Tuesday, 11 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 235 - 242

 ಪ್ರಯಾಹಿ ಸಾತ್ಯಕೇ ವಚೋ ಬ್ರವೀಹಿ ಮೇ ನೃಪಾಧಮೌ ।

ಸಮೇತ್ಯ ವಾಂ ವರಾಯುಧೈಃ ಕರಂ ದದಾನ್ಯಸಂಶಯಮ್ ॥೧೭.೨೩೫॥

ಶ್ರಿಕೃಷ್ಣ ಹೇಳುವ -ಸಾತ್ಯಕಿಯೇ ನೀನು ಈಗಿಂದೀಗಲೇ ತೆರಳು ,

ಆ ನೃಪಾಧಮರಿಗೆ ಆಯುಧಗಳಿಂದ ಕಪ್ಪ ಕೊಡುವೆನೆಂದು ಹೇಳು .

 

ಉಪೈತಮಾಶು ಸಂಯುಗಾರ್ತ್ಥಿನೌ ಚ ಪುಷ್ಕರಂ ಪ್ರತಿ । 

ಇತೀರಿತಃ ಶಿನೇಃ ಸುತೋ ಜಗಾಮ ವಿಪ್ರಸಂಯುತಃ ॥೧೭.೨೩೬॥

ಯುದ್ಧಾರ್ಥಿಗಳಾಗಿ ನೀವು ಪುಷ್ಕರಕ್ಕೆ ಬನ್ನಿ ಎಂದು ಕೃಷ್ಣ ಹೇಳಿಕಳಿಸಿದ ,

ಇದನ್ನ ಕೇಳಿದ ಶನಿ ಮೊಮ್ಮಗ ಸಾತ್ಯಕಿ ಆ ವಿಪ್ರನೊಡನೆ ತಾನು ತೆರಳಿದ .

 

ಉಪೇತ್ಯ ತೌ ಹರೇರ್ವಚೋ ಜಗಾದ ಸಾತ್ಯಕಿರ್ಬಲೀ ।

ವಿಧಾಯ ತೌ ತೃಣೋಪಮೌ ಗಿರಾ ಜಗಾಮ ಕೇಶವಮ್ ॥೧೭.೨೩೭॥

ಹಂಸ ಡಿಭಕರಲ್ಲಿಗೆ ಹೋದ ಸಾತ್ಯಕಿ ಭಗವಂತನ ಸಂದೇಶ ತಿಳಿಸಿದ ,

ತನ್ನ ಮಾತಲ್ಲೇ ಅವರನ್ನು ತೃಣಸಮಾನವಾಗಿಸಿ ಕೃಷ್ಣನಲ್ಲಿಗೆ ಬಂದ .

 

ತತಃ ಪುರೈವ ತಾವುಭೌ ದ್ವಿಜಂ ಹರಸ್ವರೂಪಿಣಮ್ ।

ಸುದುಃಖವಾಸನಾಮಕಂ ಪ್ರಚಕ್ರತುಸ್ತೃಣೋಪಮಮ್ ॥೧೭.೨೩೮॥

ಅದಕ್ಕೂ ಮೊದಲು ಹಂಸ ಡಿಭಕರು ಒಮ್ಮೆ ರುದ್ರಸ್ವರೂಪರಾದ ದುರ್ವಾಸರನ್ನ ,

ಬಲು ಅವಮಾನಿಸಿ ನಡೆಸಿಕೊಂಡಿದ್ದರು ಮಾಡುತ್ತಾ ದುರ್ವಾಸರನ್ನು ತೃಣಸಮಾನ .

  

ದಶತ್ರಿಕೈಃ ಶತೈರ್ವೃತೋ ಯತೀಶ್ವರೈಃ ಸ ಸರ್ವವಿತ್ ।

ವಿಪಾಟಿತಾತ್ಮಕೌಪಿನಾದಿಸರ್ವಮಾತ್ರಕೋsಭವತ್ ॥೧೭.೨೩೯॥

ಮೂರುಸಾವಿರ ಯತೀಶ್ವರರಿಂದ ಕೂಡಿದವರಾಗಿ ಎದುರಾಗಲು ದುರ್ವಾಸ ,

ಅವರ ಕೌಪೀನ ಹರಿದು ದಂಡ ಕಮಂಡಲಾದಿಗಳ ಮಾಡಿಬಿಟ್ಟಿದ್ದರು ನಾಶ .

[ಈರೀತಿ ಅವಮಾನಕ್ಕೊಳಪಟ್ಟರೂ ಕೂಡಾ ದುರ್ವಾಸರು ಹಂಸ-ಡಿಭಕರಿಗೆ ಏಕೆ ಶಾಪ ಕೊಡಲಿಲ್ಲಾ ಎಂದರೆ: ]

 

ವರಾತ್ ಸ್ವಸಮ್ಭವಾದಸೌ ನ ಶಾಪಶಕ್ತಿಮಾನಭೂತ್ ।

ತತಃ ಸಮಸ್ತಭಞ್ಜನೋರುಶಕ್ತಿಮಾಪ ಕೇಶವಮ್ ॥೧೭.೨೪೦॥

ಸ್ವಯಂ ರುದ್ರರೂಪದಿಂದ ತಾನೇ ಹಂಸ ಡಿಭಕರಿಗೆ ವರ ಕೊಟ್ಟಿದ್ದರು ದುರ್ವಾಸರು ,

ತಾವೇನೂ ಮಾಡಲಾಗದೇ ದುರ್ಜನವೈರಿ ಸರ್ವಶಕ್ತ ಶ್ರೀಕೃಷ್ಣನ ಮೊರೆಹೋದರು .

  

ಸ ತಾನ್ ಸಮರ್ಚ್ಚ್ಯ ಮಾಧವಃ ಪ್ರದಾಯ ಚೋರುಮಾತ್ರಕಾಃ ।

ಯಯೌ ಚ ತೈಃ ಸಮನ್ವಿತೋ ವಧಾಯ ಸಾಲ್ವಪುತ್ರಯೋಃ ॥೧೭.೨೪೧॥

ತನ್ನ ಬಳಿಬಂದ ಮುನಿವರ್ಯರನ್ನು ಕೃಷ್ಣ ಆದರಿಸಿ ಗೌರವಿಸಿದ 

ಉತ್ತಮವಾದ ಬಟ್ಟೆ ಮುಂತಾದವುಗಳೆಲ್ಲವ ಕೊಟ್ಟು ಸತ್ಕರಿಸಿದ  ,

ಯತೀಶ್ವರರೆಲ್ಲರ ಒಡಗೂಡಿ ಸಾಲ್ವಪುತ್ರರ ವಧೆಗೆಂದು ತೆರಳಿದ .

 

ತಮತ್ರಿಜಂ ಹರಾತ್ಮಕಂ ಯತೋ ಹಿ ವೇದ ಮಾಗಧಃ ।

ತತೋsತ್ಯಜತ್ ಸ್ವಶಿಷ್ಯಕೌ ನಿಶಮ್ಯ ತತ್ಪ್ರತೀಪಕೌ ॥೧೭.೨೪೨॥

ಜರಾಸಂಧ (ಶೈವ ) ಮಹಾ ಶಿವಭಕ್ತನಾಗಿದ್ದ ,

ಅತ್ರಿಪುತ್ರ ದುರ್ವಾಸರ ಶಿವನೆಂದೇ ತಿಳಿದಿದ್ದ ,

ರುದ್ರವಿರೋಧಿ ಎಂದು ತನ್ನ ಶಿಷ್ಯರ ತ್ಯಜಿಸಿದ್ದ .

No comments:

Post a Comment

ಗೋ-ಕುಲ Go-Kula