥೧೭.೨೭೮॥

ಆನಂತರ ಮಹಾಧನುರ್ಧಾರಿ ಹಂಸ ಬಲರಾಮಗೆ ಎದುರಾದ ,

ಡಿಭಕ -ಸಾತ್ಯಕಿ , ಗದ ಮತ್ತು ಯಾದವರ ಸೈನಿಕರನ್ನು ಎದುರಿಸಿದ .


ಸ ಸಾತ್ಯಕಿಂ ನಿರಾಯುಧಂ ವಿವಾಹನಂ ವಿವರ್ಮ್ಮಕಮ್ ।

ವ್ಯಧಾದ್ ಗದಂ ಚ ತೌ ರಣಂ ವಿಹಾಯ ಹಾಪಜಗ್ಮತುಃ ॥೧೭.೨೭೯ ॥

ಅವನು ಸಾತ್ಯಕಿ ಗದನನ್ನು ಮಾಡಿದ ಆಯುಧಹೀನ,  

ಮತ್ತವರ ಮಾಡಿದ ವಾಹನರಹಿತ ಮತ್ತು ಕವಚಹೀನ,

ಸಾತ್ಯಕಿ ಗದರು ಮಾಡಿದರು ಯುದ್ಧಬಿಟ್ಟು ಪಲಾಯನ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula