Wednesday, 26 August 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 41 - 49

 ಅಭಿಷಿಕ್ತೇ ತದಾ ಕರ್ಣ್ಣೇಪ್ರಾಯಾದಧಿರಥಃ ಪಿತಾ ।

ಸರ್ವರಾಜಸದೋಮದ್ಧ್ಯೇ ವವನ್ದೇ ತಂ ವೃಷಾ ತದಾ ॥೧೮.೪೧॥

ಕರ್ಣ ಅಭಿಷಿಕ್ತನಾದಾಗ ತಂದೆ ಅಧಿರಥನ ಆಗಮನ ,

ಸಮಸ್ತ ರಾಜರ ಸಮ್ಮುಖದಿ ಕರ್ಣನಿಂದ ತಂದೆಗೆ ನಮನ.

 

ತುತುಷುಃ ಕರ್ಮ್ಮಣಾ ತಸ್ಯ ಸನ್ತಃ ಸರ್ವೇ ಸಮಾಗತಾಃ ।

ಭೀಮದುರ್ಯೋಧನೌ ತತ್ರ ಶಿಕ್ಷಾಸನ್ದರ್ಶನಚ್ಛಲಾತ್ ॥೧೮.೪೨॥

ಸಮಾದಾಯ ಗದೇ ಗುರ್ವೀ ಸಂರಮ್ಭಾದಭ್ಯುದೀಯತುಃ ।

ದೇವಾಸುರಮನುಷ್ಯಾದಿ ಜಗದೇತಚ್ಚರಾಚರಮ್ ॥೧೮.೪೩॥

ಸರ್ವಂ ತದಾ ದ್ವಿಧಾ ಭೂತಂ ಭೀಮದುರ್ಯ್ಯೋಧನಾಶ್ರಯಾತ್ ।

ದೇವಾ ದೇವಾನುಕೂಲಾಶ್ಚ ಭೀಮಮೇವ ಸಮಾಶ್ರಿತಾಃ ॥೧೮.೪೪ ॥

ಕರ್ಣನ ಈಥರದ ನಡತೆಯಿಂದ ಎಲ್ಲಾ ಸಜ್ಜನರಿಗೆ ಆಯಿತು ಆನಂದ ,

ಭೀಮ ದುರ್ಯೋಧನರೆದುರಾದರು ಪ್ರಾವೀಣ್ಯ ತೋರುವ ನೆಪದಿಂದ .

ತಮ್ಮ ಭಾರವಾದ ಗದೆಗಳಿಂದ ಕೂಡಿ ಪರಸ್ಪರ ಎದುರಾದರು ಕೋಪದಿಂದ .

ದೇವತೆಗಳು ಅಸುರರು ಮನುಷ್ಯರು ಮೊದಲಾದ ಎಲ್ಲರದಾಯಿತು ಎರಡು ಪಡೆ ,

ದೇವತೆಗಳು ದೇವತಾನುಕೂಲ ಗಂಧರ್ವ ಕಿಂಪುರುಷರ  ಗುಂಪು ಭೀಮನ ಕಡೆ .

 

ಅಸುರಾ ಆಸುರಾಶ್ಚೈವ ದುರ್ಯ್ಯೋಧನಸಮಾಶ್ರಯಾಃ ।

ದ್ವಿಧಾಭೂತಾ ಮಾನುಷಾಶ್ಚ ದೇವಾಸುರವಿಭೇದತಃ ॥೧೮.೪೫॥

ಅಸುರಾಸುರರೆಲ್ಲರೂ ನಿಂತರು ದುರ್ಯೋಧನನ ಪರ ,

ಮನುಷ್ಯರೂ ಇಬ್ಭಾಗವಾದರು ಅವರ ಸ್ವಭಾವದ ತೆರ.

 

ಜಯ ಭೀಮ ಮಹಾಬಾಹೋ ಜಯ ದುರ್ಯ್ಯೋಧನೇತಿ ಚ ।

ಹುಙ್ಕಾರಾಂಶ್ಚೈವ ಭಿಟ್ಕಾರಾಂಶ್ಚಕ್ರುರ್ದ್ದೇವಾಸುರಾ ಅಪಿ ॥೧೮.೪೬॥

ಭೀಮನಿಗೆ ಜಯವಾಗಲೆಂದು ಜಯಕಾರ ಹಾಕುವ ಒಂದು ಹಿಂಡು ,

ಹಾಗೇ ದುರ್ಯೋಧನನ ಪರವಾಗಿ ಹೂಂಕರಿಸುವ ಒಂದು ದಂಡು .

 

ದೃಷ್ಟ್ವಾ ಜಗತ್ ಸುಸಂರಬ್ಧಂ ದ್ರೋಣೋsಥ ದ್ವಿಜಸತ್ತಮಃ ।

ನೇದಂ ಜಗದ್ ವಿನಶ್ಯೇತ ಭೀಮದುರ್ಯ್ಯೋಧನಾಶ್ರಯಾತ್ ॥೧೮.೪೭॥

ಇತಿ ಪುತ್ರೇಣ ತೌ ವೀರೌ ನ್ಯವಾರಯದರಿನ್ದಮೌ ।

ಸ್ವಕೀಯಾಯಾಂಸ್ವಕೀಯಾಯಾಂ ಯೋಗ್ಯತಾಯಾಂ ನತು ಕ್ವಚಿತ್ ॥೧೮.೪೮॥ 

ಯುವಯೋಃ ಸಮ ಇತ್ಯುಕ್ತ್ವಾ ದ್ರೌಣಿರೇತೌ ನ್ಯವಾರಯತ್ ।

ದ್ರೋಣಾಜ್ಞಯಾ ವಾರಿತೌ ತೌ ಯಯತುಃ ಸ್ವಂಸ್ವಮಾಲಯಮ್ ॥೧೮.೪೯॥

ಹೀಗೆ ಉದ್ವೇಗದ ಸನ್ನಿವೇಶ ನಿರ್ಮಾಣವಾಗಲು ವಿಪ್ರಶ್ರೇಷ್ಠ ದ್ರೋಣಾಚಾರ್ಯ ,

ಲೋಕನಾಶ ತರಬಾರದೆಂದು ದುಡುಕಿನ ನಡೆಯ ಹೊಡೆದಾಟದ ಅಚಾತುರ್ಯ ,

ತಡೆಯುತ್ತಾರೆ ಇಬ್ಬರನೂ ಸಂಧಾನಕೆ ಕಳುಹಿಸಲ್ಪಟ್ಟ ಅವರಮಗ ಅಶ್ವತ್ಥಾಮಾಚಾರ್ಯ .

ನಿಮ್ನಿಮ್ಮ ಯೋಗ್ಯತೆಯಲಿ ನಿಮಗೆ ಯಾರೂ ಇಲ್ಲ ಸಮ,

ಸಮಾಧಾನಿಸಿ ಹೇಳುತ್ತ ಅವರಿಬ್ಬರ ತಡೆದ ಅಶ್ವತ್ಥಾಮ .

ದ್ರೋಣರ ಆಜ್ಞೆಗೊಳಗಾದ ಭೀಮ ದುರ್ಯೋಧನರು ,

ತಡೆಯಲ್ಪಟ್ಟವರಾಗಿ ತಮ್ಮ ಬಿಡಾರಗಳತ್ತ ತೆರಳಿದರು .

No comments:

Post a Comment

ಗೋ-ಕುಲ Go-Kula